ಕನ್ನಡಕ್ಕೆ ಧಕ್ಕೆ ಬಂದ್ರೆ ಎಲ್ಲರೂ ಒಗ್ಗಟ್ಟಿನಿಂದ ಖಂಡಿಸೋಣ

| N/A | Published : May 09 2025, 12:35 AM IST / Updated: May 09 2025, 12:09 PM IST

ಸಾರಾಂಶ

ಕನ್ನಡಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಡುತ್ತಿದೆ. ಸಾವಿರಾರು ದತ್ತಿನಿಧಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ

 ಮುನವಳ್ಳಿ  : ಕನ್ನಡದ ಕೆಲಸ ಕನ್ನಡ ಭಾಷಾಭಿಮಾನಿಗಳಿಂದ ಆಗುತ್ತಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಿನಿಂದ ಎಲ್ಲರೂ ಸೇರಿ ಖಂಡಿಸಬೇಕು ಎಂದು ಕಸಾಪ ಅಧ್ಯಕ್ಷ ಡಾ.ವೈ.ಎಂ.ಯಾಕೋಳ್ಳಿ ತಿಳಿಸಿದರು.

ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಆಶ್ರಯದಲ್ಲಿ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಡುತ್ತಿದೆ. ಸಾವಿರಾರು ದತ್ತಿನಿಧಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.

ಶಿಕ್ಷಕ ಲಕ್ಷ್ಮಣ ನಾಗಣ್ಣವರ ಮಾತನಾಡಿ, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸುವ ಮಹೋನ್ನತ ಗುರಿಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆಯಾಯಿತು. ಕನ್ನಡ ಪುಸ್ತಕ ಓದಬೇಕು, ಸಭೆ ಸಮಾರಂಭಗಳಲ್ಲಿ ಕನ್ನಡ ಪುಸ್ತಕ ಉಳಿಸಿ ನೀಡುವುದರ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದರು.ಹಿಂದಿನ ಅಧ್ಯಕ್ಷರಾದ ಸಿ.ಬಿ.ದೊಡಗೌಡ್ರ, ಶಿಕ್ಷಕ ಬಿ.ಬಿ.ಹುಲಿಗೊಪ್ಪರನ್ನು ಸನ್ಮಾನಿಸಿ ಗೌರವಿಸಿದರು.

ಕಸಾಪ ಮಾಜಿ ಅಧ್ಯಕ್ಷ ಬಿವಿಬಿ ನರಗುಂದ, ಸವದತ್ತಿ ಕಸಾಪ ಕಾರ್ಯದರ್ಶಿ ಸಾಹಿತಿ ವೈ.ಬಿ.ಕಡಕೋಳ, ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಮೋಹನ ಸರ್ವಿ, ಬಸವಣ್ಣೆಪ್ಪ, ಸುರೇಶ ಜಾವೂರ, ಗುರುನಾಥ ಪತ್ತಾರ, ಕದಳಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಲಂಬೂನವರ, ಕೆ.ಜಿ.ಲಮಾಣಿ, ರಾಜೇಶ್ವರಿ ಬಾಳಿ, ಬಿ.ವೈ ಕರಮಲ್ಲಪ್ಪನವರ, ಎಂ.ಎಚ್‌.ಪಾಟೀಲ, ಆರ್.ಎಸ್.ಪೂಜೇರ, ಬಿ.ಎನ್.ಹೊಸೂರ, ಅಶೋಕ ಸಂಕಣ್ಣವರ, ಉಮೇಶ ಗುದಗಾಪೂರ, ಎ.ಎಂ.ಮಕಾನದಾರ, ಎಂ.ಗಿರೀಶ, ಕೆ.ಬಿ.ಕುರುಬಗಟ್ಟಿ, ಜಿ.ಎಸ್.ಹಿರೇಮಠ, ಮಂಜುಳಾ ಭಾಂಡೇಕರ, ಭಾರತಿ ತೆಗ್ಗಿಹಾಳ, ಜಿ.ಬಿ.ಕೊಪ್ಪದ, ಸುಮಾ ಕುರಿ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.