ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಪ್ರಕೃತಿ ವಿಕೋಪ ನಿರ್ವಹಣೆ ತರಬೇತಿ ಸಂಪನ್ನ

| Published : Feb 26 2024, 01:37 AM IST

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಪ್ರಕೃತಿ ವಿಕೋಪ ನಿರ್ವಹಣೆ ತರಬೇತಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಆರ್.ಎಸ್. ರಾಜ್ಯ ಹೊಣೆಗಾರರಾದ ಕ್ಯಾಪ್ಟನ್ ಅಮೀರ್ ಕುದ್ರೋಳಿ, ಸ್ವಯಂ ಸೇವಕರಿಗೆ ಪ್ರಾಕೃತಿಕ ವಿಕೋಪಗಳು ಮತ್ತು ಅದರ ನಿರ್ವಹಣೆಯ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕೆಮ್ಮಣ್ಣಿನ ಫರಂಗಿ ಕುದರಿನಲ್ಲಿ ಸ್ವಯಂ ಸೇವಕರಿಗಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಎಚ್.ಆರ್.ಎಸ್. ರಾಜ್ಯ ಹೊಣೆಗಾರರಾದ ಕ್ಯಾಪ್ಟನ್ ಅಮೀರ್ ಕುದ್ರೋಳಿ, ಸ್ವಯಂ ಸೇವಕರಿಗೆ ಪ್ರಾಕೃತಿಕ ವಿಕೋಪಗಳು ಮತ್ತು ಅದರ ನಿರ್ವಹಣೆಯ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ನಂತರ ಪ್ರಾಯೋಗಿಕವಾಗಿ ಸ್ವಯಂ ಸೇವಕರಿಗೆ ಪ್ರಥಮ ಚಿಕಿತ್ಸೆ, ತುರ್ತು ಸಂದರ್ಭದಲ್ಲಿ ಬಳಸಬಹುದಾದ ನೋಟ್, ಅಪಘಾತ ನಡೆದಂತಹ ಸಂದರ್ಭದಲ್ಲಿ ಗಾಯಾಳುಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸೂಕ್ತ ಸ್ಪಂದನೆ ನೀಡುವ ವಿವಿಧ ಮಾರ್ಗೋಪಾಯಗಳನ್ನು ವಿವರಿಸಿದರು. ಪ್ರತಿಯೊಂದು ಮಸೀದಿಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಇಟ್ಟುಕೊಳ್ಳಬೇಕು‌. ಇದರಿಂದ ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದು ಸಲಹೆ ನೀಡಿದರು.ನಂತರ ವಿವಿಧ ದೈಹಿಕ ಕಸರತ್ತುಗಳನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ಈಜು, ಆಟೋಟ, ಪ್ರಾಕೃತಿಕ ವಿಕೋಪ, ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಎಚ್.ಆರ್.ಎಸ್. ಜಿಲ್ಲಾ ಅಧ್ಯಕ್ಷ ಬಿಲಾಲ್ ಮಲ್ಪೆ, ಹೂಡೆಯ ಹೊಣೆಗಾರ ಅಲ್ತಾಫ್ ನಕ್ವಾ, ಮಲ್ಪೆಯ ಗ್ರೂಪ್ ಲೀಡರ್ ಝುಬೇರ್ ಮಲ್ಪೆ, ಉಡುಪಿಯ ಗ್ರೂಪ್ ಲೀಡರ್ ಶಾರೂಕ್ ತೀರ್ಥಹಳ್ಳಿ, ಕಾಪು ಗ್ರೂಪ್ ಲೀಡರ್ ಮುಹಮ್ಮದ್ ಅಲಿ ಕಾಪು ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ಕಾಪು ಅಧ್ಯಕ್ಷರಾದ ಅನ್ವರ್ ಅಲಿ ಕಾಪು, ತರಬೇತುದಾರರಾದ ಅಮೀರ್ ಜಾನ್ ತೀರ್ಥಹಳ್ಳಿ, ಸುಜತ್ ಮಂಗಳೂರು, ತೌಫೀಕ್ ಮಂಗಳೂರು ಕೆಮ್ಮಣ್ಣ ಗ್ರಾಮ ಪಂಚಾಯತ್ ಸದಸ್ಯರಾದ ಇದ್ರೀಸ್ ಹೂಡೆ, ಬೈಂದೂರಿನ ಜಮಿಯತ್ ಉಲ್ ಫಲಾಹ್‌ದ ಹೊಣೆಗಾರರಾದ ಫಯಾಝ್ ಬೈಂದೂರು ಉಪಸ್ಥಿತರಿದ್ದರು.