ಸಾರಾಂಶ
ನನಗೆ ರಾಜಕೀಯ ಸ್ಥಾನಮಾನ ತಪ್ಪಿಸಿದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ಪಕ್ಷ ಕೈಗೊಳ್ಳುವ ಯಾವುದೇ ನಿರ್ಣಯಕ್ಕೂ ಬದ್ಧನಾಗಿರುವೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನನಗೆ ರಾಜಕೀಯ ಸ್ಥಾನಮಾನ ತಪ್ಪಿಸಿದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ಪಕ್ಷ ಕೈಗೊಳ್ಳುವ ಯಾವುದೇ ನಿರ್ಣಯಕ್ಕೂ ಬದ್ಧನಾಗಿರುವೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.ನಗರದಲ್ಲಿ ಶುಕ್ರವಾತ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅವಕಾಶಗಳಿಂದ ವಂಚಿತಗೊಂಡಿದ್ದರಿಂದಲೇ ನನ್ನ ಶಿಕ್ಷಣ ಸಂಸ್ಥೆ, ಸಹಕಾರಿ ಕ್ಷೇತ್ರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಿದೆ. ಈ ಕಾರ್ಯವೇ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದೆ. ಸ್ಥಾನಮಾನ ಸಿಗದಿದ್ದರೂ ಅಡ್ಡಿಯಿಲ್ಲ. ಉತ್ತರ ಕರ್ನಾಟಕದ ಯೋಜನೆಗಳು ಸಾಕಾರಗೊಂಡಲ್ಲಿ ಅದೇ ನನಗೆ ಸಂತೃಪ್ತಿ. ಇದು ನನಗೆ ಪ್ರಧಾನಿಯಾದಷ್ಟು ಸಾರ್ಥಕತೆ ನೀಡಲಿದೆ ಎಂದು ಹೇಳಿದರು.ಹೈಕಮಾಂಡ್ ಬ್ಲಾಕ್‌ಮೇಲ್ ಸಾಧ್ಯವಿಲ್ಲ: ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ. ಯಾರೇ ಆಗಲಿ ಹೈಕಮಾಂಡ್ ಅನ್ನು ಬ್ಲಾಕ್ಮೇಲ್ ಮಾಡಲು ಸಾಧ್ಯವಾಗಿಲ್ಲ. ಯಾರೂ ಇದುವರೆಗೂ ಹೈಕಮಾಂಡ್ ಅನ್ನು ಮಣಿಸಲು ಆಗಿಲ್ಲ. ಏನೇ ಆದರೂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಮುಖ್ಯಮಂತ್ರಿಗಳು ಕೂಡ ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.