ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ನಾನೊಬ್ಬ ಡಾಕ್ಟರ್. ನಾನು ಎಲ್ಲಾ ಸಮುದಾಯವನ್ನು ಪ್ರತಿನಿಧಿಸುತ್ತೇನೆ. ಹಾಗಾಗಿ ನನಗೆ ಜಾತಿನೇ ಇಲ್ಲ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಒಕ್ಕಲಿಗನಾಗಿ ಜಾತಿಗಣತಿ ವಿಚಾರದಲ್ಲಿ ಜಾಗೃತಿ ಮೂಡಿಸಲು ಕರೆಸಿದ್ದರು. ಸಭೆಯಲ್ಲಿ ನಡೆದ ವಿಚಾರವನ್ನು ಹಾಗೂ ನ್ಯೂನ್ಯತೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು. ಜಾತಿ ಗಣತಿ ಸಮೀಕ್ಷೆ ವಿಚಾರದಲ್ಲಿ ಪಿಐಎಲ್ ಹಾಕಿರುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದರು.
ಕಾಂತರಾಜ್ ಅರಸ್ ಆಯೋಗದ ವರದಿ ಗೊಂದಲದಿಂದ ಎರಡನೇ ಬಾರಿಗೆ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ಯಾವುದೇ ಗೊಂದಲವಿಲ್ಲದೆ ಜನರ ತೀರ್ಮಾನಗಳನ್ನು ತೆಗೆದುಕೊಳ್ಳೋದು ಸರ್ಕಾರದ ಕರ್ತವ್ಯ. ಯಾವುದೇ ನೂನ್ಯತೆಗಳಿದ್ದರೆ ಸರ್ಕಾರ ಅದನ್ನು ತೆಗೆದುಕೊಂಡು ಸರಿ ಮಾಡಲಿದೆ.ಈ ವಿಚಾರವನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮರ್ಥವಾಗಿ ಎದುರಿಸಲಿದ್ದಾರೆ ಎಂದರು. ಎಲ್ಲಾ ಜಾತಿ, ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಮಾಡುತ್ತೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಯಾರು ಹಿಂದುಳಿದಿದ್ದಾರೆ ಅನ್ನೋದನ್ನು ಗುರುತಿಸುವುದು ಎಂದ ಅವರು ಇದನ್ನು ಮಾಡುತ್ತಿರುವುದು ಜಾತಿ ಜಾತಿ ನಡುವೆ ಕಲಾ ತರುತ್ತಿದ್ದಾರೆ ಅನ್ನೋದು ಸರಿಯಲ್ಲ ಎಂದರು.ಜಾತಿ ಕಾಲಂನಲ್ಲಿ ಕ್ರಿಶ್ಚಿಯನ್ ಪದಳ ಬಳಕೆ ವಿಚಾರವನ್ನು ಗಮನಿಸಿದ್ದೇನೆ. ಕಾಂತರಾಜು ವರದಿಯಲ್ಲೇ ಬಂದಿರೋದನ್ನು ಪುನರಾರ್ವತನೆ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ಎಲ್ಲರೂ ಇದನ್ನು ವಿರೋಧ ಮಾಡಿದರೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಇದೇ ಶನಿವಾರ ನಡೆಯುವ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಶ್ರೀಗಳಿಗೆ ಮನಕ್ಕೆ ತರುತ್ತೇವೆ ಎಂದರು.
6 ಸಾವಿರ ಮತ ಡಿಲೀಟ್...ರಾಹುಲ್ ಗಾಂಧಿ ಆಳಂದದಲ್ಲಿ ಮತಗಳ್ಳತನ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಳಂದದಲ್ಲಿ ಸುಮಾರು 6,500 ಮತಗಳನ್ನ ಡಿಲೀಟ್ ಮಾಡಿದ್ದಾರೆ. ಇದು ನಿಮಗೆ ಯಾರಿಗೂ ಅರ್ಥವಾಗುತ್ತಿಲ್ಲ. ಎಐ ಬಳಸಿಕೊಂಡು ನನ್ನ ಹೆಸರನ್ನು ನನ್ನ ಪಕ್ಕದಲ್ಲಿರುವ ಶ್ರೀನಿವಾಸ್ ರ ಬಳಸಿಕೊಂಡು ಡಾ. ರಂಗನಾಥ್ ಈ ಮನೆಯಲ್ಲಿ ಇಲ್ಲ ಎಂದು ಡಿಲಿಟ್ ಮಾಡಿದ್ದಾರೆ. ನಾವು ಶ್ರೀನಿವಾಸರನ್ನು ಕೇಳಿದರೇ ನಾನು ದೂರು ಕೊಟ್ಟಿಲ್ಲ ಎನ್ನುತ್ತಾರೆ. ಈ ಥರ 6 ಸಾವಿರ ಮತಗಳನ್ನು ಡಿಲಿಟ್ ಮಾಡಿರೋದು ಮತಗಳ್ಳತನವಲ್ಲದೇ ಬೇರೆ ಏನು..? ಎಂದು ಪ್ರಶ್ನಿಸಿದರು.
ಒಂದೊಂದು ಕ್ಷೇತ್ರದಲ್ಲಿ ನಿರ್ಧಾರ ಆಗುವುದುದು ಐದರಿಂದ ಆರು ಸಾವಿರ ಮತಗಳಿಂದ. ಯಾವ ರೀತಿ ಬಿಜೆಪಿ ಪಕ್ಷದವರು, ಚುನಾವಣಾ ಆಯೋಗ ಉಪಯೋಗಿಸಿಕೊಂಡು ಇದನ್ನು ಮಾಡುತ್ತಿದ್ದಾರೆಂದು ಎಳೆಎಳೆಯಾಗಿ ರಾಹುಲ್ ಗಾಂಧಿಯವರು ತೋರಿಸಿದ್ದಾರೆ .ರಾಹುಲ್ ಗಾಂಧಿಯವರು ಆರೋಪ ಮಾಡುತ್ತಿದ್ದರೂ ಸಹ ಚುನಾವಣಾ ಆಯೋಗ ಯಾಕೆ ಉತ್ತರ ಹೇಳುತ್ತಿಲ್ಲ. ಯಾಕೆ ಪ್ರಧಾನ ಮಂತ್ರಿ ಉತ್ತರ ಹೇಳುತ್ತಿಲ್ಲ. ನಾವು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಹೇಳಬೇಕಲ್ಲವಾ ಎಂದರು. ನಾವೆಲ್ಲರೂ ಈ ವಿಚಾರದಲ್ಲಿ ಹೆಚ್ಚಿನ ಒತ್ತಡ ಹಾಕಲಿಕ್ಕೆ ತಯಾರಾಗುತ್ತಿದ್ದೇವೆ ಎಂದರು.