ಸಮಸ್ಯೆ ಬಗ್ಗೆ ಕೇಳಿದ್ರೇ ಶಾಸಕರಿಗೆ ಛಾಡಿ ಹೇಳ್ತಾರೇ: ದಲಿತ ಮುಖಂಡರು

| Published : Dec 14 2024, 12:47 AM IST

ಸಮಸ್ಯೆ ಬಗ್ಗೆ ಕೇಳಿದ್ರೇ ಶಾಸಕರಿಗೆ ಛಾಡಿ ಹೇಳ್ತಾರೇ: ದಲಿತ ಮುಖಂಡರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದಲಿತರ ಸಮಸ್ಯೆಗಳನ್ನ ಪರಿಹರಿಸುವಲ್ಲಿ ತಾಲೂಕಿನ ಕೆಲವು ಅಧಿಕಾರಿಗಳು ವಿಫಲರಾಗಿದ್ದಾರೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ದಲಿತರ ಕುಂದುಕೊರತೆ ಸಭೆಯನ್ನ ಮಾಡಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದರು. ಕೊರಟಗೆರೆಯಲ್ಲಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಎಸ್‌ಸಿ.ಎಸ್‌ಟಿ ಮುಂದಿನ ಸಭೆಗೆ ಗೃಹಸಚಿವರಿಗೆ ಆಹ್ವಾನ ದಲಿತ ಮುಖಂಡರ ಒತ್ತಾಯ ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ದಲಿತರ ಸಮಸ್ಯೆಗಳನ್ನ ಪರಿಹರಿಸುವಲ್ಲಿ ತಾಲೂಕಿನ ಕೆಲವು ಅಧಿಕಾರಿಗಳು ವಿಫಲರಾಗಿದ್ದಾರೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ದಲಿತರ ಕುಂದುಕೊರತೆ ಸಭೆಯನ್ನ ಮಾಡಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರುಗಳು ಈ ಹಿಂದೆ ನಡೆದ ಸಭೆಯಲ್ಲಿ ಕೇಳಲಾಗಿದ್ದ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಇರುವ ಕಾರಣ ಗೃಹ ಸಚಿವರು ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.ಪಪಂ ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ ಅಧಿಕಾರಿಗಳು ಬಳಿ ನಮ್ಮ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ರೇ ಡಾ.ಜಿ.ಪರಮೇಶ್ವರ ಸಾಹೇಬರ ಬಳಿ ಒಂದು ಟೀಂ ಪಪಂ ಸದಸ್ಯ ಓಬಳರಾಜು-ನಂದೀಶ್ ಸರಿಯಿಲ್ಲ ಎಂದು ಛಾಡಿ ಹೇಳ್ತಾರೇ. ನಾವೇನು ಈಗ ಐಎಎಸ್ ಅಧಿಕಾರಿ ಆಗಬೇಕಿಲ್ಲ ಕಣ್ರೀ. ನಾವು ಆಯ್ಕೆ ಆಗಿರೋದು ಜನರ ಸಮಸ್ಯೆ ಆಲಿಸೋದಿಕ್ಕೆ. ನಾವು ಇವತ್ತೇ ರಾಜಿನಾಮೆ ನೀಡಿದ್ರು ನಮಗೇ ದುಡಿಮೆ ಮಾಡಿ ಬದುಕುವ ಶಕ್ತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾತ್ರಿಯಾದ್ರೇ ಸಾಕು ಪಪಂ ನೂತನ ಅಂಗಡಿ ಮಳಿಗೆಗಳ ಬಳಿ ಅಕ್ರಮ ಚಟುವಟಿಗಳ ತಾಣವಾಗಿದೆ, ರಾತ್ರಿ ೧೦ಗಂಟೆ ನಂತರ ಸ್ಥಳೀಯರು ನನಗೇ ಪೋನ್ ಮಾಡ್ತಾರೇ. ಅಂಗಡಿ ಮಳಿಗೆ ನಿರ್ಮಾಣ ಆಗಿ ೪ವರ್ಷ ಆದ್ರು ಹರಾಜು ನಡೆಯದಿರಲು ಕಾರಣವೇನು. ಇದಕ್ಕೇ ನೀವು ಇತಿಶ್ರೀ ಹಾಡದಿದ್ರೇ ಎಸ್‌ಸಿ ಸಮುದಾಯದ ಯುವಕರನ್ನ ಅಂಗಡಿಯಲ್ಲೇ ಕುಳಿಸ್ತೀವಿ. ನಾವೇ ಅರ್ಜಿ ಮತ್ತು ದಾಖಲೆ ಪಡೆದು ಹರಾಜು ನಡೀಸ್ತಿವಿ ಎಂದು ಖಡಕ್ ಎಚ್ಚರಿಕೆ ನೀಡಿದರು.