ನಾನು ಕೂಡಾ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ

| Published : Feb 08 2024, 01:32 AM IST

ಸಾರಾಂಶ

ಬರುವ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸಂಸದ ಗದ್ದಿಗೌಡರಗೆ ಟಿಕೆಟ್ ತಪ್ಪಿದರೆ ನನಗೆ ನೀಡಿಬೇಕೆಂದು ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ವೀರಣ್ಣ ಹಳೇಗೌಡರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬರುವ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸಂಸದ ಗದ್ದಿಗೌಡರಗೆ ಟಿಕೆಟ್ ತಪ್ಪಿದರೆ ನನಗೆ ನೀಡಿಬೇಕೆಂದು ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ವೀರಣ್ಣ ಹಳೇಗೌಡರ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೂಡಾ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅವರಿಗೆ ಟಿಕೆಟ್ ತಪ್ಪಿದಲ್ಲಿ ನನಗೆ ಟಿಕೆಟ್ ನೀಡಬೇಕು ಎಂದು ಮುಖಂಡರಲ್ಲಿ ಒತ್ತಾಯಿಸಿದ್ದೇನೆ. ಈಗಾಗಲೇ ಟಿಕೆಟ್‌ಗಾಗಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರನ್ನು ಭೇಯಾಗಿ ನನ್ನ ಸ್ಪರ್ಧೆ ವಿಚಾರ ತಿಳಿಸಿದ್ದು, ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹಾಗೂ ರಾಜ್ಯ ದ ನಾಯಕರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಮನವಿ ಮಾಡಿಕೊಂಡಿದ್ದೇನೆ. ನಾಯಕರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿದ್ದು, ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡುತ್ತಾ ಹಿಂದುಳಿದ ವರ್ಗಗಳ ಏಳ್ಗೆಗಾಗಿ ದುಡಿದಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದ್ದೇನೆ. ಪಕ್ಷವು ನನ್ನನ್ನು ಗುರುತಿಸಿ ಟಿಕೆಟ್ ನೀಡಿದರೆ ಪಕ್ಷಕ್ಕೆ ಒಳ್ಳೆಯದ್ದು ಆಗುತ್ತದೆ. ಕುರುಬ ಸಮಾಜದವನಾದ ನಾನು ನಾಲ್ಕು ಲಕ್ಷ ಜನಸಂಖ್ಯೆ ನಮ್ಮ ಸಮುದಾಯವರು ಹೊಂದಿದೆ. ಎಲ್ಲ ಜಾತಿ, ಜನಾಂಗದ ವರೊಂದಿಗೆ ಉತ್ತಮ ಬಾಂ ಧವ್ಯ ಹೊಂದಿದ್ದು ನನಗೆ ಟಿಕೆ ಟ್ ಕೊಟ್ಟಿದ್ದೆ ಆದರೆ ಗೆಲುವು ಖಚಿತ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಗ ಮೇಶ ಹೂಗಾರ, ಶೇಖಪ್ಪ ಚವ್ಹಾಣ್, ಸುಭಾಷ ರಾಮ ವಾಡಗಿ, ಕೋನಪ್ಪ ಆಡಗಲ್, ಚಂದ್ರಶೇಖರ ಕಲ್ಲವಡ್ಡರ ಇದ್ದರು.