ಸಾರಾಂಶ
ಶಿವಲಿಂಗಪ್ಪ ಅವರ ಬಸವಾನುಯಾಯಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗಂಗಾವತಿನಾನು, ನೀನು ಎನ್ನುವುದು ಅಹಂಕಾರ, ನಾವು ಎನ್ನುವದು ಪರಿಹಾರ ಎಂದು ಜಾನಪದ ತಜ್ಞ ನಾಡೋಜ ಗೊ.ರು. ಚೆನ್ನಬಸಪ್ಪ ಹೇಳಿದರು.ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಘಟಕ, ಉಮಾ ಪ್ರಕಾಶನ ಹಿರೇಜಂತಗಲ್ ಇವುಗಳ ಸಹಯೋಗದಲ್ಲಿ ಜಿ.ಶಿವಲಿಂಗಪ್ಪ ಅವರ ಬಸವಾನುಯಾಯಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ನಾನು, ನೀನು ಅಂದುಕೊಂಡವರು ಅಹಂಕಾರದಿಂದ ಇರುತ್ತಾರೆ. ನಾವು ಎನ್ನುವರು ಎಲ್ಲರಲ್ಲಿ ಬೆರೆಯುವ ವ್ಯಕ್ತಿಯಾಗಿರುತ್ತಾರೆ. ಯಾರು ಅಹಂಕಾರ ಬಿಟ್ಟು ನಮ್ಮವರು, ನಾವೆಲ್ಲರೂ ಎಂದಾಗ ಮಾತ್ರ ಹೊರಹೊಮ್ಮಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಜಿ. ಶಿವಲಿಂಗಪ್ಪ ಅವರ ಅಭಿನಂದನಾ ಗ್ರಂಥದಲ್ಲಿ ಎಲ್ಲ ವಿಷಯಗಳು ಅಡಕವಾಗಿವೆ ಎಂದರು. ಆತ್ಮಸಾಕ್ಷಿ, ಆತ್ಮಕತೆ ಇತಿಹಾಸ ತಿಳಿಸುವ ಗ್ರಂಥವೇ ಅಭಿನಂದನಾ ಗ್ರಂಥವಾಗಿದೆ ಎಂದರು.ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಮಾತನಾಡಿ, ಮನುಷ್ಯನಿಗೆ ಆಧ್ಯಾತ್ಮ, ಧರ್ಮ ಬೇಕು ಅಂದಾಗ ಮಾತ್ರ ಮನುಷ್ಯನು ನೆಮ್ಮದಿಯಿಂದ ಇರಲು ಸಾದ್ಯ. ಈ ನಿಟ್ಟಿನಲ್ಲಿ ಜಿ. ಶಿವಲಿಂಗಪ್ಪ ಅವರ ಅಭಿನಂದನಾ ಗ್ರಂಥ ಹೊರತಂದಿರುವುದು ಪ್ರಶಂಸನೀಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿದರು. ಈ ಸಂದರ್ಭ ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಬಸವಾನುಯಾಯಿ ಗ್ರಂಥದ ಪ್ರಧಾನ ಸಂಪಾದಕ ಡಾ. ಎನ್.ಡಿ. ತಿಪ್ಪೇಸ್ವಾಮಿ, ಮಾತನಾಡಿದರು.ಸಾಹಿತಿ ಸಿ.ಎಚ್. ಅಧ್ಯಕ್ಷತೆ ನಾರಿನಾಳ ವಹಿಸಿದ್ದರು. ಇಲಕಲ್ ಚಿತ್ತರಗಿ ಗುರುಮಹಾಂತ ಸ್ವಾಮೀಜಿ, ಸುಳೇಕಲ್ ಭುವನೇಶ್ವರಯ್ಯ ತಾತನವರು ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದ ಶಿವರಾಮೇಗೌಡ, ಶ್ರೀದೇವಿ ಕೃಷ್ಣಪ್ಪ, ಪವನಕುಮಾರ ಗುಂಡೂರು, ಕಸಾಪ ಅಧ್ಯಕ್ಷ ಶ್ರೀನಿವಾಸ ಅಂಗಡಿ, ರುದ್ರೇಶ ಆರಾಳ್ ಸೇರಿದಂತೆ ಪ್ರಮುಖರು ಇದ್ದರು.
ಸಿ. ಮಹಾಲಕ್ಷ್ಮೀ ಪ್ರಾರ್ಥಿಸಿ, ಶ್ರೀನಿವಾಸ ಅಂಗಡಿ ಸ್ವಾಗತಿಸಿ, ಲಿಂಗಾರೆಡ್ಡಿ ಆಲೂರು ನಿರೂಪಿಸಿದರು.