ಸಾರಾಂಶ
ಮುಂಡರಗಿ: ಲಿಂ. ಎಂ.ಬಿ. ಪೂಜಾರ ಗುರುಗಳು ವಿಜ್ಞಾನದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಭಾವ ಹೊಂದಿದ್ದರು. ಅವರೊಬ್ಬಶಿಕ್ಷಣಪ್ರೇಮಿಯಾಗಿದ್ದರು. ಅವರ ನಿವಾಸ ಸದಾ ಗುರುಕುಲದಂತೆ ಸದಾ ಶಿಷ್ಯಂದಿರಿಂದ ತುಂಬಿ ತುಳುಕುತ್ತಿತ್ತು ಎಂದು ಪ್ರೊ. ಎ.ವೈ. ನವಲಗುಂದ ತಿಳಿಸಿದರು.
ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ತೋಂಟದಾರ್ಯ ಕೋಟೆ ಪ್ರೌಡಶಾಲೆಯ ಆಶ್ರಯದಲ್ಲಿ ನಡೆದ ಲಿಂ. ಎಂ.ಬಿ. ಪೂಜಾರ ದತ್ತಿ ಉಪನ್ಯಾಸ ಹಾಗೂ ಡಿ.ಜಿ. ಹಿರೇಮಠ ವಿರಚಿತ ಭಾವದುಯ್ಯಾಲೆ ಭಾಗ 1 ಹಾಗೂ ಭಾಗ 2 ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಂ.ಬಿ. ಪೂಜಾರ ಅವರ ವ್ಯಕ್ತಿತ್ವ ಮಾನವಿಯ ಮೌಲ್ಯಗಳಿಂದ ಕೂಡಿತ್ತು. ಭುವನೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ಪ್ರೌಢಶಾಲೆ ಸ್ಥಾಪನೆಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸದಾ ಮಾನವೀಯ ಮೌಲ್ಯಗಳು, ಉತ್ತಮ ಸಂಸ್ಕಾರ ನೀಡುತ್ತಿದ್ದರು ಎಂದರು. ಡಾ. ಸಂಗಮೇಶ ಸವದತ್ತಿಮಠ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ಡಿ.ಜಿ. ಹಿರೇಮಠ ನನಗೆ ಬಾಲ್ಯದ ಸ್ನೇಹಿತರು. ಸದಾ ಉತ್ಸಾಹದಿಂದ ಇರುವ ವ್ಯಕ್ತಿತ್ವವುಳ್ಳವರು. ಅವರು ಸಾಹಿತಿಗಳಲ್ಲ, ಕವಿಗಳಲ್ಲ, ಆದರೂ ಕವನ ಬರೆಯಬೇಕು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು ಎನ್ನುವ ಸಾಹಿತ್ಯದುತ್ಸಾಹ ನಾನು ಅವರಲ್ಲಿ ಕಂಡಿದ್ದೆ ಎಂದರು.
ಲೇಖಕ ಡಿ.ಜಿ. ಹಿರೇಮಠ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಿ.ಬಿ. ಚನ್ನಳ್ಳಿ, ಎಸ್.ಬಿ.ಕೆ. ಗೌಡರ, ಪರಮೇಶ, ಎಸ್.ಎಂ. ಪೂಜಾರ, ಆರ್.ವೈ. ಸಿರಸಗಿ, ಆರ್.ಎಲ್. ಪೊಲೀಸಪಾಟೀಲ, ಪ್ರಹ್ಲಾದ ಹೊಸಮನಿ, ಆರ್.ಬಿ. ಹಕ್ಕಂಡಿ, ವೆಂಕಟೇಶ ಗುಗ್ಗರಿ, ಪಾಲಾಕ್ಷಿ ಗಣದಿನ್ನಿ, ಎಂ.ಐ. ಮುಲ್ಲಾ, ಕೃಷ್ಣಾ ಸಾವುಕಾರ, ಶ್ರೀನಿವಾಸ ಕಟ್ಟಿಮನಿ, ಎಸ್.ಸಿ. ಚಕ್ಕಡಿಮಠ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ತೆಗ್ಗಿನಮನಿ ಸ್ವಾಗತಿಸಿದರು. ಆರ್.ವಿ. ಅರ್ಕಸಾಲಿ ನಿರೂಪಿಸಿ, ವಂದಿಸಿದರು.
;Resize=(128,128))
;Resize=(128,128))