ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪೂರ
ಮುಧೋಳ ಮತಕ್ಷೇತ್ರದ ಜನತೆ ಹಗಲಿರುಳು ಶ್ರಮಿಸಿ ನನ್ನನ್ನು ಶಾಸಕನಾಗಿ, ಮಂತ್ರಿಯನ್ನಾಗಿ ಮಾಡಿದ್ದಾರೆ. ತಮ್ಮ ಈ ನಿಷ್ಕಲ್ಮಶವಾದ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಪಟ್ಟಣದ ಲಕ್ಷಾನಟ್ಟಿ ಭೀಮನಗೌಡ ಪಾಟೀಲ ಪರಿವಾರದಿಂದ ಅವರ ತೋಟದ ಮನೆಯಲ್ಲಿ ಹಮ್ಮಿಕೊಂಡ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಗದ ಜನತೆ ನನ್ನ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದೀರಿ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಈಗಾಗಲೇ ಎರಡು ಹೈಸ್ಕೂಲ್‌ಗಳನ್ನು ತರಲಾಗಿದೆ. ಅತೀ ಶೀಘ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡುತ್ತೇನೆ. ರೈತರಿಗೆ ಉಪಕಾಲುವೆಗಳನ್ನು ನಿರ್ಮಿಸಲು ₹೧೨೦ ಕೋಟಿ ಮಂಜೂರು ಮಾಡಿಸುತ್ತೇನೆ. ಇಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡುವಂತಹ ಕೆಲಸ ಮಾಡುತ್ತೇನೆ. ಹೀಗೆ ಬಹಳಷ್ಟು ಕೆಲಸಗಳು ಆಗಬೇಕಿವೆ. ಹಾಗಾಗಿ ಪಟ್ಟಣದ ಅಭಿವೃದ್ಧಿಗಾಗಿ ನಾನು ಯಾವಾಗಲೂ ಶ್ರಮಿಸುತ್ತೇನೆ ಎಂದು ಹೇಳಿದರು.
ಸನ್ಮಾನ: ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪೂರ, ಲೋಕಾಪುರ ಬ್ಲಾಕ್ ಕಾಂಗ್ರೇಸ್ ಸೇವಾದಳ ಸಮಿತಿ ಅಧ್ಯಕ್ಷ ಕುಲದೀಪ ಅರಕೇರಿ, ಬ್ಲಾಕ್ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಮುಧೋಳ ಪಿ.ಎಲ್.ಡಿ ಬ್ಯಾಂಕಿನ ಉಪಾಧ್ಯಕ್ಷ ಮಂಜು ಗಲಗಲಿ ಮತ್ತು ಸದಸ್ಯ ಗೋಪಾಲ ಆನೆಗುದ್ದಿ ಹಾಗೂ ಪಟ್ಟಣದ ಪತ್ರಕರ್ತರರನ್ನು ಭೀಮನಗೌಡ ಪಾಟೀಲ ಪರಿವಾರದಿಂದ ಸನ್ಮಾನಿಸಲಾಯಿತು.ಬೈಕ್ ರ‍್ಯಾಲಿ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ಹುಟ್ಟುಹಬ್ಬದ ಪ್ರಯುಕ್ತ ಲಕ್ಷಾನಟ್ಟಿ ಭೀಮನಗೌಡ ಪಾಟೀಲ ಅವರ ತೋಟದ ಮನೆಯಿಂದ ಸಚಿವರು, ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ಯುವಕರು, ಅಭಿಮಾನಿಗಳು ಸೇರಿದಂತೆ ಬಸವೇಶ್ವರ ವೃತ್ತದ ಮಾರ್ಗವಾಗಿ ಪಟ್ಟಣದ ವಿವಿಧ ಬೀದಿಗಳಲ್ಲಿ ಬೈಕ್ ರ‍್ಯಾಲಿ ಮಾಡಲಾಯಿತು.
ಈ ವೇಳೆ ಹಿರೇಮಠದ ಡಾ. ಚಂದ್ರಶೇಖರ ಸ್ವಾಮಿಗಳು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪೂರ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಉದಯ ಸಾರವಾಡ, ರಾಜುಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಲೋಕಣ್ಣ ಕೊಪ್ಪದ, ಶಿವಾನಂದ ಉದಪುಡಿ, ಗೋವಿಂದ ಕೌಲಗಿ, ಗೋವಿಂದಗೌಡ ಪಾಟೀಲ, ಸುರೇಶ ಆನೆಗುದ್ದಿ, ಗೋವಿಂದಪ್ಪ ಬಡಕಲಿ, ದುರಗೇಶ ಮಾದರ, ಮಹೇಶ ಪೂಜಾರಿ, ಮುತ್ತಪ್ಪ ಲಮಾಣಿ, ಕಲ್ಲಪ್ಪ ಮಾದರ, ಬಸವಂತ ಪೂಜಾರ, ರುದ್ರಪ್ಪ ಜಾನಮಟ್ಟಿ ಮತ್ತು ಅನೇಕ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.