ಜೆಎಸ್ಎಸ್ ಕೆವಿಕೆಯಲ್ಲಿವಿಶ್ವ ಪರಿಸರ ದಿನ

| Published : Jun 08 2024, 12:33 AM IST

ಸಾರಾಂಶ

ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ಮಾಡುವ ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ನೇರಳೆ ಹಣ್ಣಿನ ಗಿಡಗಳನ್ನು ಕೊಟ್ಟು ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಲಾಯಿತು

ಕನ್ನಡಪ್ರಭ ವಾರ್ತೆ ಸುತ್ತೂರು

ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನವನ್ನು ಭೂಮಿಯ ಪುನಸ್ಥಾಪನೆ, ಬರ ಸ್ಥಿತಿ ಸ್ಥಾಪಕತ್ವ ಮತ್ತು ಮರುಭೂಮಿಕರಣ ಎಂಬ ಘೋಷ ವಾಕ್ಯಗಳೊಂದಿಗೆ ಆಚರಿಸಿತು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೊಡ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಿತು. ಆದರೆ ಈ ವರ್ಷ ವಿಶೇಷವಾಗಿ 25 ಬಗೆಯ ಭವಿಷ್ಯದ ಹಣ್ಣಿನ 50 ಗಿಡಗಳನ್ನು ನೆಡುವುದರ ಜೊತೆಗೆ ನೆರೆದ ರೈತರಿಗೆ ಅವುಗಳ ಉಪಯೋಗಗಳನ್ನು ತಿಳಿಸಲಾಯಿತು, ನಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ಮಾಡುವ ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ನೇರಳೆ ಹಣ್ಣಿನ ಗಿಡಗಳನ್ನು ಕೊಟ್ಟು ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಲಾಯಿತು ಹಾಗೂ ಪ್ರತಿಯೊಬ್ಬರಿಗೂ ಗಿಡಗಳನ್ನು ನೆಟ್ಟು ಪರಿಸರ ಉಳಿಸಲು ಉತ್ತೇಜನ ನೀಡಲಾಯಿತು.

ಈ ವರ್ಷ ಸೂತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಸಕ್ತರಿಗೆ ಉಚಿತವಾಗಿ ಒಂದು ಸಾವಿರ ಗಿಡಗಳನ್ನು ಕೊಟ್ಟು 3 ಹಂತದಲ್ಲಿ ಒಂದು ಸಾವಿರ ಗಿಡಗಳನ್ನು ನೆಡಲು ಉತ್ತೇಜನ ಮಾಡುವುದು. ಮೊದಲನೇ ಹಂತ ವಿಶ್ವ ಪರಿಸರ ದಿನಾಚರಣೆ, ಎರಡನೆ ಹಂತ ಜು. 16 ರಂದು ಐಸಿಎಆರ್ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಹಂತ ಆ. 15 ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಂದು ಈ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸುವುದಾಗಿದೆ. ಈ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ರೈತರು ಭಾಗವಹಿಸಿ ಯಶಸ್ವಿ ಮಾಡಲಾಯಿತು.