ಮುಂದೆ ಬರುವ ನಗರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಶಕ್ತಿ ತೋರಿಸುವೆ: ಪ್ರದೀಪ್‌ ಈಶ್ವರ್‌

| N/A | Published : Apr 09 2025, 12:34 AM IST / Updated: Apr 09 2025, 01:12 PM IST

ಮುಂದೆ ಬರುವ ನಗರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಶಕ್ತಿ ತೋರಿಸುವೆ: ಪ್ರದೀಪ್‌ ಈಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ಚಿನ್ಹೆಯಡಿ ಮುಂದೆ ಬರುವ ನಗರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲಿದ್ದಾರೆ. ಅವರಲ್ಲಿ ಎಲ್ಲ ರೀತಿಯ ಶಕ್ತಿಯೂ ಇದೆಯಂತೆ, ಚುನಾವಣೆ ಗೆಲ್ಲಲು ಧೈರ್ಯ, ಜನ ಬೆಂಬಲ ಬೇಕು ಅದು ಶಾಸಕರ ಬಳಿ ಇದೆಯೆಂತೆ

 ಚಿಕ್ಕಬಳ್ಳಾಪುರ : ಬಿಜೆಪಿಯಯಲ್ಲಿ ನನಗೆ ಇಷ್ಟವಾಗುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಣ್ಣ, ಅವರು ನನಗೆ ಉತ್ತಮ ಸ್ನೇಹಿತರು. ಅದೇ ರೀತಿ ಆರ್.ಅಶೋಕ್, ಪ್ರಹ್ಲಾದ್ ಜೋಷಿ ಸಾಹೇಬರು, ಸಿ.ಟಿ.ರವಿ. ಮಾಜಿ ಸಂಸದ ಪ್ರತಾಪ ಸಿಂಹಗೆ ನನ್ನ ಮೇಲೆ ಎಷ್ಟು ಪ್ರೀತಿ ಅಂದರೆ ನನ್ನ ಮೇಲೆ 4 ಮಾನನಷ್ಟ ಮೊಕ್ಕದ್ದಮೆ ದಾಖಲಿಸಿದ್ದಾರೆ. ಪ್ರತಾಪ ಸಿಂಹ ಅವರು ಫೈರ್ ಬ್ರಾಂಡ್ ಅಂತೆ, ಆ ಬ್ರಾಂಡ್‌ಗಳನ್ನು ಫೈರ್ ಮಾಡುವವನು ನಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಕ್ಷೇತ್ರದ ನಗರದ ವಾರ್ಡ್‌ಗಳ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರತಾಪ ಸಿಂಹ ನನ್ನೊಂದಿಗೆ ಡಿಬೇಟ್‌ಗೆ ಬಾರಪ್ಪ ಎಂದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತಾರೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಅದನ್ನು ಕಂಡು ಬಿಜೆಪಿಯವರಿಗೆ ನಿದ್ದೆ ಬರುತ್ತಿಲ್ಲ ಎಂದರು.

ಚುನಾವಣೆಯಲ್ಲಿ ಶಕ್ತಿ ತೋರಿಸುವೆ

ಪಕ್ಷದ ಚಿನ್ಹೆಯಡಿ ಮುಂದೆ ಬರುವ ನಗರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನೋಡಿ ನಾನು ಏನು ಎಂದು ತಿಳಿಯುತ್ತದೆ. ನನ್ನಲ್ಲಿ ಎಲ್ಲ ರೀತಿಯ ಶಕ್ತಿ ಇದೆ. ಚುನಾವಣೆ ಗೆಲ್ಲಲು ಧೈರ್ಯ, ಜನ ಬೆಂಬಲ ಬೇಕು ಅದು ನನ್ನ ಬಳಿ ಇದೆ ಎಂದರು.

ಈ ವೇಳೆ ತಹಸೀಲ್ದಾರ್ ಅನಿಲ್, ಪೌರಾಯುಕ್ತ ಮನ್ಸೂರ್ ಆಲಿ,ಎಡಿಎಲ್ ಆರ್ ವಿವೇಕ್ ಮಹದೇವ್ ನಗರಸಭೆ ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್, ಅಂಬರೀಶ್,ಮೊಹಮದ್ ಜಾಫರ್, ಶಕೀಲಾಭಾನು, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಮತ್ತಿತರರು ಇದ್ದರು.