ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರ ತಂಡ ದಿಢೀರಿ ಭೇಟಿ

| Published : Apr 05 2025, 12:49 AM IST

ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರ ತಂಡ ದಿಢೀರಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ ಜಿಲ್ಲಾಸ್ಪತ್ರೆಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ವೆಂಟಿಗೋಡಿ ಭೇಟಿ ನೀಡಿ ರೋಗಿಗಳಿಂದ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹಾಗೂ ಸದಸ್ಯ ಎಸ್.ಕೆ. ವಂಟಿಗೋಡಿ ನೇತೃತ್ವದ ತಂಡ ಶುಕ್ರವಾರ ಜಿಲ್ಲಾಸ್ಪತ್ರೆ, ಕಾರಾಗೃಹ ಹಾಗೂ ಸಾರಿಗೆ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.ಮೊದಲು ಜಿಲಾಸ್ಪತ್ರೆಗೆ ಆಗಮಿಸಿದ ತಂಡ ಆಸ್ಪತ್ರೆಯ ಸ್ಥಿತಿಗತಿ ಪರಿಶೀಲಿಸಿ ಚಿಕಿತ್ಸೆ ಬಗ್ಗೆ ಮಾಹಿತಿ ಕಲೆ ಹಾಕಿತು. ಆನಂತರ ಡೇ ಕೇರ್ ವಿಭಾಗ, ಐಪಿಎಚ್ ಲ್ಯಾಬ್, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ಇತರೆ ವಾರ್ಡ್‌ಗಳನ್ನು ಪರಿಶೀಲಿಸಿ, ರೋಗಿಗಳಿಂದ ಅಹವಾಲು ಆಲಿಸಿದರು.ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಕೊರತೆ, ಸ್ಕ್ಯಾನಿಂಗ್ ಯಂತ್ರಗಳು ಇಲ್ಲದಿರುವುದು ಜೊತೆಗೆ ಸೆಕ್ಯುರಿಟಿ ಇಲ್ಲದಿರುವ ಬಗ್ಗೆ ದೂರುಗಳು ಕೇಳಿ ಬಂದವು. ಕೂಡಲೇ ಜಿಲ್ಲಾಸ್ಪತ್ರೆಗೆ ಸೆಕ್ಯುರಿಟಿಗಳ ನೇಮಕ ಮಾಡುವಂತೆ ಹಾಗೂ ಸ್ಕ್ಯಾನಿಂಗ್ ಯಂತ್ರಗಳನ್ನು ಪೂರೈಸಲು ಕ್ರಮ ವಹಿಸುವಂತೆ ಅಧ್ಯಕ್ಷ ಶ್ಯಾಮ್ ಭಟ್ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.ಆನಂತರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ತಂಡವು ಬಂಧಿಖಾನೆ ನಿವಾಸಿಗಳೊಂದಿಗೆ ಮಾತನಾಡಿದರು. ಕಾರಾಗೃಹದ ಸ್ವಚ್ಛತೆ, ಅಲ್ಲಿ ನೀಡುವ ಊಟ-ಉಪಹಾರ, ಲೈಬ್ರರಿಯನ್ನು ಪರಿಶೀಲಿಸಿದರು. ಕೈದಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಉಪ ವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಕಾರಾಗೃಹದ ಅಧೀಕ್ಷಕ ರಾಕೇಶ್ ಕಾಂಬಳೆ, ಕಾರಾಗೃಹದ ಅಧಿಕಾರಿಗಳಿದ್ದರು.ನಗರದ ಕೆಂಪೇಗೌಡನ ದೊಡ್ಡಿ ಬಳಿ ಇರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತೆರಳಿದ ಟಿ. ಶ್ಯಾಮ್ ಭಟ್ ಹಾಗೂ ಎಸ್.ಕೆ. ವಂಟಿಗೋಡಿರವರು ಉಪಹಾರ ಗೃಹ, ಶೌಚಾಯಗಳಲ್ಲಿನ ಸ್ಪಚ್ಛತೆ, ಉಪಹಾರದ ಗುಣಮಟ್ಟ ಪರೀಕ್ಷಿಸಿದರು. ಅಲ್ಲದೆ, ವಿದ್ಯಾರ್ಥಿ ನಿಲಯದ ಕುರಿತು ಅಲ್ಲಿ ವಾಸವಿರುವ ವಿದ್ಯಾರ್ಥಿನಿಯರ ಅಭಿಪ್ರಾಯ ಸಂಗ್ರಹಿಸಿದರು.

ಬಳಿಕ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ತಂಡವು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಿರುವ ಮೂಲಸೌಕರ್ಯ ಪರಿಶೀಲಿಸಿದರು. ಪ್ರಯಾಣಿಕರಿಂದ ಅಹವಾಲು ಆಲಿಸಿ ಯಾವ ಮಾರ್ಗದಲ್ಲಿ ಅವಶ್ಯಕತೆ ಇದಿಯೋ ಅಲ್ಲಿಗೆ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಶ್ಯಾಮ್ ಭಟ್ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.

ರಾಮನಗರ ಐಜೂರು ಪೊಲೀಸ್ ಠಾಣೆಗೂ ಶ್ಯಾಮ್ ಭಟ್ ಮತ್ತು ಎಸ್.ಕೆ.ವಂಟಿಗೌಡಿ ಭೇಟಿ ನೀಡಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್ , ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ , ವೃತ್ತ ನಿರೀಕ್ಷಕ ಕೃಷ್ಣ ಮತ್ತಿತರರು ಹಾಜರಿದ್ದರು.------- 1 ಪೋಟೋ ಸಾಕು.4ಕೆಆರ್ ಎಂಎನ್ 1,2,3,4.ಜೆಪಿಜಿ1.ರಾಮನಗರ ಜಿಲ್ಲಾಸ್ಪತ್ರೆಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ವೆಂಟಿಗೋಡಿ ಭೇಟಿ ನೀಡಿ ರೋಗಿಗಳಿಂದ ಅಹವಾಲು ಆಲಿಸಿದರು.2.ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ವೆಂಟಿಗೋಡಿ ಭೇಟಿ ನೀಡಿ ಹೊರ ಬರುತ್ತಿರುವುದು.3.ರಾಮನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ವೆಂಟಿಗೋಡಿ ಭೇಟಿ ನೀಡಿ ಪ್ರಯಾಣಿಕರಿಂದ ಅಹವಾಲು ಆಲಿಸಿದರು.4.ರಾಮನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ವೆಂಟಿಗೋಡಿ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಅಹವಾಲು ಆಲಿಸಿದರು.--------