ಮಾಜಿ ಸಿಎಂ ಸಿದ್ದರಾಮಯ್ಯನವರು ನನಗೆ ಗಾಡಫಾದರ್, ಉತ್ತರ ಕರ್ನಾಟಕದ ಕಡೆ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದರು. ಕೊನೆಯ ತನಕ ಅದೇ ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ಬದಲಾಗಿದ್ದು, ಇದಕ್ಕೇ ಒಬ್ಬನೇ ಒಬ್ಬ ಕಾರಣ. ಆತನ ಹೆಸರನ್ನು ಈಗಲ್ಲ, ಮುಂದೆ ಹೇಳುವೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯನವರು ನನಗೆ ಗಾಡಫಾದರ್, ಉತ್ತರ ಕರ್ನಾಟಕದ ಕಡೆ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದರು. ಕೊನೆಯ ತನಕ ಅದೇ ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ಬದಲಾಗಿದ್ದು, ಇದಕ್ಕೇ ಒಬ್ಬನೇ ಒಬ್ಬ ಕಾರಣ. ಆತನ ಹೆಸರನ್ನು ಈಗಲ್ಲ, ಮುಂದೆ ಹೇಳುವೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊನೆ ಗಳಿಗೆಯಲ್ಲಿ ಆಗಿರುವ ಬದಲಾವಣೆ ಕುರಿತು ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ ಅವರ ಗಮನಕ್ಕೂ ಇಲ್ಲ. ಹೈಕಮಾಂಡ್‌ನಿಂದ ಈ ಆದೇಶ ಬಂದಿದೆ.
ನನಗೆ ಸಚಿವ ಸ್ಥಾನ ತಪ್ಪಿರುವುದು ರಾಹುಲ್ ಗಾಂಧಿಯವರಿಗೂ ಗೊತ್ತಿಲ್ಲ. ಸುರ್ಜೆವಾಲಾ ಅವರ ಕಡೆಯಿಂದ ಬಂದ ಹೆಸರು ಅದು ಎಂದರು.ಇದೆಲ್ಲ ಪ್ರಕ್ರಿಯೆ ಮುಗಿದ ಮೇಲೆ ಹೇಗೆ ನನಗೆ ಸಚಿವ ಸ್ಥಾನ ತಪ್ಪಿತು, ಯಾರು ತಪ್ಪಿಸಿದರು ಅಂತಾ ಎಲ್ಲ ಹೇಳುವೆ. ನಾನು ಯಾರ ಮೇಲೂ ಕಂಪ್ಲೆಂಟ್ ಹೇಳಿಲ್ಲ. ಆದರೆ ನನ್ನ ಮೇಲೆ ಯಾರು ಕಂಪ್ಲೆಂಟ್ ಹೇಳಿದಾರೋ ಸಂದರ್ಭ ಬಂದಾಗ ಅದನ್ನು ಹೇಳುವೆ ಎಂದರು.ಒಬ್ಬ ಹೆಣ್ಣು ಮಗಳು ಪ್ರಮಾಣ ವಚನ ತಗೊಂಡಿಲ್ಲ. ಹೆಣ್ಣು ಮಗಳಿಗಂತೂ ಕೊಡಲೇಬೇಕು ಅಂತಾ ಇದೆ. ನಾನು ಶಾಸಕನಾಗೇ ಕೆಲಸ ಮಾಡಿಕೊಂಡು ಹೋಗುವೆ, ಆದರೆ ಅವರು ಬೇರೆ ಹುದ್ದೆ ಕೊಟ್ಟರೆ ತಗೊಳಲ್ಲ. ನನಗೆ ಯಾವ ಆಫರ್ ಇಲ್ಲ, ಇದ್ದ ಹುದ್ದೆನೂ ತ್ಯಾಗ ಮಾಡಬೇಕು ಅಂತಾ ಹೇಳಿ ಸಿಎಂ ಬಳಿ ರಾಜೀನಾಮೆ ಪತ್ರ ತಗೊಂಡು ಹೋಗಿದ್ದೆ. ಆದರೆ ಸಿಎಂ ಡಿಕೆಶಿ ಅವರು ರಾಜೀನಾಮೆ ಬೇಡ, ತಡಕೋ, ಕ್ಷೇತ್ರದಲ್ಲಿ ಕೆಲಸ ಮಾಡು. ಏನು ಒಳ್ಳೆಯದು ಮಾಡಬೇಕೋ ಮಾಡುತ್ತೇವೆ ಅಂತಾ ಹೇಳಿದ್ದಾರೆ ಎಂದರು.