ಸಾರಾಂಶ
ಬಿಜೆಪಿ ಸದಸ್ಯತ್ವದ ಅಭಿಯಾನ ಕಾರ್ಯಕ್ರಮದಲ್ಲಿ ಗಾಯಿತ್ರಿ ಸಿದ್ದೇಶ್ವರ ಹೇಳಿಕೆ
ಕನ್ನಡಪ್ರಭ ವಾರ್ತೆ ನ್ಯಾಮತಿ
ಲೋಕಸಭಾ ಚುನಾವಣೆಗೆ ಸ್ಪರ್ಧಿಯಾಗಿ ನಿಂತು ಸೋತಿದ್ದೇನೆ ಆದರೆ ಜಿಲ್ಲೆಯ ಮತದಾರರು, ಕಾರ್ಯಕರ್ತರು ನನ್ನ ಪರ ಪ್ರಚಾರ ಮಾಡಿ ಮತದಾನ ಮಾಡಿಸಿದ್ದಾರೆ. ಇದು ಸೋಲಲ್ಲ ಬಿಜೆಪಿ ಅಭಿಮಾನಿಗಳಿಂದ ಗೆದ್ದಿದ್ದೇನೆ ಎಂದು ಗಾಯಿತ್ರಿ ಸಿದ್ದೇಶ್ವರ ಹೇಳಿದರು.ಪಟ್ಟಣದ ಎಚ್.ಎಂ.ಬಿಲ್ಡಿಂಗ್ ಸಭಾಂಗಣದಲ್ಲಿ ಬಿಜೆಪಿ ಸದಸ್ಯತ್ವದ ಅಭಿಯಾನ ನೊಂದಣಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣೆಯಲ್ಲಿ ಸೋಲು-ಗೆಲವು ಸಾಮಾನ್ಯ ಆದರೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಮತದಾರರು ನನ್ನನ್ನು ಕೈಬಿಟ್ಟಿಲ್ಲ ಎಂದರು.
ಮಾಡಳ್ ಮಲ್ಲಿಕಾರ್ಜುನಪ್ಪ ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ, ಪಕ್ಷದಿಂದ ಪಕ್ಷದಿಂದ ಹಾರಿ ಬಂದು ನಮ್ಮ ಪಕ್ಷವನ್ನು ಡ್ಯಾಮೇಜ್ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಬಲಿಷ್ಟವಾಗಿ ಬೆಳೆಯುತ್ತಿದ್ದು, 30 ಕೋಟಿ ಜನ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಭಾರತೀಯರಾದ ನಾವುಗಳು ಹಿಂದುತ್ವ ಉಳಿಸಬೇಕು ಎಂದು ಹೇಳಿದರು.ದಾವಣಗೆರೆ ಉತ್ತರ 21,763, ದಕ್ಷಿಣ 8,433, ಮಾಯಕೊಂಡ 7,198, ಚನ್ನಗಿರಿ 18,091, ಹೊನ್ನಾಳಿ 21,534, ಹರಿಹರ 4,748, ಜಗಳೂರು 9,305 ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಬಿಜೆಪಿ ಪಕ್ಷದ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ, ಮಹಿಳಾ ಮೋರ್ಚ ರಾಜ್ಯ ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಮುಖಂಡ ಉಪಾಧ್ಯಕ್ಷ ಶಾಂತರಾಜ್ ಪಾಟೀಲ್, ಕೆ.ವಿ.ಚನ್ನಪ್ಪ, ಎಚ್.ಮಲ್ಲಪ್ಪ, ಅಜೆಯರೆಡ್ಡಿ, ಸಿಕೆ.ರವಿಕುಮಾರ, ಶ್ರೀನಿವಾಸ್ ನಾಡಿಗ್, ಹಲಗೇರಿ ನವೀನ್, ಸತೀಶ್‌ಟ್ಐಲರ್, ಎಸ್.ಎಂ.ಟಿ.ಶಿವು, ಎಂ.ಯುನಟರಾಜ್, ಉಮಾ ಓಂಕಾರ, ಎಂ.ಕೃಷ್ಣಾಚಾರ್, ಹಲಗೇರಿ ಪ್ರಭು, ಸೋಗಿಲು ಪ್ರಭು ಮತ್ತಿತರರಿದ್ದರು.