ನಾನು ಶಾಸಕನಲ್ಲ ಜನಸೇವಕ ಎಂದ ಎಚ್ ಕೆ ಸುರೇಶ್‌

| Published : Sep 04 2024, 01:46 AM IST

ಸಾರಾಂಶ

ಬೇಲೂರು ಶಾಸಕ ಎಚ್‌ ಕೆ ಸುರೇಶ್‌ ಹುಟ್ಟುಹಬ್ಬ ಹಿನ್ನೆಲೆ ಆಶಾಕಾರ್ಯಕರ್ತರು, ಪೌರಕಾರ್ಮಿಕರಿಗೆ ಗೌರವ ಸನ್ಮಾನ ಮಾಡಲಾಗಿದೆ. ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡಲಾಗಿದೆ. ಜೊತೆಗೆ ರಕ್ತದಾನ ಮಹಾದಾನ ಎಂಬ ಹಿನ್ನೆಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಗಿದೆ. ನಾನು ಎಂದಿಗೂ ಶಾಸಕನಲ್ಲ, ಬದಲಾಗಿ ನಿಮ್ಮ ಸೇವಕ ಎಂಬ ಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ.ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದುನನ್ನ ಮೂಲ ಗುರಿಯಾಗಿದೆ. ಇಲ್ಲಿನ ಜನರ ಕಷ್ಟಗಳನ್ನು ನಾನು ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಅರಿತಿದ್ದೇನೆ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವವಿಖ್ಯಾತ ಪ್ರವಾಸಿ ಕೇಂದ್ರದ ಸಮಗ್ರ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲೇ ಮಾದರಿ ತಾಲೂಕು ಕೇಂದ್ರವನ್ನಾಗಿ ರೂಪಿಸುವ‌ ನಿಟ್ಟಿನಲ್ಲಿ ಶ್ರಮ ಪಡುತ್ತಿದ್ದೇನೆ. ಶಾಸಕ ಎಂದು ನೋಡದೆ ನಿಮ್ಮ ಸೇವಕನೆಂದುಪರಿಗಣಿಸಿ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಕಾಲೇಜು, ಮೈದಾನದಲ್ಲಿ ಶಾಸಕ ಎಚ್‌ ಕೆ ಸುರೇಶ್ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರ, ಆಶಾ ಕಾರ್ಯಕರ್ತರಿಗೆ ಹಾಗೂ ಪೌರ ಕಾರ್ಮಿಕರಿಗೆ ನಡೆದ ಗೌರವ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನಾನು ಎಂದಿಗೂ ಶಾಸಕನಲ್ಲ, ಬದಲಾಗಿ ನಿಮ್ಮ ಸೇವಕ ಎಂಬ ಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ.ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದುನನ್ನ ಮೂಲ ಗುರಿಯಾಗಿದೆ. ಇಲ್ಲಿನ ಜನರ ಕಷ್ಟಗಳನ್ನು ನಾನು ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಅರಿತಿದ್ದೇನೆ. ತಾವು ಪ್ರತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟ್ಟ ಮಗು ಕೂಡ ತಮ್ಮನ್ನು ಗುರುತಿಸಿ ಸುರೇಶಣ್ಣ ಎಂದು ಕರೆದಾಗ ರೋಮಾಂಚನವಾಗುತ್ತದೆ. ಕಳೆದ ಐದಾರು ವರ್ಷದಿಂದ ಅಭಿಮಾನಿಗಳು ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದು, ಈ ಮೂಲಕ ಸೇವಾ ಕಾರ್ಯವನ್ನು ನಡೆಸಬೇಕು ಎಂದು ಆಶಾಕಾರ್ಯಕರ್ತರು, ಪೌರಕಾರ್ಮಿಕರಿಗೆ ಗೌರವ ಸನ್ಮಾನ ಮಾಡಲಾಗಿದೆ. ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡಲಾಗಿದೆ. ಜೊತೆಗೆ ರಕ್ತದಾನ ಮಹಾದಾನ ಎಂಬ ಹಿನ್ನೆಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಗಿದೆ. ಈ ಕಾರ್ಯಗಳು ಕೇವಲ ಹುಟ್ಟುಹಬ್ಬ ಆಚರಣೆಗೆ ಎಂದು ಸೀಮಿತವಾಗದೆ ಸತತವಾಗಿ ನಡೆಯಲಿದೆ ಎಂದು ಹೇಳಿದರು.

ಶಾಸಕರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ಪಟ್ಟಣದ ನೆಹರುನಗರದಿಂದ ಶಾಸಕ ಎಚ್.ಕೆ.ಸುರೇಶ್ ಅವರನ್ನು ಮೆರವಣಿಗೆಯೊಂದಿಗೆ ಕರೆತಂದು ಬಸವೇಶ್ವರ ವೃತ್ತದ ಬಳಿ ಬೃಹತ್ ಸೇಬಿನ ಹಾರ ಮತ್ತು ಜೆಸಿಬಿ ಮೂಲಕ ಪುಷ್ಪಾರ್ಚನೆಯನ್ನು ನಡೆಸಲಾಯಿತು. ಬಳಿಕ ಶಾಸಕರು ಪಟ್ಟಣದ ಹೃದಯ ಭಾಗದ ಬಸವೇಶ್ವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕಾಲೇಜು ಅವರಣದಲ್ಲಿ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಾವು ಕೂಡ ಸ್ವಯಂಪ್ರೇರಿತ ರಕ್ತದಾನ ಮಾಡಿದರು. ನೂರಾರು ರೈತರಿಗೆ ತೆಂಗು ಹಾಗೂ ಫಲ ನೀಡುವ ಸಸಿ ವಿವರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರೇಣುಕುಮಾರ್‌, ಪವರ್ತಯ್ಯ, ಗಂಗೇಶಣ್ಣ, ಸಿ.ಎಸ್.ಪ್ರಕಾಶ್, ತೆಂಡೇಕೆರೆ ರಮೇಶ್, ನೆಟ್ಟೆಕೆರೆ ಮಂಜುನಾಥ್. ಡಿಶಾಂತ್, ಅಶೋಕ್, ಜಾವಗಲ್ ಪ್ರಸನ್ನ, ನೀಕಿಲ್, ವಿನಯ್, ಕರ್ಣ, ಜಯಶಂಕರ್, ರವಿಕುಮಾರ್, ರಮಶ್, ವಿಜಿಯಣ್ಣ, ಶೋಭಾ ಗಣೇಶ್ ಸೇರಿದಂತೆ ಇತರರು ಇದ್ದರು.