ಸಾರಾಂಶ
186ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆಯನ್ನು ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪುಷ್ಪಗಿರಿ ಛಾಯಾಗ್ರಾಹಕರ ಸಂಘ, ಸೋಮವಾರಪೇಟೆ ಇವರ ವತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.ಸಂಘದ ಅಧ್ಯಕ್ಷ ಸಾಲೊಮನ್ ಡೇವಿಡ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಕ್ಕಳಿಗೆ ಸ್ವೆಟರ್, ಲೇಖನ ಸಾಮಗ್ರಿಗಳು, ಟೈ ಬೆಲ್ಟ್ ಮತ್ತು ವಾಟರ್ ಬಾಟಲ್ ಗಳನ್ನು ವಿತರಿಸಲಾಯಿತು.ಸಂಘದ ಗೌರವಾಧ್ಯಕ್ಷ ಜನಾರ್ಧನ್, ಕಾರ್ಯದರ್ಶಿ ಅಭಿಲಾಷ್, ಉಪಾಧ್ಯಕ್ಷ ದೀಪು, ಖಜಾಂಚಿ ಅರುಣ್, ಜಿಲ್ಲಾ ಸಂಘದ ನಿರ್ದೇಶಕ ಹರೀಶ್ ಕೋಟ್ಯನ್, ನಿರ್ದೇಶಕರಾದ ನವೀನ್, ಸಲೀ, ಮಂಜುನಾಥ್, ರಾಜು, ಸುಬ್ರಮಣಿ, ಮುಖ್ಯ ಶಿಕ್ಷಕಿ ಕವಿತ ಇದ್ದರು.