ಕನ್ನಡಪ್ರಭವಾರ್ತೆ ತಿಪಟೂರು

ನ್ನರ್‌ವೀಲ್ ಕ್ಲಬ್ ನೂರಾರು ದೇಶಗಳಲ್ಲಿ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದು ತಿಪಟೂರು ಶಾಖೆಯ ಅಧ್ಯಕ್ಷೀಯ ಅಧಿಕಾರವನ್ನು ನಾನು ವಹಿಸಿಕೊಳ್ಳುತ್ತಿದ್ದು ಕ್ಲಬ್‌ನ ಆಶಯದಂತೆ ನನ್ನ ಅಧಿಕಾರಾವಧಿಯಲ್ಲಿ ಹೆಚ್ಚಿನ ಸೇವೆ ಮಾಡಿ ಇನ್ನರ್‌ವೀಲ್‌ಕ್ಲಬ್‌ನ ಗೌರವ-ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತೇನೆಂದು ನೂತನ ಅಧ್ಯಕ್ಷರಾದ ಬಿ.ಎಚ್. ಕಾಂತಾಮಣಿ ತಿಳಿಸಿದ್ದಾರೆ.

ಇನ್ನರ್‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಕ್ಲಬ್‌ನ್ನು ಹಿಂದಿನ ಅಧ್ಯಕ್ಷರುಗಳು, ಪದಾಧಿಕಾರಿಗಳು ಯಶಸ್ವಿಯಾಗಿ ನಡೆಸಿಕೊಂಡು ಬಂದಂತೆ ನಾನು ಸಹ ಮುಂದುವರೆಸಿಕೊಂಡು ಹೋಗುತ್ತೇನೆ. ಮಹಿಳೆಯರ ಸಮಾನತೆ, ಸಬಲೀಕರಣ ಸೇರಿದಂತೆ ಅವರ ಸಾಧನೆಗಳನ್ನು ಎತ್ತಿ ಹಿಡಿಯುವಂತಹ ಯೋಜನೆಗಳನ್ನು ಹಾಕಿಕೊಂಡು ಎಲ್ಲರ ಸಹಕಾರದಿಂದ ನಡೆಸುತ್ತೇನೆ. ಸ್ನೇಹ-ಸಮಾಜಸೇವೆಯೇ ನಮ್ಮ ಕ್ಲಬ್‌ನ ಉದ್ದೇಶವಾಗಿದ್ದು ಸಂಬಂದಿಸಿದ ಕಾರ್ಯಕ್ರಮಗಳನ್ನು ನಿಸ್ವಾರ್ಥವಾಗಿ ಮಾಡೋಣ. ಗ್ರಾಮೀಣ ಭಾಗದ ಬಡಜನರ ಸೇವೆ, ಶೈಕ್ಷಣಿಕ, ಪರಿಸರ ಸಂರಕ್ಷಣೆ, ಪ್ರಕೃತಿ ಉಳಿವಿಗೆ ಸಾಕಷ್ಟು ಗಿಡಗಳನ್ನು ನೆಡುವುದು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಹಾಯ, ಸಹಕಾರವೇ ಕ್ಲಬ್‌ನ ಮೂಲ ಧ್ಯೇಯವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಮಾರಂಭದಲ್ಲಿ ಹಿಂದಿನ ಅಧ್ಯಕ್ಷರಾದ ಸುಜಾತರಾಜುರವರು ಅಧಿಕಾರ ಹಸ್ತಾಂತರ ಮಾತನಾಡಿ ನಮ್ಮ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಲು ಎಲ್ಲರೂ ಸಹಕರಿಸಿದ್ದು, ನೂತನ ಅಧ್ಯಕ್ಷರಾದ ಕಾಂತಾಮಣಿಯವರು ಕೆಲಸ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇವೆಂದು ತಿಳಿಸಿ ಶುಭಕೋರಿದರು.

ನೂತನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ರಮಷಡಕ್ಷರಿ ಯವರು ಸಮಾಜಸೇವೆ ಜೊತೆಗೆ ಅಸಹಾಯಕರಿಗೆ ಸಾಕಷ್ಟು ಹೊಸ ಸೇವೆಯ ನಕ್ಷೆ ಹಾಕಿಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಖಜಾಂಚಿಯಾಗಿ ಸುಷ್ಮಾರವರು, ಐಎಸ್‌ಓ ಆಗಿ ಜಯಮ್ಮನವರು, ಎಡಿಟರ್ ಆಗಿ ಕವಿತಾರವರು ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ಜಿಲ್ಲಾ ಕ್ಲಬ್‌ನ ಪಿಡಿಸಿ ರೇಖಾಬಾಬುರವರು, ಇನ್ನರ್‌ವೀಲ್ ಕ್ಲಬ್‌ನ ಎಲ್ಲ ಸದಸ್ಯರು, ಗಣ್ಯರು ಬಾಗವಹಿಸಿದ್ದರು.