ಕುಕನೂರು ತಾಲೂಕಿನ ಸೋಂಪುರು ಗ್ರಾಮ, ನೆಲಜೇರಿ ಹಾಗೂ ಯಲಬುರ್ಗಾ ತಾಲೂಕಿನ ಹುಲೇದಗುಡ್ಡ ಗ್ರಾಮಗಳಿಗೆ ಸರ್ಕಾರಿ ಹೈಸ್ಕೂಲ್ ಮಂಜೂರಾಗಿದೆ ಹಾಗೂ ಪ್ರತಿಯೊಂದು ಹೈಸ್ಕೂಲ್ ಕಟ್ಟಡಕ್ಕೆ ₹ ಎರಡು ಕೋಟಿ ಮಂಜೂರು ಮಾಡಲಾಗಿದೆ
ಕುಕನೂರು: ಸರ್ಕಾರಿ ಶಾಲೆ ಕಟ್ಟಡಕ್ಕೆ ಜಮೀನು ನೀಡಿದವರಿಗೆ ಸರ್ಕಾರಿ ಬೆಲೆ ಜತೆಗೆ ವೈಯಕ್ತಿಕ ಒಂದು ಲಕ್ಷ ಪ್ರೋತ್ಸಾಹ ಧನ ನೀಡಲು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮುಂದಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಬೇರೆ ಊರಿಗೆ ಹೋಗಬಾರದು, ಸ್ಥಳೀಯವಾಗಿಯೇ ಪ್ರೌಢ ಶಿಕ್ಷಣ ಸಹ ಪಡೆಯಬೇಕೆಂದು 18 ಪ್ರೌಢ ಶಾಲೆಗಳನ್ನು ಶಾಸಕ ರಾಯರಡ್ಡಿ ಈ ಅವಧಿಯಲ್ಲಿಯೇ ಮಂಜೂರು ಮಾಡಿಸಿದ್ದಾರೆ. 16 ನೂತನ ಪ್ರೌಢಶಾಲೆ ಹಾಗೂ ಎರಡು ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿದ್ದಾರೆ. ಪ್ರೌಢಶಾಲೆ ಮಂಜೂರಾತಿ ಹುದ್ದೆ ಹಾಗೂ ಕಟ್ಟಡಕ್ಕೆ ₹2 ಕೋಟಿ ಹಣ ಮಂಜೂರು ಮಾಡಿಸಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗವೇ ಇಲ್ಲದಂತ್ತಾಗಿದೆ.ಕುಕನೂರು ತಾಲೂಕಿನ ಸೋಂಪುರು ಗ್ರಾಮ, ನೆಲಜೇರಿ ಹಾಗೂ ಯಲಬುರ್ಗಾ ತಾಲೂಕಿನ ಹುಲೇದಗುಡ್ಡ ಗ್ರಾಮಗಳಿಗೆ ಸರ್ಕಾರಿ ಹೈಸ್ಕೂಲ್ ಮಂಜೂರಾಗಿದೆ ಹಾಗೂ ಪ್ರತಿಯೊಂದು ಹೈಸ್ಕೂಲ್ ಕಟ್ಟಡಕ್ಕೆ ₹ ಎರಡು ಕೋಟಿ ಮಂಜೂರು ಮಾಡಲಾಗಿದೆ. ಆದರೆ ಜಮೀನು ಲಭ್ಯ ಇಲ್ಲದೆ ಇರುವುದರಿಂದ ಕಟ್ಟಡ ಪ್ರಾರಂಭ ಆಗಿಲ್ಲ.
ಎಕರೆಗೆ ಎಳು ಲಕ್ಷ ಜತೆಗೆ ರಾಯರಡ್ಡಿ ಒಂದು ಲಕ್ಷ:ಸರ್ಕಾರಿ ಹೈಸ್ಕೂಲ್ ಕಟ್ಟಡಗಳಿಗೆ ಜಮೀನನ್ನು ಖರೀದಿಸಲು ಅವಕಾಶವಿದ್ದು, ಸರ್ಕಾರ ನಿಗದಿ ಮಾಡಿದ ₹6 ಲಕ್ಷದಿಂದ ₹7 ಲಕ್ಷ ಹಣದಲ್ಲಿ ಗ್ರಾಮಸ್ಥರು ಜಮೀನನ್ನು ನೀಡಬೇಕು.ಇದರ ಜತೆಗೆ ರಾಯರಡ್ಡಿ ಸಹ ಎಕರೆಗೆ ವೈಯಕ್ತಿಕವಾಗಿ ಒಂದು ಲಕ್ಷ ನೀಡುತ್ತೇನೆ ಎಂದಿದ್ದಾರೆ.ಶಾಲೆಗೆ ಜಾಗ ನೀಡಲು ಮುಂದಾಗಬೇಕಿದೆ ಜನ: ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮೂರಲ್ಲೇ ಪ್ರೌಢ ಶಿಕ್ಷಣ ಪಡೆಯಲು ತಮ್ಮೂರಿಗೆ ಮಂಜೂರಾಗಿರುವ ಪ್ರೌಢ ಶಾಲೆಗೆ ಜಾಗ ನೀಡಿ ಅನುದಾನದ ಸದ್ಬಳಕೆ ಮಾಡಿಕೊಂಡರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಆಗುತ್ತದೆ. ಇಲ್ಲದಿದ್ದರೆ ಮಕ್ಕಳು ಪ್ರೌಢ ಶಿಕ್ಷಣಕ್ಕೆ ಬೇರೆ ಊರಿಗೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ.
ಶಾಲೆಗಳಿಗೆ ಜಾಗ ನೀಡಲು ಎಕರೆ ಭೂಮಿಗೆ ಕೆಲವು ಗ್ರಾಮದಲ್ಲಿ ಎಕರೆಗೆ ₹15 ರಿಂದ 18 ಲಕ್ಷದವರೆಗೆ ಜನ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಶಾಲೆಗಳಿಗೆ ಜಾಗ ಖರೀದಿಸುವುದು ಸರ್ಕಾರದಿಂದ ಕಷ್ಟಕರ ಆಗುತ್ತದೆ. ಎಕರೆಗೆ ಏಳು ಲಕ್ಷದಂತೆ ಗ್ರಾಮೀಣ ಪ್ರದೇಶದಲ್ಲಿ ಶಾಲೆಗೆ ಜಾಗ ನೀಡಿದರೆ ಅದರ ಜತೆಗೆ ವೈಯಕ್ತಿಕವಾಗಿ ಎಕರೆಗೆ ಒಂದು ಲಕ್ಷ ನೀಡಿ ಶಾಲೆಗಳ ಉಳಿವಿಗಾಗಿ ಶಾಸಕ ರಾಯರಡ್ಡಿ ಮುಂದಾಗಿದ್ದಾರೆ.ಜಮೀನು ನೀಡುವವರಿಗೆ ಸರ್ಕಾರದ ಬೆಲೆ ಜತೆಗೆ ನಾನು ಸಹ ಸರ್ಕಾರಿ ಶಾಲಾಭಿವೃದ್ಧಿ ನಿಟ್ಟಿನಲ್ಲಿ ಎಕರೆಗೆ ಲಕ್ಷ ನೀಡುತ್ತೇನೆ. ತಕ್ಷಣವೇ ಜಮೀನನ್ನು ಖರೀದಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ, ಜಮೀನನ್ನು ನೀಡದೆ ಇದ್ದರೆ ಕಟ್ಟಡಕ್ಕೆ ಒದಗಿಸಿದ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಇದರಿಂದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ತಕ್ಷಣವೇ ಜಾಗೃತರಾಗಿ ಜಮೀನನ್ನು ಖರೀದಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಶಾಸಕ ಬಸವರಾಜ ರಾಯರಡ್ಡಿ ಒಟ್ಟು 16 ನೂತನ ಪ್ರೌಢ ಶಾಲೆ ಹಾಗೂ ಎರಡು ಶಾಲೆಗಳ ಉನ್ನತೀಕರಣ ಮಾಡಿದ್ದಾರೆ. ಈಗಾಗಲೇ ಕೆಲವು ಶಾಲೆಗಳಿಗೆ ಜಾಗ ನಿಗದಿಯಾಗಿದೆ. ಇನ್ನೂ ಕೆಲವು ಶಾಲೆಗಳಿಗೆ ಆಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಟ್ಟಡ ಆಗುವುದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ.ಆ ನಿಟ್ಟಿನಲ್ಲಿ ಜನತೆ ಸಹ ಜಾಗ ನೀಡಿ ಸಹಕರಿಸಬೇಕಿದೆ ಎಂದು ಯಲಬುರ್ಗಾ ಬಿಇಒ ಅಶೋಕಗೌಡ್ರು ತಿಳಿಸಿದ್ದಾರೆ.