ಮಕ್ಕಳಿಗೆ ಶಿಕ್ಷಣ ನೀಡಿದ್ದೆ ಜಾನಪದ ಸಾಹಿತ್ಯ

| Published : Nov 06 2024, 12:44 AM IST

ಮಕ್ಕಳಿಗೆ ಶಿಕ್ಷಣ ನೀಡಿದ್ದೆ ಜಾನಪದ ಸಾಹಿತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಶಿಕ್ಷಣ ನೀಡಿದ್ದೆ ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯ ಅತ್ಯಂತ ಶ್ರೇಷ್ಠ ಹಾಗೂ ಮೌಲ್ಯಗಳ ಪ್ರತೀಕ ಎಂದು ಡಿವೈಎಸ್ಪಿ ಹಾಗೂ ಸಾಹಿತಿ ಬಸವರಾಜ ಯಲಿಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಕ್ಕಳಿಗೆ ಶಿಕ್ಷಣ ನೀಡಿದ್ದೆ ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯ ಅತ್ಯಂತ ಶ್ರೇಷ್ಠ ಹಾಗೂ ಮೌಲ್ಯಗಳ ಪ್ರತೀಕ ಎಂದು ಡಿವೈಎಸ್ಪಿ ಹಾಗೂ ಸಾಹಿತಿ ಬಸವರಾಜ ಯಲಿಗಾರ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ನಡೆದ ದತ್ತಿ ಉಪನ್ಯಾಸಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ ಪ್ರತಿಯೊಬ್ಬರ ಮನಸ್ಸು ಅರಳಿಸುವ ದಿವ್ಯ ಶಕ್ತಿ ಹೊಂದಿದೆ. ಸಾಹಿತ್ಯಕ್ಕೆ ಜಾಗೃತಿಯ ದಿವ್ಯ ಸಾಧನ, ಕಲೆಯು ಪ್ರತಿ ಮನುಷ್ಯನ ಮೂಲ ಸಲೆ, ವೃತ್ತಿ ನಾಟಕಗಳು ಶಿಕ್ಷಣ ಕೊಡುವ ಮಾಧ್ಯಮ ಆಗಬೇಕು, ರಂಗಭೂಮಿ ಶಿಕ್ಷಣಕ್ಕಾಗಿ ಎನ್ನುವ ಪರಿಕಲ್ಪನೆ ಬರಬೇಕು, ಸಾಹಿತ್ಯ ಪ್ರಕಾರದಲ್ಲಿ ಶರಣ ಸಾಹಿತ್ಯ ಅದ್ಭತವಾದದ್ದು, ಜನಪದ ಸಾಹಿತ್ಯದ ಇನ್ನೊಂದು ರೂಪವೇ ಶರಣ ಸಾಹಿತ್ಯ ಎಂದರು. ಜನಪದ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಕುರಿತು ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ಓದು ಬರಹ ಬಾರದ ತಾಯಿ ಜನಪದ ಹಾಡುಗಳು ಹಾಡುವದರ ಮೂಲಕ ಮಗುವಿನ ವ್ಯಕ್ತಿತ್ವ ನಿರ್ಮಿಸುತ್ತಾಳೆ. ಹಿರಿಕಿರಿಯ ಭೇದ ಭಾವ ಇಲ್ಲದೆ ಬೆಳಸುತ್ತಾಳೆ. ಸಂಸ್ಕಾರ ಜನಪದ ಹಾಡುಗಳ ಮೂಲಕ ಗಟ್ಟಿಗೊಳಿಸುತ್ತಾಳೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾತನಾಡುತ್ತ ರಂಗಭೂಮಿ ಸಾಹಿತ್ಯ ಸಂಗೀತ ಕಲೆ ಮೂರು ಕೂಡಿದರೆ ನಾಟಕ. ವೃತ್ತಿ ರಂಗಭೂಮಿ ಆಧುನಿಕ ಯುಗದಲ್ಲಿ ಅವನತಿ ಆಗತ್ತಿರುವುದು ದುಃಖದ ಸಂಗತಿ ಎಂದರು. ಡಾ.ಸುಖದೇವಿ ಅಲಬಾಳಮಠ, ರುದ್ರಮ್ಮ ಗಿಡ್ಡಪ್ಪಗೋಳ ಉಪನ್ಯಾಸ ಮಂಡಿಸಿದರು. ವಿವೇಕಾನಂದ ಹುಂಡೇಕಾರ, ವಿಜಯಕುಮಾರ ಹುಂಡೇಕಾರ ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ಸಂಗಮೇಶ ಮೇತ್ರಿ, ಸುರೇಶ್ ಜತ್ತಿ, ರಾಜೇಸಾಬ ಶಿವನಗುತ್ತಿ, ಅರ್ಜನ ಶಿರೂರ, ವಿಜಯಲಕ್ಷೀ ಹಳಕಟ್ಟಿ, ವಿ.ಎಸ್.ಖಾಡೆ, ಆಶಾ ಬಿರಾದಾರ, ಲಾವಣ್ಯ ಅಮರಪ್ಪಗೋಳ, ಗಂಗಮ್ಮ ರೆಡ್ಡಿ, ಲಕ್ಷ್ಮೀ ಬಿರಾದಾರ, ರಿಯಾನ್ ಮಲಿಕ್ ಹಳ್ಳೂರ, ರಾಹುಲ ಚವ್ಹಾಣ, ಕಾಂತು ಕುವಳ್ಳಿ, ಅಶೋಕ ಅವಟಿ, ಸಿದ್ದನಗೌಡ ಪಾಟೀಲ, ಮಮತಾ ಮುಳಸಾವಳಗಿ, ಅಹಮ್ಮದ ವಾಲಿಕಾರ, ಭಾಗೀರಥಿ ಶಿಂಧೆ, ಜಿ.ಎಸ್. ಬಳ್ಳೂರ, ಸಿದ್ದರಾಮ ಬಿರಾದಾರ, ಸನ್ನಿಧಿ ಹೊನ್ನುಟಗಿ ಉಪಸ್ಥಿತರಿದ್ದರು.

ಸಾಹಿತ್ಯ ಪ್ರತಿಯೊಬ್ಬರ ಮನಸ್ಸು ಅರಳಿಸುವ ದಿವ್ಯ ಶಕ್ತಿ ಹೊಂದಿದೆ. ಸಾಹಿತ್ಯಕ್ಕೆ ಜಾಗೃತಿಯ ದಿವ್ಯ ಸಾಧನ, ಕಲೆಯು ಪ್ರತಿ ಮನುಷ್ಯನ ಮೂಲ ಸಲೆ, ವೃತ್ತಿ ನಾಟಕಗಳು ಶಿಕ್ಷಣ ಕೊಡುವ ಮಾಧ್ಯಮ ಆಗಬೇಕು, ರಂಗಭೂಮಿ ಶಿಕ್ಷಣಕ್ಕಾಗಿ ಎನ್ನುವ ಪರಿಕಲ್ಪನೆ ಬರಬೇಕು, ಸಾಹಿತ್ಯ ಪ್ರಕಾರದಲ್ಲಿ ಶರಣ ಸಾಹಿತ್ಯ ಅದ್ಭತವಾದದ್ದು, ಜನಪದ ಸಾಹಿತ್ಯದ ಇನ್ನೊಂದು ರೂಪವೇ ಶರಣ ಸಾಹಿತ್ಯ.

-ಬಸವರಾಜ ಯಲಿಗಾರ,

ಡಿವೈಎಸ್ಪಿ ಹಾಗೂ ಸಾಹಿತಿ.