ಸಾರಾಂಶ
ಸಮಾಜದಲ್ಲಿ ನಿರಂತರವಾಗಿ ಜನರಿಗೆ ಘಾತವನ್ನುಂಟು ಮಾಡುತ್ತಿದ್ದ ಮೂಢನಂಬಿಕೆ, ಇತ್ಯಾದಿಗಳನ್ನು ತ್ಯಜಿಸಿ ನೆಮ್ಮದಿಯಿಂದ ದೇವರನ್ನು ಪ್ರಾರ್ಥಿಸಿದರೆ ಮಾತ್ರ ನಾವು ಒಳಿತನ್ನು ಕಾಣಬಹುದಾಗಿದೆ.
ಚಳ್ಳಕೆರೆ: ಸಮಾಜದಲ್ಲಿ ನಿರಂತರವಾಗಿ ಜನರಿಗೆ ಘಾತವನ್ನುಂಟು ಮಾಡುತ್ತಿದ್ದ ಮೂಢನಂಬಿಕೆ, ಇತ್ಯಾದಿಗಳನ್ನು ತ್ಯಜಿಸಿ ನೆಮ್ಮದಿಯಿಂದ ದೇವರನ್ನು ಪ್ರಾರ್ಥಿಸಿದರೆ ಮಾತ್ರ ನಾವು ಒಳಿತನ್ನು ಕಾಣಬಹುದಾಗಿದೆ. ಸರ್ವವನ್ನು ತ್ಯಾಗಮಾಡಿ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ತ್ಯಾಗಿ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮ ಆಚರಣೆ ನಮ್ಮೆಲ್ಲರಿಗೂ ಹೊಸ ಶಕ್ತಿ ತುಂಬಿದೆ ಎಂದು ತಹಸೀಲ್ದಾರ್ ರೇಹಾನ್ ಪಾಷ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಾವು ಅನೇಕ ಧಾರ್ಮಿಕ ಮಹಾನ್ ಪುರುಷರ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ. ಧಾರ್ಮಿಕ ಜಾಗೃತಿ ಮೂಡಿಸಿದ ಭಗವಾನ್ ಮಹಾವೀರರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ಸದಾಸ್ಫೂರ್ತಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಜೈನ ಸಮಾಜದವತಿಯಿಂದ ಬೆಂಗಳೂರು ರಸ್ತೆಯಲ್ಲಿರುವ ಜೈನ ಕಲ್ಯಾಣ ಮಂಟಪದಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ಜೈನ ಸಮಾಜದ ಗೌರವಾಧ್ಯಕ್ಷ ಅಂಬಣ್ಣ, ಪ್ರಧಾನ ಕಾರ್ಯದರ್ಶಿ ಡಿ.ಭರತ್ ರಾಜ್, ಸಂಘಟನಾ ಕಾರ್ಯದರ್ಶಿ ಗೌರಿಪುರ ಪಾಶ್ವನಾಥ, ಕಾರ್ಯದರ್ಶಿ ಡಾ.ವಿಜಯೇಂದ್ರ, ನಿರ್ದೇಶಕ ಡಿ.ಪ್ರಭಾಕರ, ನವೀನ್, ಚೈತನ್ ಜೈನ್, ರಾಜೇಶ್ ಜೈನ್, ದರ್ಶನ್ ಜೈನ್, ಮುಕ್ತ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಡಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.