ನಿಟ್ಟೆ ವಿಶ್ವವಿದ್ಯಾಲಯ ಅಂಗಸಂಸ್ಥೆ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು, ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯಲ್ಲಿ ನಡೆದ ಪ್ರತಿಷ್ಠಿತ ಐಇಇಇ ಇಂಜಿನಿಯರಿಂಗ್ ಇನ್ಫೊರ್ಮ್ಯಾಟಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಪಡೆದಿದ್ದಾರೆ.
ಕಾರ್ಕಳ: ಇಲ್ಲಿನ ನಿಟ್ಟೆ ವಿಶ್ವವಿದ್ಯಾಲಯ ಅಂಗಸಂಸ್ಥೆ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು, ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯಲ್ಲಿ ನಡೆದ ಪ್ರತಿಷ್ಠಿತ ಐಇಇಇ ಇಂಜಿನಿಯರಿಂಗ್ ಇನ್ಫೊರ್ಮ್ಯಾಟಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಪಡೆದಿದ್ದಾರೆ.
ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ವಿಭಾಗದ ಯಶಸ್ ಆರ್. ಅವರು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಭೋಜರಾಜ ಬಿ. ಇ. ಮತ್ತು ಎನ್.ಐ.ಟಿ.ಕೆ ಸುರತ್ಕಲ್ ನ ಜಲ ಸಂಪನ್ಮೂಲ ಹಾಗೂ ಓಶನ್ ಇಂಜಿನಿಯರಿಂಗ್ ವಿಭಾಗದ ಡಾ. ಪೃಥ್ವಿರಾಜ್ ಯು. ಸಹಯೋಗದೊಂದಿಗೆ ನಡೆಸಲಾದ ‘ವಿಆರ್ ಬೇಸ್ಡ್ ಕ್ರಾಪ್ ಹೆಲ್ತ್ ವಿಶ್ಯುವಲೈಜೇಶನ್ ಆ್ಯಂಡ್ ಅನಾಲಿಸಿಸ್ ಯೂಸಿಂಗ್ ಮಲ್ಟಿಸ್ಪೆಕ್ಟ್ರಲ್ ಇಮೇಜಸ್ ಫಾರ್ ಪ್ರಿಶಿಶನ್ ಅಗ್ರಿಕಲ್ಚರ್’ ಎಂಬ ಸಂಶೋಧನಾ ಕಾರ್ಯಕ್ಕೆ ಈ ಪ್ರಶಸ್ತಿಯು ಲಭಿಸಿದೆ.ಈ ಸಂಶೋಧನೆಯು ಬಹುವರ್ಣಚಿತ್ರಗಳ ಬಳಕೆಯಿಂದ ಬೆಳೆಗಳ ಆರೋಗ್ಯವನ್ನು ಪ್ರಸ್ತುತ ಸಮಯದಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್) ಮೂಲಕ ವೀಕ್ಷಣೆ ಮತ್ತು ವಿಶ್ಲೇಷಣೆ ಮಾಡಲು ಹೊಸ ಚೌಕಟ್ಟನ್ನು ಪರಿಚಯಿಸುತ್ತದೆ. ಇದು ನಿಖರತೆ ಹಾಗೂ ಸುಸ್ಥಿರ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ.ಈ ಇಂಟರ್ನ್‌ಶಿಪ್ ಕಾರ್ಯವನ್ನು ಸುರತ್ಕಲ್‌ನ ಎನ್‌ಐಟಿಕೆಯ ಸಿಸ್ಟಮ್ ಡಿಸೈನ್ ಕೇಂದ್ರ (ಸಿಎಸ್‌ಡಿ) ದಲ್ಲಿ ಡಾ. ಪೃಥ್ವಿರಾಜ್ ಯು. ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಗಿದ್ದು, ನಿಟ್ಟೆ ಅಪ್ಲೈಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೇಂದ್ರ (ಎನ್‌ಸಿಎಐಎ) ದ ಸಹಕಾರವನ್ನು ಪಡೆಯಲಾಗಿದೆ. ಈ ಯೋಜನೆಗೆ ನಿಟ್ಟೆಯ ಡಾ. ಭೋಜರಾಜ ಬಿ. ಇ. ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.