ಅಂಬೇಡ್ಕರ್‌ ನೀಡಿದ ಮೀಸಲಾತಿಯಿಂದಲೇ ನಾನಿಂದು ಶಾಸಕನಾಗಿದ್ದೇನೆ

| Published : Apr 15 2025, 01:00 AM IST

ಅಂಬೇಡ್ಕರ್‌ ನೀಡಿದ ಮೀಸಲಾತಿಯಿಂದಲೇ ನಾನಿಂದು ಶಾಸಕನಾಗಿದ್ದೇನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ನಾನು ಇಂದು ಕ್ಷೇತ್ರದ ಶಾಸಕನಾಗಿದ್ದೇನೆ. ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ನಮ್ಮ ಬದುಕು ಯಾವ ಪರಿಸ್ಥಿತಿ ಇರುತ್ತಿತ್ತು ಅಂತ ನೀವು ಯಾರಾದರೂ ಊಹೆ ಮಾಡಲಿಕ್ಕೆ ಸಾಧ್ಯವಿದೆಯಾ? ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಕೊಡಿಸಿದವರು ಬಾಬಾ ಸಾಹೇಬರು, ವ್ಯಕ್ತಿ ಪ್ರಧಾನಿನೆ ಆಗಿರಲಿ, ಅಧಿಕಾರಿಯೇ ಆಗಿರಲಿ, ಸಾಮಾನ್ಯ ವ್ಯಕ್ತಿಯೆ ಆಗಿರಲಿ ಒಬ್ಬರಿಗೆ ಒಂದು ಓಟು ಮಾತ್ರ ಹಾಕಲು ಅವಕಾಶ. ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ಜಮೀನ್ದಾರರಿಗೆ, ಶ್ರೀಮಂತರಿಗೆ ಮಾತ್ರ ಓಟು ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಮೇಲಿನ ಅಭಿಮಾನ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬರ ಋಣ ನನ್ನ ಮೇಲಿದೆ. ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ನಾನು ಇಂದು ಕ್ಷೇತ್ರದ ಶಾಸಕನಾಗಿದ್ದೇನೆ. ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ನಮ್ಮ ಬದುಕು ಯಾವ ಪರಿಸ್ಥಿತಿ ಇರುತ್ತಿತ್ತು ಅಂತ ನೀವು ಯಾರಾದರೂ ಊಹೆ ಮಾಡಲಿಕ್ಕೆ ಸಾಧ್ಯವಿದೆಯಾ? ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಕೊಡಿಸಿದವರು ಬಾಬಾ ಸಾಹೇಬರು, ವ್ಯಕ್ತಿ ಪ್ರಧಾನಿನೆ ಆಗಿರಲಿ, ಅಧಿಕಾರಿಯೇ ಆಗಿರಲಿ, ಸಾಮಾನ್ಯ ವ್ಯಕ್ತಿಯೆ ಆಗಿರಲಿ ಒಬ್ಬರಿಗೆ ಒಂದು ಓಟು ಮಾತ್ರ ಹಾಕಲು ಅವಕಾಶ. ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ಜಮೀನ್ದಾರರಿಗೆ, ಶ್ರೀಮಂತರಿಗೆ ಮಾತ್ರ ಓಟು ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಬಾಬಾ ಸಾಹೇಬರು ಕೊಟ್ಟಿರುವಂತಹ ಸಂವಿಧಾನದಿಂದ ಚಹಾ ಮಾರುವಂತ ವ್ಯಕ್ತಿ ಸಹ ಪ್ರಧಾನ ಮಂತ್ರಿಯಾಗಬಹುದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಸ್ವಂತಕೋಸ್ಕರ ಏನನ್ನೂ ಕೂಡ ಮಾಡಿಕೊಳ್ಳಲಿಲ್ಲ, ತನ್ನ ಮಗ ಮೃತಪಟ್ಟ ಸಂದರ್ಭದಲ್ಲಿ ಸಹ ವಿದೇಶದಲ್ಲಿದ್ದು ಆವಾಗಲೂ ಸಹ ಜನಸಾಮಾನ್ಯರಿಗಾಗಿ ದೇಶಕ್ಕೆ ಬರಲಿಲ್ಲ. ಏಕೆಂದರೆ ಅವರು ದೇಶದ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸಬೇಕೆಂಬ ತುಡಿತವನ್ನು ಹೊಂದಿದ್ದರು.

