ಸಾರಾಂಶ
ತಾಳಿಕೋಟೆ: ನಾನು ಮನೆ ಕಟ್ಟಿದ್ದೀನಿ, ಎಲ್ಲವು ನನ್ನದೆಂಬ ಭ್ರಮೆಯೊಳಗೆ ಬದುಕು ಸಾಗಿಸಿದರೆ ಮುಂದೊಂದು ದಿನ ಎಲ್ಲವು ಮಣ್ಣು ಪಾಲಾಗಲಿದೆ ಎಂಬುವುದನ್ನ ಅರ್ಥೈಸಿಕೊಂಡು ಬದುಕಿದರೆ ದೇವರ ಒಲುಮೆಗೆ ಪಾತ್ರವಾಗಲು ಸಾಧ್ಯ ಎಂದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ನುಡಿದರು.
ತಾಳಿಕೋಟೆ:
ನಾನು ಮನೆ ಕಟ್ಟಿದ್ದೀನಿ, ಎಲ್ಲವು ನನ್ನದೆಂಬ ಭ್ರಮೆಯೊಳಗೆ ಬದುಕು ಸಾಗಿಸಿದರೆ ಮುಂದೊಂದು ದಿನ ಎಲ್ಲವು ಮಣ್ಣು ಪಾಲಾಗಲಿದೆ ಎಂಬುವುದನ್ನ ಅರ್ಥೈಸಿಕೊಂಡು ಬದುಕಿದರೆ ದೇವರ ಒಲುಮೆಗೆ ಪಾತ್ರವಾಗಲು ಸಾಧ್ಯ ಎಂದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ನುಡಿದರು. ಗುಂಡಕನಾಳ ಹಿರೇಮಠದಲ್ಲಿ ನಡೆದ ಪುಣ್ಯಸ್ಮರಣೋತ್ಸವ ಹಾಗೂ ಗುರುಲಿಂಗ ಶಿವಾಚಾರ್ಯರ 18ನೇ ಪಟ್ಟಾಧಿಕಾರದ ವಾರ್ಷಿಕೋತ್ಸವ ಹಾಗೂ ಗುರುವಂಧನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ನನ್ನದು ಎಂಬುದು ಶಾಶ್ವತವಲ್ಲ. ಕಟ್ಟಿದ ಮನೆ ಮುಂದೊಂದು ದಿನ ಮತ್ತೊಬ್ಬನ ಸ್ವತ್ತಾಗುತ್ತದೆ ಎಂಬುದು ಅರಿಯಬೇಕು. ಅಹಂಕಾರ ಭಾವದಿಂದ ನಡೆದರೆ ಮುಂದೊಂದು ದಿನ ಮಣ್ಣಾಗಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು.ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಹಿಂದಿನ ಕಾಲದ ಆಹಾರ ಸೇವನೆ ಪದ್ದತಿ ಕೆಲಸ ಕಾರ್ಯಗಳ ಬಗ್ಗೆ ಜ್ಞಾಪಿಸಿಕೊಂಡು, ಆರೋಗ್ಯವೇ ಭಾಗ್ಯವೆಂದು ಅರ್ಥೈಸಿಕೊಂಡು ನಡೆಯಿರಿ ಎಂದರು.ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಶಿವಮ್ಮ ಬಿರಾದಾರ, ಮಹಾಂತೇಶ ಮುರಾಳ ಸನ್ಮಾನಿಸಿ ಗೌರವಿಸಲಾಯಿತು. ಪ್ರವಚನಕಾರ ಶರಣಬಸವ ಶಾಸ್ತ್ರೀಗಳು ಹಾಗೂ ಹಿರೂರ ಸನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ರ್ಶರೀ ಮಾತನಾಡಿದರು. ಷ.ಬ್ರ.ಸಿದ್ದರೇಣುಕಾ ಶಿವಾಚಾರ್ಯ ಶ್ರೀ, ಕೊಡಗಾನೂರ ಹಿರೇಮಠದ ಕುಮಾರದೇವರು, ವೇ.ಸಂತೋಷಬಟ್ ಜೋಶಿ, ಮುದನೂರ ಕೋರಿ ಸಿದ್ದೇಶ್ವರ ಮಠದ ಶ್ರೀ ಸಿದ್ದಚನ್ನಮಲ್ಲಿಕಾರ್ಜುನ ಶ್ರೀ, ಅಡವಿಲಿಂಗ ಮಹಾರಾಜರು, ನೀಲಕಂಠಯ್ಯ ಶ್ರೀ, ಉದ್ಯಮಿ ಸಿದ್ದನಗೌಡ ಬಿರಾದಾರ, ಮಾರಟಗಿ ಶಿವಗೌಡ ಮಾಲೀಪಾಟೀಲ, ಮಡುಸಾಹುಕಾರ ಬಿರಾದಾರ, ಮಲ್ಲನಗೌಡ ಹಗರಟಗಿ, ಯಶವಂತಗೌಡ ಮಾಲೀಪಾಟೀಲ, ಸಿದ್ರಾಮರೆಡ್ಡಿ ಗದಗಿ, ಗುರುನಾಥರೆಡ್ಡಿ ಇದ್ದರು. ವೇ.ದೊಡ್ಡಬಸಯ್ಯ ಶ್ರೀ, ಪ್ರಭಯ್ಯ ಆಲ್ಯಾಳಮಠ ನಿರೂಪಿಸಿದರು. ಬಸಯ್ಯಶಾಸ್ತ್ರೀ ವಂದಿಸಿದರು.