ಪತಿ ಸಾವಿನಿಂದ ಕುಟುಂಬ ನಿರ್ವಹಣೆ ಸವಾಲಾಗುತ್ತಿರುವ ಹಿನ್ನೆಲೆ ಪತ್ನಿಗೆ ₹೩೦ ಸಾವಿರ ಮರಣೋತ್ತರ ನಿಧಿಯನ್ನು ಸ್ಥಳೀಯ ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪತಿ ಸಾವಿನಿಂದ ಕುಟುಂಬ ನಿರ್ವಹಣೆ ಸವಾಲಾಗುತ್ತಿರುವ ಹಿನ್ನೆಲೆ ಪತ್ನಿಗೆ ₹೩೦ ಸಾವಿರ ಮರಣೋತ್ತರ ನಿಧಿಯನ್ನು ಸ್ಥಳೀಯ ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ವಿತರಿಸಲಾಯಿತು.

ವಕೀಲ, ಸಲಹಾ ಸಮಿತಿ ನಿರ್ದೇಶಕ ವೆಂಕಟೇಶ ನಿಂಗಸಾನಿ ಮಾತನಾಡಿ, ಸಂಘದ ಸದಸ್ಯತ್ವ ಹೊಂದಿದ ಕುಟುಂಬಗಳ ಆರ್ಥಿಕ ಸಂಕಷ್ಟ ನಿವಾರಣೆಗೆ ಪ್ರತಿ ವರ್ಷ ₹೩ ರಿಂದ ₹೪ ಕೋಟಿ ಮರಣೋತ್ತರ ನಿಧಿ ಮೂಲಕ ಅನೇಕ ಕುಟುಂಬಗಳಿಗೆ ವಿತರಿಸಲಾಗುತ್ತಿದ್ದು, ಇದು ಸದಸ್ಯರ ಕುಟುಂಬಗಳಿಗೆ ಆಸರೆಯಾಗಿದೆ ಎಂದರು.

ಸೂರಯ್ಯ ಹಾಜಿಲಾಲ ಮುಜಾವರ ಅಮೂಲ್ಯ ಸಾಲ ಪಡೆದಿದ್ದರು. ಅವರ ಪತಿ ಮರಣೋತ್ತರ ನಿಧಿಯಾಗಿ ₹೩೦ ಸಾವಿರ ಚೆಕ್ ವಿತರಿಸಲಾಯಿತು.

ಸಲಹಾ ಸಮಿತಿ ಅಧ್ಯಕ್ಷ ಸುನೀಲ್‌ಕುಮಾರ ಗುಂಡಿ, ಬದ್ರಿನಾರಾಯಣ ಭಟ್ಟಡ, ಸಿದ್ದು ಗೌಡಪ್ಪನವರ, ಮೋಹನ ಪತ್ತಾರ, ಶ್ರೀನಿವಾಸ ಭದ್ರನ್ನವರ, ಸಿದ್ದು ಅಸ್ಕಿ, ಶಿವಾನಂದ ಗಾಯಕವಾಡ, ವ್ಯವಸ್ಥಾಪಕ ಆನಂದ ಕುಂಬಾರ, ಪಿ.ಆರ್. ಪಾಟೀಲ, ಶಂಭುಲಿಂಗ ಗುಣಕಿ, ಸಿದ್ದು ಎಕ್ಕೇಲಿ, ಸುನೀಲ ಕೊಣ್ಣೂರ ಅನೇಕರಿದ್ದರು.