ಸಾರಾಂಶ
ಗಂಡ ಹೆಂಡತಿಯ ಮಧ್ಯೆ ಜಗಳ ನಡೆದು ರೊಚ್ಚಿಗೆದ್ದ ಪತಿ ಪತ್ನಿಯ ಅರ್ಧ ತಲೆ ಬೋಳಿಸಿ ದುಷ್ಕೃತ್ಯ ಮೆರೆದ ಘಟನೆ ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಗಂಡ ಹೆಂಡತಿಯ ಮಧ್ಯೆ ಜಗಳ ನಡೆದು ರೊಚ್ಚಿಗೆದ್ದ ಪತಿ ಪತ್ನಿಯ ಅರ್ಧ ತಲೆ ಬೋಳಿಸಿ ದುಷ್ಕೃತ್ಯ ಮೆರೆದ ಘಟನೆ ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ನಡೆದಿದೆ. ಬಸವರಾಜ್ ಪ್ರತಿದಿನ ಕುಡಿದು ಪತ್ನಿಯ ಜೊತೆಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಗಂಡನ ಮನೆ ತೊರೆದು ತವರು ಮನೆಯಲ್ಲಿದ್ದಳು. ಸಖಿ ತಂಡದ ಕೌನ್ಸೆಲಿಂಗ್ ಬಳಿಕ ಎರಡು ತಿಂಗಳ ಹಿಂದೆ ಗಂಡನ ಮನೆಗೆ ಬಂದಿದ್ದ ಶ್ರೀದೇವಿ ಜೊತೆಗೆ ಶನಿವಾರ ರಾತ್ರಿಯೂ ಗಲಾಟೆ ಮಾಡಿದ್ದು, ಸಿಟ್ಟಿಗೆದ್ದು ರಾತ್ರಿ ಅರ್ಧ ತಲೆ ಬೋಳಿಸಿದ್ದಾನೆ. ಮಹಿಳೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.