ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ

| Published : Jul 04 2024, 01:03 AM IST

ಸಾರಾಂಶ

ಮೊಳಕಾಲ್ಮೂರು ತಾಲೂಕಿನ ರಾಂಪುರ ಎಲ್ಲಮ್ಮ ಎಸ್ಟೇಟ್ ಆವರಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಹುಟ್ಟು ಹಬ್ಬ ಆಚರಿಸಿದರು.

ಹುಟ್ಟುಹಬ್ಬ ಸಂಭ್ರಮದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ನಿಮ್ಮೆಲ್ಲರ ಅಭಿಮಾನದ ಹಾರೈಕೆ ಸದಾ ಈಗೆಯೇ ಇದ್ದಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ರಾಂಪುರ ಎಲ್ಲಮ್ಮ ಎಸ್ಟೇಟ್ ಆವರಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರಿಂದ ಏರ್ಪಡಿಸಿದ್ದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಹುಟ್ಟು ಹಬ್ಬ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಡಂಬರದ ಸಂಭ್ರಮಾಚರಣೆಗಳನ್ನು ಎಂದಿಗೂ ಇಷ್ಟ ಪಡುವಂತ ವ್ಯಕ್ತಿ ನಾನಲ್ಲ. ಸದಾ ಅಭಿವೃದ್ಧಿಯ ಮೂಲಕ ಸಂಭ್ರಮ ಪಡುವಂತ ವ್ಯಕ್ತಿ ನಾನು. ಕ್ಷೇತ್ರದ ಕಾರ್ಯಕರ್ತರು ನನ್ನ ಹುಟ್ಟು ಹಬ್ಬವನ್ನು ಅಭಿಮಾನದಿಂದ ಆಚರಿಸಿದ್ದೀರಿ. ನಿಮ್ಮಗಳ ಅಭಿಮಾನದ ಹಾರೈಕೆ ಮತ್ತು ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಇದೇ ಕ್ಷೇತ್ರದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಬೃಹತ್ ಹೂವಿನ ಹಾರಗಳು ತಂದು ಕೇಕ್ ಕತ್ತರಿಸಿ ಸಂಭ್ರಮಿಸಿದರು. ರಾಂಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎನ್‌.ವೈ. ಗೋಪಾಲಕೃಷ್ಣ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.

ಅಧಿಕಾರಿಗಳು ಬಹುತೇಕರು ಮಕ್ಕಳಿಗೆ ಆಗತ್ಯ ಇರುವಂತ ಪೆನ್ನು, ನೋಟ್ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರೆ ಇನ್ನು ಕೆಲವರು ಸಸಿಗಳನ್ನು ಉಡುಗೊರೆ ನೀಡಿದ್ದು ವಿಶೇಷವಾಗಿ ಕಂಡು ಬಂದಿತು.