ಸಾರಾಂಶ
‘ಇದು ಎಂಥ ಲೋಕವಯ್ಯ’ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮ ಬುಧವಾರ ಸಂಜೆ ನಗರದ ಬಿಗ್ ಸಿನೆಮಾಸ್‌ನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ‘ಇದು ಎಂಥ ಲೋಕವಯ್ಯ’ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮ ಬುಧವಾರ ಸಂಜೆ ನಗರದ ಬಿಗ್ ಸಿನೆಮಾಸ್‌ನಲ್ಲಿ ನಡೆಯಿತು.ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಮಾತಾಡಿ, ಚಿತ್ರದ ನಿರ್ಮಾಪಕ ಮಿತ್ರ ನರೇಶ್ ಶೆಣೈ ಅವರು ಒಬ್ಬ ಒಳ್ಳೆಯ ಉದ್ಯಮಿಯಾಗಿ ಯಶಸ್ವಿಯಾಗಿದ್ದಾರೆ. ಅವರು ಮುಟ್ಟಿದ ಕ್ಷೇತ್ರವೆಲ್ಲ ಸಕ್ಸಸ್ ಆಗಿದೆ. ಈ ಸಿನಿಮಾ ಮತ್ತೊಂದು ಕಾಂತಾರ ಸಿನಿಮಾದಂತೆ ಯಶಸ್ಸು ಕಾಣಲಿ ಎಂದರು.ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನರೇಶ್ ಶೆಣೈ ಕಾಲಿಡದ ಕ್ಷೇತ್ರವಿಲ್ಲ. ಅವರ ಸಿನಿಮಾ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಚಿತ್ರ ನಿರ್ಮಾಪಕ ಮಂಗಲ್ಪಾಡಿ ನರೇಶ್ ಶೆಣೈ, ಮೀನಾಕ್ಷಿ ಶೆಣೈ, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ಉದ್ಯಮಿ ಪ್ರದೀಪ್ ಪೈ, ನಟ ವಿನೀತ್ ಕುಮಾರ್, ಪ್ರಕಾಶ್ ತೂಮಿನಾಡ್, ಯತೀಶ್ ಬೈಕಂಪಾಡಿ, ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದೀಪಾ ಪೈ, ಗೋಪಿನಾಥ್ ಭಟ್, ದಾಯ್ಜಿ ವರ್ಲ್ಡ್ ವಾಲ್ಟರ್ ನಂದಳಿಕೆ, ಚಂದ್ರಹಾಸ್ ಉಳ್ಳಾಲ, ಜಗನ್ನಾಥ ಶೆಟ್ಟಿ ಬಾಳ, ಕೆ.ಕೆ. ಪೇಜಾವರ ಮತ್ತಿತರರು ಇದ್ದರು. ಕಿರಣ್ ಶೆಣೈ ನಿರೂಪಿಸಿದರು.