ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದರೂ ಕೂಡ 52 ಸಾವಿರ ಮತಗಳನ್ನು ನೀಡಿ ನನ್ನನ್ನು ಆಶಿರ್ವದಿಸಿದ್ದೀರಿ. ಈಗ ಲೋಕಸಭೆ ಚುನಾವಣೆ ಬಂದಿದೆ. ಚುನಾವಣೆಗೂ ಮುನ್ನ ಎಲ್ಲಾ ಪಕ್ಷದವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದರೆ ಮರ್ಯಾದೆ ಇರುವ ಕಡೆ ನನ್ನ ನಡೆ ಇರಲಿದೆ ಎಂದು ಮಾಜಿ ಜಿ.ಪಂ. ಅಧ್ಯಕ್ಷ ನಿತೀನ್ ಗುತ್ತೇದಾರ ತಿಳಿಸಿದರು.ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರದಲ್ಲಿ ಬೆಂಬಲಿಗರ ಸಭೆ ಕರೆದು ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ನಮ್ಮ ಬೆಂಬಲ ಬೇಕೆಂದು ಎರಡು ರಾಷ್ಟ್ರೀಯ ಪಕ್ಷದವರು ಕೇಳುತ್ತಿದ್ದಾರೆ. ಆದರೆ ನಮ್ಮ ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೋ ಅವರಿಗೆ ನಮ್ಮ ಬೆಂಬಲ ಇರಲಿದೆ. ನನಗೆ ನನ್ನ ಬೆಂಬಲಿಗರು, ಹಿತೈಷಿಗಳೇ ಹೈಕಮಾಂಡ್ ಇದ್ದಂತೆ ಹೀಗಾಗಿ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ಸಭೆ ಕರೆದಿದ್ದೇನೆ ಎಂದರು.
ನೀವು ಯಾವ ರೀತಿ ಸಲಹೆ ನೀಡುತ್ತೀರಿ ಅದನ್ನು ಸ್ವಿಕರಿಸಿ ಮುನ್ನಡೆಯುತ್ತೇನೆ ಎಂದ ಅವರು, ಅಫಜಲ್ಪುರ ತಾಲೂಕಿನಲ್ಲಿ ಅಡ್ಜಸ್ಟ್‌ಮೆಂಟ್ ರಾಜಕೀಯ ಮೀತಿ ಮೀರಿ ನಡೆಯುತ್ತಿದೆ. ಕ್ಷೇತ್ರದ ಜನರ ಕಾಳಜಿ ಇಲ್ಲದವರು ಒಟ್ಟಾಗಿ ಕ್ಷೇತ್ರದ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹಾಲಿ, ಮಾಜಿ ಶಾಸಕರು ನನ್ನನ್ನು ಅವರಿರುವ ಪಕ್ಷಕ್ಕೆ ಸೇರಿಸಿಕೊಳ್ಳದಂತೆ ತಂತ್ರಗಾರಿಕೆ ನಡೆಸಿದ್ದಾರೆ. ಹಾಲಿ ಶಾಸಕ ನಾನಿರುವ ಪಕ್ಷಕ್ಕೆ ನಿತೀನ್ ಬರದಂತೆ ತಡೆಯುತ್ತಿದ್ದೇನೆ ಎಂದರೆ ಮಾಜಿ ಶಾಸಕ ಕೂಡ ನಮ್ಮ ಪಕ್ಷಕ್ಕೆ ನಿತೀನ್ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.ಆದರೆ, ನಮ್ಮ ಬೆಂಬಲಿಗರ ಪಡೆ ನೋಡಿರುವ ಎರಡು ಪಕ್ಷಗಳ ಹೈಕಮಾಂಡ್‌ನವರು ನನ್ನನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಮನವಿ ಮಾಡುತ್ತಿದ್ದಾರೆ. ನಾನು ಮತ್ತು ನನ್ನ ಬೆಂಬಲಿಗರು ಯಾವುದೇ ಪಕ್ಷಕ್ಕೆ ಹೋದರೂ ಅದೇ ಪಕ್ಷದ ಅಭ್ಯರ್ಥಿ ಲೋಕಸಮರ ಗೆಲ್ಲಲಿದ್ದಾರೆ. ಈ ಚುನಾವಣೆಯಲ್ಲಿ 35 ಸಾವಿರ ಮ್ಯಾಜಿಕ್ ಮತಗಳಿಂದ ಅಭ್ಯರ್ಥಿಯ ಗೆಲುವಾಗಲಿದ್ದು ಅಷ್ಟು ಮತಗಳು ನಮ್ಮ ಬಳಿ ಇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪ್ರಮುಖರಾದ ಮಕ್ಬೂಲ ಪಟೇಲ್, ಭಾಷಾಪಟೇಲ ಹಸರಗುಂಡಗಿ, ಸಾಯಬಣ್ಣ ಜಮಾದಾರ, ತುಕಾರಾಮಗೌಡ ಪಾಟೀಲ್ ಮಾತನಾಡಿ, ನಿತೀನ್ ಗುತ್ತೇದಾರ ಶಕ್ತಿ ಸಣ್ಣದಲ್ಲ. ಅವರು ಯಾವುದೇ ಪಕ್ಷಕ್ಕೆ ಬೆಂಬಲಿಸಿದರೂ ನಾವು ಅವರಿರುವ ಪಕ್ಷಕ್ಕೆ ಮತ ನೀಡುತ್ತೇವೆ. ನಿತೀನ್ ಗುತ್ತೇದಾರ ಕಾಂಗ್ರೆಸ್‌ಗೆ ಬಂದರೆ ಕಳೆದ ಬಾರಿಯ 37 ಸಾವಿರ ಬಿಜೆಪಿ ಲೀಡ್ ಮೈನಸ್ ಆಗಿ 15 ಸಾವಿರ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಆಗಲಿವೆ. ಇನ್ನೂ ಬಿಜೆಪಿಗೆ ಬಂದರೆ ಕಳೆದ ಬಾರಿಯ 37 ಸಾವಿರದ ಜೊತೆಗೆ ಮತ್ತೆ 35 ಸಾವಿರ ಮತಗಳು ಪ್ಲಸ್ ಆಗಲಿವೆ ಎಂದ ಅವರು ಶಾಸಕ ಎಂ.ವೈ ಪಾಟೀಲ್, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಹೊಂದಾಣಿಕೆ ರಾಜಕೀಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕೇಟಲಿ ಶಕ್ತಿ ಏನೆಂದು ತೋರಿಸೋಣ ಎಂದರು.ಮುಖಂಡರಾದ ಶಂಕು ಮ್ಯಾಕೇರಿ, ದಿಲೀಪ ಪಾಟೀಲ್, ವಿಶ್ವನಾಥ ಕಾರ್ನಾಡ, ವೀರಯ್ಯ ಸ್ವಾಮಿ, ಭಗವಂತ ವಗ್ಗೆ, ಬಸವರಾಜ ಚಾಂದಕವಟೆ, ಬೀರಣ್ಣ ಕನಕಟೇಲರ್ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಶೈಲ ಡಾಂಗೆ, ಕಲ್ಯಾಣರಾವ ನಾಗೋಜಿ, ಮಹಾದೇವ ಗುತ್ತೇದಾರ, ಅಣ್ಣಾರಾವ ಪಾಟೀಲ, ಅರವಿಂದ ಹಾಳಕಿ, ಸಿದ್ದಣಗೌಡ ಪಾಟೀಲ ರೇವೂರ, ಅಶೋಕ ಗುಡ್ಡಡಗಿ, ರಮೇಶ ಬಾಕೆ, ರಾಜು ಜಿಡ್ಡಗಿ, ವೈಜನಾಥ ನಿಂಗದಳ್ಳಿ, ಶಿವಪುತ್ರಪ್ಪ ಕರೂರ, ಗುರು ಸಾಲಿಮಠ, ಸುಭಾಷ ರಾಠೋಡ, ಮಹಾಂತ ಬಳೂಂಡಗಿ, ಜ್ಯೋತಿಗೌಡ ಪಾಟೀಲ, ಧನರಾಜ ನೂಲಾ, ಸಂತೋಷ ಶೆಟ್ಟಿ, ಸುನೀಲ ಶೆಟ್ಟಿ, ಧಾನು ಪತಾಟೆ, ಆನಮದ ಶೆಟ್ಟಿ, ಪ್ರಭು ದೇವತ್ಕಲ, ಲಕ್ಷ್ಮೀಪುತ್ರ ಮನಮಿ, ಶಿವರಾಜ ಸಜ್ಜನ, ಭಗವಂತರಾವ ಕಾಮಜೀ, ಶಾಂತಯ್ಯ ಹಿರೇಮಠ, ಭೀಮಾಶಂಕರ ಖೈರಾಟ, ವೀರಣ್ಣ ಶಂಕರಶೆಟ್ಟಿ, ಶರಣಗೌಡ ಪೊಲೀಸಪಾಟೀಲ, ಮಲ್ಲಿಕಾರ್ಜುನ ಗೋಳಸಾರ, ಮಹಾಂತೇಶ ಬಡದಾಳ ಸೇರಿದಂತೆ ಅನೇಕರು ಇದ್ದರು.ನಾನು ಇನ್ನೂ ಚಿಕ್ಕವನು ನಿಮ್ಮ ಸೇವೆ ಬಯಸಿ ರಾಜಕೀಯ ರಂಗಕ್ಕೆ ಬಂದಾಗ ಜೊತೆಗೆ ನಿಂತ ಹಿರಿಯರು, ಕಿರಿಯರು, ಯುವಕರೆಲ್ಲರ ಸಹಕಾರದಿಂದ ಇಡೀ ರಾಜ್ಯ ರಾಜಕೀಯ ನನ್ನನ್ನು ಗಮನಿಸುವಂತೆ ಮಾಡಿದ್ದೀರಿ. ನಿಮ್ಮ ಋಣ ನನ್ನ ಬದುಕಿನಲ್ಲಿ ಯಾವತ್ತೂ ಮರೆಯುವುದಿಲ್ಲ. ಬದುಕಿನುದ್ದಕ್ಕೂ ನಿಮ್ಮ ಸೇವೆ ಮಾಡುವ ಶಕ್ತಿ ನೀಡಿ. ನಿಮ್ಮ ತಲೆ ಕೆಳಗಾಗುವ ಯಾವ ಕೆಲಸವು ನಾನು ಮಾಡುವುದಿಲ್ಲ ಎಂದು ನಿತೀನ್ ಗುತ್ತೇದಾರ ಭಾವುಕರಾಗಿ ನೆರೆದಿದ್ದ ಬೆಂಬಲಿಗರಿಗೆ ದೀರ್ಘದಂಡ ನಮಸ್ಕಾರ ಹಾಕಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಮಾತನಾಡಿದ ಘಟನೆ ನಡೆಯಿತು.
;Resize=(128,128))
;Resize=(128,128))
;Resize=(128,128))