ಹಿಂದೂ ಸಮಾಜದ ಮೇಲೆ ಸ್ವಾತಂತ್ರ್ಯ ಪೂರ್ವದಿಂದಲೇ ದಾಳಿ ನಡೆಯುತ್ತಾ ಬಂದಿದ್ದು ಹಿಂದುಗಳು ಒಗ್ಗಟ್ಟಾದರೆ ಮಾತ್ರ ನಮ್ಮ ಧರ್ಮದ ರಕ್ಷಣೆ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನವೀನ್‌ ಸುಬ್ರಮಣ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹಿಂದೂ ಸಮಾಜದ ಮೇಲೆ ಸ್ವಾತಂತ್ರ್ಯ ಪೂರ್ವದಿಂದಲೇ ದಾಳಿ ನಡೆಯುತ್ತಾ ಬಂದಿದ್ದು ಹಿಂದುಗಳು ಒಗ್ಗಟ್ಟಾದರೆ ಮಾತ್ರ ನಮ್ಮ ಧರ್ಮದ ರಕ್ಷಣೆ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನವೀನ್‌ ಸುಬ್ರಮಣ್ಯ ಹೇಳಿದರು.

ಸಮೀಪದ ಹೊದ್ದೂರು ಮಂಡಲ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮ ಶತಾಬ್ದಿಯ ಅಂಗವಾಗಿ ಆಯೋಜಿಸಲಾಗಿದ್ದ ಹಿಂದೂ ಮಹಾ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.

ನಿತ್ಯಾಕಾರ್ಯಪ್ಪ ಹಿಂದೂ ಸಮಾಜದ ರಕ್ಷಣೆಯಲ್ಲಿ ತಾಯಂದಿರ ಪಾತ್ರದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮಂಡೆಪ೦ಡ ಕರು೦ಬಯ್ಯ ವಹಿಸಿದ್ದರು.

ಇದಕ್ಕೂ ಮುನ್ನ ಭಗವತಿ ದೇವಸ್ಥಾನದಿಂದ ಶೋಭಾ ಯಾತ್ರೆಯು ಕಬ್ಬಡಗೇರಿಯ ಆಟದ ಮೈದಾನದವರೆಗೆ ಸಾಗಿತು. ಆಯೋಜನಾ ಸಮಿತಿಯ ಅಧ್ಯಕ್ಷರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಹಿಂದೂ ಭಕ್ತರು ನೆರೆದಿದ್ದರು. ಕಾರ್ಯಕ್ರಮದಲ್ಲಿ ವಿಜು ಚೆಟ್ಟಳ್ಳಿ ಅವರಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು. ಮೂರ್ನಾಡುವಿನ ನೃತ್ಯ ಕಲಾತಂಡದಿಂದ ದೇಶಭಕ್ತಿಯ ನೃತ್ಯ ಕಾರ್ಯಕ್ರಮ , ವಾ೦ಚೀರ ಅಜಯ್ ಸ್ವಾಗತಿಸಿದರು. ಉಪನ್ಯಾಸಕಿ ಜಸ್ಮಿ ಕಾರ್ಯಕ್ರಮ ನಿರೂಪಿಸಿದರು. ನೆರವಂಡ ಸಂಜಯ್ ವಂದಿಸಿದರು.