ಕುರುಬ ಸಮಾಜ ಎಸ್ಟಿ ಸೇರ್ಪಡೆ ವಿರೋಧಿಸಿ ಉಪವಾಸ ಸತ್ಯಾಗ್ರಹ

| Published : Sep 30 2025, 12:00 AM IST

ಸಾರಾಂಶ

ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹುನ್ನಾರ ನಡೆದಿದ್ದು ಇದನ್ನು ವಿರೋಧಿಸಿ ನಾಯಕ ಸಮಾಜದ ಮುಖಂಡ ಅಗರ ರಾಜು ಸಮಾಜದ ಭಾಂಧವರೊಡಗೂಡಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಚಾಮರಾಜನಗರ: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹುನ್ನಾರ ನಡೆದಿದ್ದು ಇದನ್ನು ವಿರೋಧಿಸಿ ನಾಯಕ ಸಮಾಜದ ಮುಖಂಡ ಅಗರ ರಾಜು ಸಮಾಜದ ಭಾಂಧವರೊಡಗೂಡಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಾವನೂರು ವರದಿಯಲ್ಲಿ ಕುರುಬ ಸಮುದಾಯದವರು ಮುಂದುವರಿದ ಜನಾಂಗವೆಂದು ಪರಿಗಣಿಸಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಈ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕಾವಾಗಿ ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದೆ, ಮುಖ್ಯಮಂತ್ರಿಗಳಾಗಿದ್ದಾರೆ. ದೊಡ್ಡ ದೊಡ್ಡ ಉದ್ದಿಮೆದಾರರಿದ್ದಾರೆ, ಜಮೀನ್ದಾರಾಗಿದ್ದಾರೆ, ಆದ್ದರಿಂದ ಇವರನ್ನು ಎಸ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿದರು.

ಈಗಾಗಲೇ ಕೆಲವು ಪಂಗಡಗಳು, ಜೇನು ಕುರುಬ, ಬೆಟ್ಟ ಕುರುಬ, ಕಾಡುಕುರುವ ಪಂಗಡವನ್ನು ಎಸ್ಟಿಗೆ ಸೇರಿಸಲಾಗಿದೆ. ಮುಂದಿನ ಚುನಾವಣೆಗಳ ದೃಷ್ಟಿಯಿಟ್ಟುಕೊಂಡು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹನ್ನಾರ ನಡೆಯುತ್ತಿದ್ದು ಇದು ಖಂಡನೀಯ ಎಂದರು.

ಇಂದು ಸಾಂಕೇತಿಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ ಈ ಹುನ್ನಾರ ಕೈಬಿಡದಿದ್ದರೆ ಮುಂದೆ ದೊಡ್ಡಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಸತ್ಯಾಗ್ರಹದಲ್ಲಿ ಮುಖಂಡರಾದ ವೆಂಕಟಚಲಾ, ಪರಶಿವಮೂರ್ತಿ, ದೇವರಾಜು, ನಂಜುಂಡನಾಯಕ ಇತರರು ಇದ್ದರು.