ಸಾರಾಂಶ
ರಾಮನಾಥಪುರ: ಪಟ್ಟಣದ ದೇವಾಲಯದ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದ ಹುಂಡಿ ದೋಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.ಉತ್ತರಾಧಿ ಮಠದ ಮುಂದಿನ ಬಾಗಿಲ ಬೀಗ ಮತ್ತು ಡೋರ್ ಲಾಕ್ ತೆಗೆಯಲು ಬಾಗಿಲು ಮೀಟಿ ಮುರಿದು ಒಳ ನುಗ್ಗಿರುವ ಕಳ್ಳರು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇವಾಲಯದ ವ್ಯವಸ್ಥಾಪಕರು ಸೋಮವಾರ ಬೆಳಿಗ್ಗೆ ಪೂಜೆ ಮಾಡಲು ಬಂದ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಹುಂಡಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯವು ಪಕ್ಕದ ಮನೆಯವರಾದ ವೇದಬ್ರಹ್ಮ ಪ್ರದೀಪ್ ಅವರ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದ್ದು, ಒಬ್ನ ಕಳ್ಳ ಮಾತ್ರ ಕಳ್ಳತನದಲ್ಲಿ ಪಾಲೊಂಡಿರುವುದು ಹಾಗೂ ಒಬ್ಬ ಹುಂಡಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
3 ದೇವಾಲಯದಲ್ಲಿ ಕಳ್ಳತನ:ಕೆಲ ದಿನಗಳ ಹಿಂದೆ ರಾಮನಾಥಪುರ ಹೋಬಳಿಯ ಕಾವಲುಅಮ್ಮ ದೇವಾಲಯದ ಬಾಗಿಲ ಮುರಿದು ಹುಂಡಿ ಕಳವು ಮಾಡಲಾಗಿತ್ತು. ಶಿರದನಹಳ್ಳಿ ಶ್ರೀ ಶನೇಶ್ವರಸ್ವಾಮೀ ದೇವಾಲಯದ ಬಾಗಿಲು ಮುರಿದು ಹುಂಡಿ ಕಳವು, ಮಲ್ಲಿರಾಜಪಟ್ಟಣ ಗ್ರಾಮದ ಅಂಜನೇಯಸ್ವಾಮಿ ದೇವಾಲಯದ ಬೀಗ ಮುರಿದು ಹುಂಡಿ ಸಾಲು ಸಾಲು ಕಳವು ನಡೆದಿವೆ. ಇದರಿಂದ ಸ್ಥಳೀಯ ಜನತೆ ಭಯಬೀತರಾಗಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ ಪತ್ತೆಹಚ್ಚಲು ಕ್ತಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.