ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರತಿಯೊಬ್ಬ ಮಕ್ಕಳು ಸುಶಿಕ್ಷಿತರಾಗಿ ಅವರಲ್ಲೂ ಸೇವಾ ಸದ್ಭಾವನೆ ಬೆಳೆಯಬೇಕು ಎಂಬ ಉದಾತ್ತ ಚಿಂತನೆಯಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಉಚಿತವಾಗಿ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ಬೆಂಗಳೂರಿನ ವಾಸವಿ ಸ್ನೇಹ ಕೂಟದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.ನಗರದ ಗರುಡನಗಿರಿ ರಸ್ತೆಯಲ್ಲಿರುವ ಸೇವಾ ಸಂಕಲ್ಪ ವಿದ್ಯಾಶಾಲೆಯಲ್ಲಿ ಬೆಂಗಳೂರಿನ ವಾಸವಿ ಸ್ನೇಹ ಕೂಟದವತಿಯಿಂದ ಏರ್ಪಡಿಸಿದ್ದ ಮಕ್ಕಳಿಗೆ ನೋಟ್ ಪುಸ್ತಕಗಳು, ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಬೆಳೆಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳಿಗೆ ವಿದ್ಯೆಯಲ್ಲಿ ಆಸಕ್ತಿಯಿಲ್ಲ ಎಂದು ಅಂತಹ ಶಾಲೆಯನ್ನು ಪೋಷಕರು ಬಿಡಿಸಬಾರದು. ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಶಿಕ್ಷಕರು ಉತ್ತೇಜನವನ್ನ ನೀಡಿದಾಗ ವಿದ್ಯಾವಂತರಾಗಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದಾತ್ತ ಚಿಂತನೆಯಲ್ಲಿ ಬೆಂಗಳೂರಿನ ವಾಸವಿ ಸ್ನೇಹ ಕೂಟ ಕಳೆದ 17 ವರ್ಷಗಳ ಹಿಂದೆ ಸಮಾನ ಮನಸ್ಸ ಸ್ನೇಹಿತರೆಲ್ಲರು ಸೇರಿ ವಾಸವಿ ಸ್ನೇಹ ಕೂಟ ಸ್ಥಾಪಿಸಿದ್ದು, ಕಳೆದ 14 ವರ್ಷಗಳಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ನಿರ್ದೇಶಕರಾದ ಕಿಶೋರ್ ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡದೆ ಸತತ ಪರಿಶ್ರಮದಿಂದ ಹೆಚ್ಚಿನ ಆಸಕ್ತಿ ವಹಿಸಿ ತಾವುಗಳು ವಿದ್ಯಾಭ್ಯಾಸ ಮಾಡುವ ಮೂಲಕ ನಿಶ್ಚಿತ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಡಾ.ಕೆ.ಎಸ್.ಗಿರೀಶ್ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಶ್ರೀರಾಮ ಹಾಗೂ ಶ್ರೀಕೃಷ್ಣ ಸೇರಿದಂತೆ ಅನೇಕ ಮಹಾಪುರುಷರು ಹಾಗೂ ದೇಶ ಭಕ್ತರ ಜೀವನ ಚರಿತ್ರೆ ಅಧ್ಯಯನ ಮಾಡುವ ಜೊತೆಗೆ ಅವರ ಆದರ್ಶಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಸತ್ಪರ್ಜೆಗಳಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಆರ್.ಶ್ರೀಧರ್ ಮಾತನಾಡಿ, ಸಮಾಜದಲ್ಲಿನ ಬಡಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಬೇಕೆಂಬ ಸಂಕಲ್ಪದಲ್ಲಿ ನೇವಾ ಸಂಕಲ್ಪ ವಿದ್ಯಾಸಂಸ್ಥೆಯನ್ನು ಕಳೆದ 4 ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಗಿದ್ದು, ಅನೇಕ ಬಡ ಮಕ್ಕಳಿಗಳಿಗೆ ಮಾನವೀಯ ಮೌಲ್ಯಗಳ ಸಂಸ್ಕಾರಯುತ ಶಿಸ್ತುಬದ್ಧ ಶಿಕ್ಷಣವನ್ನು ಕಲಿಸುವ ಮೂಲಕ ಅವರನ್ನು ಸಮಾಜ ದಲ್ಲಿ ಸತ್ಪರ್ಜೆಗಳಾಗಿ ರೂಪಿಸುವಲ್ಲಿ ನಮ್ಮ ವಿದ್ಯಾಸಂಸ್ಥೆ ಜೊತೆಗೆ ಅನೇಕ ಸ್ವಯಂ ಸೇವಾ ಸಂಘ ಸಂಸ್ಥೆಗಳು ಸಹಕಾರ ನೀಡುತೀವಿ ಎಂದು ಸ್ಮರಿಸಿದರು.
ಕಾರ್ಯಕ್ರಮದ ನಂತರ ಸೇವಾ ಸಂಕಲ್ಪ ಶಾಲೆ ಹಾಗೂ ಚಲಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳು ವಿತರಿಸಲಾಯಿತು ವಾಸವಿ ಸ್ನೇಹ ಕೂಟದ ನಿರ್ದೇಶಕರಾದ ಡಾ.ಕೆ.ಎಸ್.ಗಿರೀಶ್, ನರೇಂದ್ರ ಬಾಬು ಕೆ.ಎಸ್.ದಿನೇಶ್, ಕೆ.ಎಸ್.ಎಲ್ ಪ್ರಸಾದ್, ಎಸ್.ಎ.ರಾಜೇಶ್ ಕೆ.ಎಸ್ ಸುರೇಶ್. ರಘುನಾಥ್ ಒ.ಎಸ್. ಮಹೇಶ್, ಮಹಾಲಕ್ಷ್ಯ ಮೃ, ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಶಂಕರ್ ನಿರ್ದೇಶಕರಾದಮೋಹನ್ ಕುಮಾರ್. ಮುರುಳೀದರ್ ಮಯೂರಿ ನಾಗೇಶ್, ಜಯಲಕ್ಷ್ಮೀ ಬಬ್ರುವಾಹನ ರಾವ್ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಕರಾದ ಬಸವಂತಪ್ಪ, ಕುಮಾರಸ್ಥಾಮಿ ಲೋಕೇಶ್ ಗಂಗಾಧರಪ್ಪ, ಪವನ್ ಚಂದ್ರಶೇಖರ್, ದೀಪಾ, ಸುಜಾತ, ಮುಖ್ಯ ಶಿಕ್ಷಕರಾದ ನಾಗಪ್ಪ ಮತ್ತು ಸಹ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.=============ಫೋಟೋ:ಅರಸೀಕೆರೆ ನಗರದಸೇವಾ ಸಂಕಲ್ಪ ಶಾಲೆಯಲ್ಲಿ ಬೆಂಗಳೂರಿನ ವಾಸವಿ ಸ್ನೇಹ ಕೂಟವತಿಯಿಂದ ನಗರದ ಸೇವಾ ಸಂಕಲ್ಪ ಶಾಲೆ ಹಾಗೂ ತಾಲೂಕಿನ ಚಲಾವುದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.