ಸಾರಾಂಶ
ಪಟ್ಟಣದ ಹೈವೇ ಇಂಗ್ಲಿಷ್ ಶಾಲೆಯಲ್ಲಿ ನಡೆದ ಹೈವೈ ಕಾರ್ನೀವಾಲ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಕರು ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದರಿಂದ ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಡಿಡಿಪಿಐ ಜಿ.ಕೆ. ಪುಟ್ಟರಾಜು ಹೇಳಿದರು.
ಪಟ್ಟಣದ ಹೈವೇ ಇಂಗ್ಲಿಷ್ ಶಾಲೆಯಲ್ಲಿ ನಡೆದ ಹೈವೈ ಕಾರ್ನೀವಾಲ್ ಉದ್ಘಾಟಿಸಿ ಮಾತನಾಡಿದರು. ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ವೇದಿಕೆ ರೂಪಿಸುತ್ತವೆ ಎಂದರು. ಪೋಷಕರು ತಮ್ಮ ಮಕ್ಕಳಿಗೆ ಮನೆಗಳಲ್ಲಿ ಮೊಬೈಲ್ ನೀಡದೆ ಹೆಚ್ಚು ಪಠ್ಯದ ಬದುಕಿಗೆ ಒಗ್ಗುವ ಸಂಪ್ರದಾಯಕ್ಕೆ ಆದ್ಯತೆ ಕೊಡಬೇಕಿದೆ. ಪರೀಕ್ಷೆ ಸಂದರ್ಭದಲ್ಲಿ ಹೆಚ್ಚು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ವಿಶೇಷ ತರಗತಿಗಳನ್ನು ಹೆಚ್ಚು ನಡೆಸಿ ದಾಗ ಮಕ್ಕಳ ಓದಿನ ಬೆಳವಣಿಗೆ ಹೆಚ್ಚು ಅನುಕೂಲವಾಗಲಿದೆ. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಪೋಷಕರ ಪರಿಶ್ರಮಕ್ಕೆ ತಕ್ಕಂತೆ ಮಕ್ಕಳಿಗೆ ಶೈಕ್ಷಣಿಕವಾಗಿ ಒತ್ತು ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದರಿಂದ ಉತ್ತಮ ನಾಗರಿಕ ಸಮಾಜ ಸೃಷ್ಟಿಸಲು ಸಾಧ್ಯ. ಕಲಿಕೆ ಅಂಗಳದಲ್ಲಿ ಎಲ್ಲರೂ ಮುಕ್ತವಾಗಿ ಕಲಿಯಲು ಶಿಕ್ಷಣ ಸಂಸ್ಥೆಗಳು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಸಿದ್ದರಾಜು ನಾಯ್ಕ್ ಮಾತನಾಡಿ, ಮಗುವಿನ ಆರಂಭಿಕ ಬೆಳವಣಿಗೆಯಿಂದ ಶಾಲಾ ಶಿಕ್ಷಣದವರೆಗೆ, ಅವರ ಶೈಕ್ಷಣಿಕ ಪ್ರಯಾಣ ರೂಪಿಸುವಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿದೆ. ಶಾಲೆ ಫಲಿತಾಂಶದಲ್ಲಿ ಶಿಸ್ತು ಬದ್ದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಿಕೆಯಲ್ಲಿ ಹೈವೇ ಶಾಲೆ ಇಂದಿಗೂ ತನ್ನ ಹಿರಿಮೆ ಉಳಿಸಿ ಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ಈ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಗೆಲುವು ಸಾಧಿಸಿದ ಮತ್ತು ಉತ್ತಮ ಫಲಿತಾಂಶ ತಂದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲೆ ಸಂಸ್ಥೆ ಅಧ್ಯಕ್ಷ ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ಗಣೇಶ್ ಸಾಲಿಯಾನ ವಾರ್ಷಿಕ ವರದಿ ಮಂಡಿಸಿದರು.ಶಾಲೆಯ ಕಾರ್ಯದರ್ಶಿ ಜತನ್ ಲಾಲ್ ಡಾಗ, ನಿರ್ದೇಶಕ ಡಾ. ಎಸ್.ವಿ. ದೀಪಕ್, ಜಿ.ಎಸ್. ಗುರುಪ್ರಸಾದ್, ಡಿ. ನಾರಾಯಣ ಸ್ವಾಮಿ ಹಾಗೂ ಶಿಕ್ಷಕ ವರ್ಗದವರು ಇದ್ದರು.
3ಕೆಕೆಡಿಯು1.ಕಡೂರು ಪಟ್ಟಣದ ಹೈವೆ ಶಾಲೆಯಲ್ಲಿ ನಡೆದ ಹೈವೆ ಕಾರ್ನಿವಾಲ ಕಾರ್ಯಕ್ರಮವನ್ನು ಡಿಡಿಪಿಐ ಜಿ.ಕೆ.ಪುಟ್ಟರಾಜು ಉದ್ಘಾಟಿಸಿದರು. ಆರ್. ಸಿದ್ದರಾಜುನಾಯ್ಕ್, ಬಿ. ಶಿವಕುಮಾರ್, ಜತನ್ ಲಾಲ್ ಡಾಗಾ, ಎಸ್.ವಿ ದೀಪಕ್, ಡಿ.ನಾರಾಯಣಸ್ವಾಮಿ, ಗುರುಪ್ರಸಾದ್, ಗಣೇಶ್ ಮತ್ತಿತರಿದ್ದರು.