ಮಕ್ಕಳು ಶಿಕ್ಷಣವಂತರಾದರೆ ದೇಶ ಅಭಿವೃದ್ಧಿ

| Published : Nov 06 2024, 12:43 AM IST

ಸಾರಾಂಶ

ಮಕ್ಕಳು ಈ ದೇಶದ ಸಂಪತ್ತು. ಹಾಗಾಗಿ ಒಂದು ದೇಶ, ರಾಜ್ಯ, ಗ್ರಾಮ, ಅಭಿವೃದ್ಧಿ ಹೊಂದಬೇಕಾದರೇ ಅಲ್ಲಿನ ಮಕ್ಕಳು ಶಿಕ್ಷಣವಂತರಾದ ಮಾತ್ರ ಸಾಧ್ಯ ಎಂಬುವುದನ್ನು ಎಲ್ಲ ಮಕ್ಕಳು ಅರ್ಥೈಸಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಕ್ಕಳು ಈ ದೇಶದ ಸಂಪತ್ತು. ಹಾಗಾಗಿ ಒಂದು ದೇಶ, ರಾಜ್ಯ, ಗ್ರಾಮ, ಅಭಿವೃದ್ಧಿ ಹೊಂದಬೇಕಾದರೇ ಅಲ್ಲಿನ ಮಕ್ಕಳು ಶಿಕ್ಷಣವಂತರಾದ ಮಾತ್ರ ಸಾಧ್ಯ ಎಂಬುವುದನ್ನು ಎಲ್ಲ ಮಕ್ಕಳು ಅರ್ಥೈಸಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು.

ಪಟ್ಟಣದ ಮುಖ್ಯ ಬಜಾರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೇವಿಕಾ ಸುಬ್ಬರಾವ ಫೌಂಡೇಶನ್‌ ವತಿಯಿಂದ ಶಾಲಾ ಮಕ್ಕಳಿಗೆ ಚಾಕಲೇಟ್ ಬಾಕ್ಸ್ ಸಿಹಿ ವಿತರಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಸ್ಪಧ್ಮಾತ್ಮಕ ಯುಗದಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಂಡು ವ್ಯರ್ಥ ಸಮಯ ಹಾಳು ಮಾಡಿಕೊಳ್ಳದೇ ಶಾಲೆಯಲ್ಲಿ ಗುರುಗಳು ತಿಳಿಸುವ ಪಾಠದ ಕಡೆ ಹೆಚ್ಚು ಗಮನ ಹರಿಸಿ ಸತತ ಕಠಿಣ ಪರಿಶ್ರಮದಿಂದ ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲ ಪರೀಕ್ಷೆಗಳಲ್ಲಿ ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಮೂಲಕ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಜನಮೆಚ್ಚುವ ಉತ್ತಮ ನಾಗರಿಕರಾಗಿ ಬೆಳೆದು ನಿಲ್ಲಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಬಡ ಕುಟುಂಬದ, ಮಧ್ಯಮ ವರ್ಗದ, ಕುಟುಂಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣವಂತರಾಗಿ ಬೆಳೆಯಬೇಕೆಂಬ ಸದುದ್ದೇಶದಿಂದ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ಸಾಧನೆ ನಿಮ್ಮ ಗುರಿಯಾಗಿಟ್ಟುಕೊಂಡು ವಿದ್ಯೆ ನೀಡುವ ಗುರುಗಳನ್ನು, ಹೆತ್ತ ತಂದೆ-ತಾಯಿಯರಿಗೆ ಗೌರವಿಸುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.ಶಿಕ್ಷಕ ರಶೀದ್ ಮೇತ್ರಿ ಮಾತನಾಡಿ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಅತ್ಯಂತ ಹಳೆಯ ಶತಮಾನ ಕಂಡ ಶಾಲೆ ಇದಾಗಿದೆ ಎಂಬುವುದನ್ನು ಗಮನಿಸಿದ ಶಾಸಕರು ನಿಗಮದಿಂದ ₹1.22 ಕೋಟಿಗಳ ವಿಶೇಷ ಹಣವನ್ನು ಬಿಡುಗಡೆಗೊಳಿಸುವ ಮೂಲಕ ಶಾಲೆಯ ಕೊಠಡಿಗಳ ದುರಸ್ಥಿ, ಸ್ಮಾಟ್ ಕ್ಲಾಸ್, ಸೇರಿದಂತೆ ಇತರೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಶತಮಾನ ಕಂಡ ಸರ್ಕಾರಿ ಶಾಲೆಯನ್ನು ಜಿರ್ಣೋದ್ಧಾರಗೊಳಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು.ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ, ಕಾರ್ಯದರ್ಶಿ ಎನ್.ಎಸ್.ತುರಡಗಿ, ಶಿಕ್ಷಕರಾದ ಎಂ.ಬಿ.ಪಾಟೀಲ, ಮುಖ್ಯಶಿಕ್ಷಕ ಎನ್.ಎ.ತೊಂಡಿಹಾಳ, ಶಿಕ್ಷಕರಾದ ಆರ್.ಡಿ.ಗೋರಕಲ್, ಸಿ.ಬಿ.ಬಿದರಿ, ವಿ.ಬಿ.ಮಾಲಿಪಾಟೀಲ, ವಿ.ಎಸ್.ಗೋಟ್ಕಿಂಡಕಿ, ಎಸ್.ಡಿ.ಪಣೇದಕಟ್ಟಿ, ಎ.ಎಂ.ನದಾಫ್, ಎಸ್.ಬಿ.ಗುಂಡಕನಾಳ, ಎಂ.ಎಂ.ಸಜ್ಜನ, ಜೆ.ಎನ್.ಬಡಿಗೇರ, ವಿಜಯಲಕ್ಷ್ಮೀ ಯರಝರಿ, ಆರ್.ಎಂ.ಮೇತ್ರಿ, ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ, ರಾಜು ನಾಯಕ ಸೇರಿದಂತೆ ಹಲವರು ಇದ್ದರು.

ದೀಪಾವಳಿ ಹಬ್ಬ ಕಲ್ಮಶ ಹಾಗೂ ಕೆಟ್ಟವಿಚಾರದಂತಹ ಭಾವನೆಗಳ ಕತ್ತಲೆಯಿಂದ ಬೆಳಕಿನಡೆಗೆ ಚಲಿಸುವ ಮೂಲಕ ಹೊಸತನದ ಹುಮ್ಮಸ್ಸು, ಚೈತನ್ಯ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಆಯುಷ್ಯ ಆರೋಗ್ಯ, ಸಮೃದ್ಧಿ ನೀಡಲಿ.

-ಪಲ್ಲವಿ ನಾಡಗೌಡ,

ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ.