ಸಾರಾಂಶ
ಗೋಕರ್ಣ: ಪತಿವ್ರತೆಯರು ಯೋಗಿಗಳಷ್ಟೇ ಪವಿತ್ರರು. ಸ್ತ್ರೀಯರ ಸರ್ವೋತ್ಕಷ್ಟ ಸಾಧನಾ ಮಾರ್ಗ ಅದು. ಪತಿ ಎಂಥವನೇ ಆಗಿದ್ದರೂ, ಶ್ರೀಪತಿಯನ್ನೇ ಕಾಣುವ ಸ್ತ್ರೀಯರು ಪರಮ ಪವಿತ್ರರು ಎಂದು ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಗುರುವಾರ ಜೀವಯಾನ ಮಾಲಿಕೆಯಲ್ಲಿ ಯಮನನ್ನು ಗೆದ್ದವರುಂಟೇ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿ, ಯಮನ ದರ್ಶನ ಮಾಡಿ, ಆತನೊಂದಿಗೆ ಸಂವಾದ ನಡೆಸುವ ಯೋಗವೂ ಮಹಾ ಪತಿವ್ರತೆಯಾದ ಸಾವಿತ್ರಿಗೆ ಕೂಡಿ ಬಂತು. ಕೊರಳಿಗೆ ಯಮಪಾಶ ಬಿದ್ದೂ ಬದುಕಿದ ಅಪರೂಪದ ಪಾತ್ರ ಮಾರ್ಕಾಂಡೇಯ. ಅವರು ಧರ್ಮರಾಯನಿಗೆ ಹೇಳಿದ ಕಥೆ ಎಂಥವರ ಮನವನ್ನೂ ಕಲುಕುವಂಥದ್ದು ಸತ್ಯವಾನ್ ಸಾವಿತ್ರಿಯ ದೃಷ್ಟಾಂತವನ್ನು ಬಣ್ಣಿಸಿದರು.ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ಬೆಂಗಳೂರು ಮಂಡಲ ಉಪಾಧ್ಯಕ್ಷ ಎನ್.ಜಿ. ಭಾಗ್ವತ್, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು.