ಸಾರಾಂಶ
ದೇವರಹಿಪ್ಪರಗಿ: ಗಂಡನೇ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಮಕ್ಕಳ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಅಂಜುಮನ್ ಓಣಿಯ ನಿವಾಸಿ ಮಹ್ಮದಯಾಸೀನ್ ಫಕೀರ್ ಅಮೀನ್ ದರ್ಗಾ (38) ಕೊಲೆ ಮಾಡಿರುವ ಪತಿ.
ದೇವರಹಿಪ್ಪರಗಿ: ಗಂಡನೇ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಮಕ್ಕಳ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಅಂಜುಮನ್ ಓಣಿಯ ನಿವಾಸಿ ಮಹ್ಮದಯಾಸೀನ್ ಫಕೀರ್ ಅಮೀನ್ ದರ್ಗಾ (38) ಕೊಲೆ ಮಾಡಿರುವ ಪತಿ. ಈತನ ಪತ್ನಿ ನಾಜೀನ್ಮ ಮಹ್ಮದಯಾಸೀನ್ ದರ್ಗಾ(30) ಪತ್ನಿ ಹತ್ಯೆಯಾದವಳು. ಈಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ಜಗಳ ತೆಗೆದಿದ್ದು, ಈ ವೇಳೆ ಹೆಂಡತಿಯ ಕುತ್ತಿಗೆಯನ್ನು ಹರಿತ ಆಯುಧದಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಅಲ್ಲಮಾ ಹುಸೇನಬಾಷಾ ಪಿಂಜಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕೃತ್ಯದ ಬಳಿಕ ಮಹ್ಮದಯಾಸೀನ್ ಇಂಡಿ ಪಟ್ಟಣದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ವಿಜಯಪುರ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಗ್ರಾಮೀಣ ಡಿಎಸ್ಪಿ ಜಿ.ಎಚ್.ತಳಕಟ್ಟಿ, ಸಿಪಿಐ, ಪಿಎಸ್ಐ ಬಸವರಾಜ ತಿಪ್ಪರಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.