ದಲಿತ ಮುಖಂಡ ದಾಡಿವೆಂಕಟೇಶ್ ಮಾತನಾಡಿ ಗಣಿಗಾರಿಕೆ ನಡೆಯುತ್ತಿರುವ ಬಿಕ್ಕೆಗುಟ್ಟೆ ಸುತ್ತಮುತ್ತ ದಲಿತರೇ ವಾಸ ಮಾಡ್ತಿದ್ದಾರೇ. ಗ್ರಾಪಂ ಸದಸ್ಯರು ಜನರ ಸಮಸ್ಯೆ ಆಲಿಸುತ್ತಿಲ್ಲ. ಸರಕಾರಿ ಅಧಿಕಾರಿಗಳಿಗೆ ಜನರ ನೋವು ತಿಳಿದುಕೊಳ್ಳುವ ತಾಳ್ಮೆಯೇ ಇಲ್ಲ. ಕ್ರಷರ್‌ನ ಧೂಳು ಮತ್ತು ಗಣಿಗಾರಿಕೆ ಶಬ್ದದಿಂದ ಬದುಕು ನಡೆಸುವುದೇ ಕಷ್ಟಸಾಧ್ಯ. ಗಣಿಗಾರಿಕೆ ಸಮಸ್ಯೆಗಳ ಬಗ್ಗೆ ಗೃಹಸಚಿವರು ಗಮನ ಹರಿಸಬೇಕಿದೆ ಎಂದು ಒತ್ತಾಯ ಮಾಡಿದರು. ಎಸ್‌ಸಿಎಸ್‌ಟಿ ವಾಸಿಸುವ ಪ್ರತಿ ಹಳ್ಳಿಯಲ್ಲೂ ದಿನದ ೨೪ಗಂಟೆಯು ಮದ್ಯ ಮಾರಾಟ ಮಾಡ್ತಾರೇ. ಅಬಕಾರಿ ಇಲಾಖೆ ಬಡವರ ಚಿಲ್ಲರೇ ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡ್ತಾರೇ. ಇಲ್ಲಿಯವರೆಗೆ ವೈನ್ಸ್ ಮಾಲೀಕ ಅಥವಾ ವ್ಯವಸ್ಥಾಪಕನ ವಿರುದ್ದ ಪ್ರಕರಣ ದಾಖಲು ಆಗಿಲ್ಲ. ಅಬಕಾರಿ ಇಲಾಖೆ ವೈನ್ಸ್ ಮಾಲೀಕರ ಪರವಾಗಿ ಕೆಲಸ ಮಾಡಿದ್ದಾರೇ ಎಂದು ದಲಿತ ಮುಖಂಡರು ಆರೋಪ ಮಾಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಯಮುನಾ, ಸಾಮಾಜಿಕ ವಲಯ ಶಿಲ್ಪಾ, ಅರಣ್ಯ ಇಲಾಖೆಯ ಸುರೇಶ್, ಕುಡಿಯುವ ನೀರು ಕೀರ್ತಿನಾಯಕ್, ಸಿಡಿಪಿಓ ಅಂಬಿಕಾ, ಟಿಎಚ್‌ಒ ವಿಜಯಕುಮಾರ್, ಪಿಎಸೈ ಬಸವರಾಜು, ಪಪಂ ಸದಸ್ಯರಾದ ಪುಟ್ಟನರಸಪ್ಪ, ನಂದೀಶ್, ನಟರಾಜು, ಮುಖಂಡರಾದ ಜಯರಾಮು, ಸುರೇಶ್, ಜೆಟ್ಟಿಅಗ್ರಹಾರ ನಾಗರಾಜು ,ಸಿದ್ದಪ್ಪ, ಶಿವರಾಮು, ನರಸಿಂಹಮೂರ್ತಿ, ದೊಡ್ಡಯ್ಯ ಸೇರಿದಂತೆ ಇತರರು ಇದ್ದರು. ಅಕ್ರಮಮಧ್ಯ ಮಾರಾಟ, ಗಣಿಗಾರಿಕೆ ಮತ್ತು ಕ್ರಷರ್, ಸಾಗುವಳಿ ಚೀಟಿ, ಹಕ್ಕುಪತ್ರ, ಶುದ್ದ ಕುಡಿಯುವ ನೀರಿನ ಘಟಕ, ರಸ್ತೆ, ಚರಂಡಿ, ಸ್ವಚ್ಚತೆ, ಪಪಂ ಅಂಗಡಿ ಮಳಿಗೆ ಸೇರಿ ಹತ್ತಾರು ಸಮಸ್ಯೆಗಳು ಸಭೆಗೆ ಬಂದಿವೆ. ಮಾನ್ಯ ಶಾಸಕರ ಜೊತೆ ಚರ್ಚಿಸಿ ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ನೀಡ್ತೇವೆ. ಗ್ರಾಮೀಣ ಜನರ ಸಮಸ್ಯೆ ಆಲಿಸೋದು ಸರಕಾರಿ ಅಧಿಕಾರಿಗಳ ಪ್ರಮುಖ ಕರ್ತವ್ಯ.ಮಂಜುನಾಥ.ಕೆ. ತಹಸೀಲ್ದಾರ್. ಕೊರಟಗೆರೆ