ನಾಪೋಕ್ಲು: ಶತಾಯುಷಿ ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಹುಟ್ಟುಹಬ್ಬ

| Published : Nov 06 2024, 12:43 AM IST

ನಾಪೋಕ್ಲು: ಶತಾಯುಷಿ ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಹುಟ್ಟುಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಅವರನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕೇಕ್‌ ಅನ್ನು ಕತ್ತರಿಸಿ ಸಂಭ್ರಮಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಶತಾಯುಷಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಅವರನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು (ಕುಟುಂಬ) ಅದ್ದೂರಿಯಾಗಿ ಆಚರಿಸಿದ ಅವಿಸ್ಮರಣೀಯ ಕ್ಷಣ ಕ್ಕೆ ಭಾಗವಹಿಸಿದ ಎಲ್ಲರೂ ಸಾಕ್ಷಿಯಾದರು.

ಚೇರಂಬಾಣೆಯ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮಕ್ಕೆ ದಿ. ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ .ಮೊಣ್ಣಪ್ಪ ಅವರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿ ಕೊಟ್ ಪಾಟ್ ಮೂಲಕ ಕರೆದರಲಾಯಿತು.

ಆ ಬಳಿಕ ಕುಟುಂಬ ಬಂಧು ಮಿತ್ರರೊಂದಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲರ ಪರವಾಗಿ ಕೋಟೆರ ಪ್ರಭು ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೇಕ್ ಅನ್ನು ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಅವರ ಸಹೋದರ ಅಪ್ಪಣ್ಣ (97) ಜೊತೆಯಲ್ಲಿ ಉಪಸ್ಥಿತರಿದ್ದು ಆಗಮಿಸಿದ್ದ ಎಲ್ಲರೂ ಶತಾಯುಷಿಗೆ ತಮ್ಮ ನೆನಪಿನ ಕಾಣಿಕೆಗಳನ್ನು ನೀಡಿ ಇಬ್ಬರ ಆಶೀರ್ವಾದ ಪಡೆದುಕೊಂಡು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರೊ ಎಂ.ಡಿ ನಂಜುಂಡ, ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ ಮಂದಣ್ಣ , ನಿವೃತ್ತ ಪೊಲೀಸ್ ಅಧಿಕಾರಿ ಮಣವಟ್ಟಿರ ಸಿ.ಕುಶಾಲಪ್ಪ ಸನ್ಮಾನಿತರ ಗುಣಗಾನ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭ ಪ್ರಮುಖರಾದ ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಪಿ .ಗಣಪತಿ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗು ಏಕೀಕರಣರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಸೇರಿದಂತೆ ಬಂಧು ಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.

ಶತಾಯುಷಿ ಮೊಣ್ಣಪ್ಪ ಅವರಿಗೆ ಒಂದು ಗಂಡು ಐದು ಹೆಣ್ಣು ಮಕ್ಕಳು ಇದ್ದು ಅವರ ಮಗ ಗೋಪಾಲಕೃಷ್ಣ , ಮಗಳು ವಾಣಿ (ಉಮಾದೇವಿ) ಸೇರಿದಂತೆ ಕುಟುಂಬದ ಸದಸ್ಯರು ಬಂದು ಭಾಗವಹಿಸಿದವರನ್ನೆಲ್ಲ ಆದರದಿಂದ ಸ್ವಾಗತಿಸಿ ಅತಿಥಿ ಸತ್ಕಾರದೊಂದಿಗೆ ಕೃತಜ್ಞತೆ ಸಲ್ಲಿಸಿದರು.