ಸಾರಾಂಶ
ಹಲಗೂರು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಪೋಷಕರ ಹಸಿವು ನಿವಾರಣೆ ಮಾಡಲು, ದಾನಿಗಳ ಸಹಕಾರದಿಂದ ಪ್ರತಿನಿತ್ಯ ಊಟ ನೀಡಲಾಗುತ್ತಿದೆ. ದಾನಿಗಳ ಹೆಚ್ಚಳದಿಂದ ದಳವಾಯಿ ಕೋಡಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ಇಂದಿನಿಂದ ಪ್ರತಿ ಗುರುವಾರ ಹಸಿವು ನಿವಾರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಹಳ್ಳಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಮತ್ತು ಪಾಲಕರಿಗೆ ಹಸಿವು ನಿವಾರಣೆ ವರದಾನವಾಗಲಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉದಯ್ ಕುಮಾರ್ ತಿಳಿಸಿದರು.ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಹಲಗೂರು ವತಿಯಿಂದ ಆಯೋಜಿಸಿದ್ದ ಹಸಿವು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಿಎಸ್ಐ ಲೋಕೇಶ ಮಾತನಾಡಿ, ಲಯನ್ಸ್ ಕ್ಲಬ್ ನ ಸಮಾಜ ಮುಖಿ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ. ಕ್ಲಬ್ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಆಯೋಜಿಸುವ ಶಕ್ತಿ ದೊರಕಲಿ ಎಂದರು.ಕ್ಲಬ್ ಸದಸ್ಯ ಎ.ಎಸ್.ದೇವರಾಜು ಮಾತನಾಡಿ, ಹಲಗೂರು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಪೋಷಕರ ಹಸಿವು ನಿವಾರಣೆ ಮಾಡಲು, ದಾನಿಗಳ ಸಹಕಾರದಿಂದ ಪ್ರತಿನಿತ್ಯ ಊಟ ನೀಡಲಾಗುತ್ತಿದೆ. ದಾನಿಗಳ ಹೆಚ್ಚಳದಿಂದ ದಳವಾಯಿ ಕೋಡಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ಇಂದಿನಿಂದ ಪ್ರತಿ ಗುರುವಾರ ಹಸಿವು ನಿವಾರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಪ್ರಾಯೋಜಕರಾದ ಗುಣೇಶ್ ಮಾತನಾಡಿ, ನಾನು ಲಯನ್ಸ್ ಕ್ಲಬ್ ಸದಸ್ಯನಾಗಿ ಶ್ರೀ ರಾಘವೇಂದ್ರ ಸ್ವಾಮಿಜಿರವರ ಹುಟ್ಟುಹಬ್ಬದ ಅಂಗವಾಗಿ ಹಲಗೂರು ಹಾಗೂ ದಳವಾಯಿ ಕೋಡಿಹಳ್ಳಿದಲ್ಲಿ ಅನ್ನದಾಸೋಹ ನಡೆಸಲಾಗುತ್ತಿದೆ ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಪಾರ್ವತಿ ಸಂಪತ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್, ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಚಿ ಶಿವರಾಜು ಪದಾಧಿಕಾರಿಗಳಾದ ಎ.ಎಸ್.ನಾಗೇಶ್, ಡಾ.ಷಂಷುದ್ದೀನ್, ಎಚ್.ಆರ್.ಪದ್ಮನಾಭ್, ಎ.ಎಸ್.ದೇವರಾಜು, ಪ್ರವೀಣ್, ಗ್ರಾಪಂ ಸದಸ್ಯರಾದ ಎಂ.ರವಿ, ಮುಖಂಡರಾದ ಬಾಳೆಹೊನ್ನಿಗ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.