ಈ ದೇಶದಲ್ಲಿ ಬಾಬಾ ಸಾಹೇಬ್ ಅಂತ ವ್ಯಕ್ತಿ ಹುಟ್ಟಿಲ್ಲ ಅಂತ ಹೇಳಿದರೆ ತಪ್ಪಾಗಲಾರದು, ದೇಶಕ್ಕಾಗಿ ಜೀವನ ಕೊಟ್ಟ ಬಾಬಾ ಸಾಹೇಬರು ಚುನಾವಣೆಗೆ ನಿಂತಾಗ ಎರಡು ಬಾರಿ ಸೋಲಿಸುತ್ತಾರೆ. ಹೀಗಾಗಿ ನಾನು ಪ್ರತಿಯೋರ್ವ ಬಂಧುಗಳಿಗೆ ಮನವಿ ಮಾಡುತ್ತೇನೆ ಮತದಾನ ಮಾಡುವ ಮೊದಲು ಯೋಚಿಸಿ ಮತದಾನ ಮಾಡಿ ಎನ್ನುತ್ತೇನೆ.ಈ ದೇಶದಲ್ಲಿ ವಿಷವನ್ನು ಕುಡಿದು ನಮಗೆಲ್ಲ ಅಮೃತ ಕೊಟ್ಟಿರತಕ್ಕಂತ ಯಾವುದಾದರೂ ವ್ಯಕ್ತಿ ಇದ್ದರೆ ಅದು ಅಂಬೇಡ್ಕರ್ ಎಂದು ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಬೇರೆ ಬೇರೆ ದೇಶಕ್ಕೆ ಬೇರೆ ಬೇರೆ ರೀತಿಯ ಸಂವಿಧಾನಗಳಿದ್ದು ಆದರೆ ಭಾರತದಂತಹ ದೇಶದಲ್ಲಿ ಸಾವಿರಾರು ಜಾತಿಗಳು, ಸಂಸ್ಕೃತಿಗಳು, ಧರ್ಮಗಳಿದ್ದು ಇವೆಲ್ಲವನ್ನು ಒಗ್ಗೂಡಿಸಿರುವುದು ಸಂವಿಧಾನವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ತಾವೆಲ್ಲರೂ ಕೂಡ ಓದಬೇಕು. ಪ್ರತಿಯೋಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಲು ಮುಂದಾಗಬೇಕು ಎಂದರು.

ಮುಖ್ಯ ಭಾಷಣಕಾರ ಪ್ರೊ. ಮಂಜಯ್ಯ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ, ದೀನ ದಲಿತರಿಗೆ ಸಮಾನವಾದ ಹಕ್ಕು ಸಿಗಲು ಅಂಬೇಡ್ಕರ್ ಕಾರಣರಾಗಿದ್ದಾರೆ. ನಮಗೆ ನಾವೆ ಬೆಳಕಾಗಬೇಕು ಪ್ರತಿಯೊಬ್ಬರು ದುಷ್ಚಟಗಳಿಂದ, ಮೂಢನಂಬಿಕೆಗಳಿಂದ ಹೊರಬಂದರೆ ಮಾತ್ರ ಅಂಬೇಡ್ಕರ್‌ಗೆ ಗೌರವ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಅರವಿಂದ್, ಡಿವೈಎಸ್‌ಪಿ ಪ್ರಮೋದ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ಸಮಾಜ ಕಲ್ಯಾಣಧಿಕಾರಿ ಮೋಹನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪುರಸಭಾ ಸದಸ್ಯೆ ಅನ್ನಪೂರ್ಣ ಮುಂತಾದವರು ಹಾಜರಿದ್ದರು.