ಗೌರಿಬಿದನೂರು:

ಸರ್ಕಾರದಿಂದ ತಾಲೂಕಿನ ಬಡವರು ಮತ್ತು ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದೆಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಭರವಸೆ ನೀಡಿದರು.

ತಾಲೂಕಿನ ನಗರಗೆರೆ, ಡಿ.ಪಾಳ್ಯ, ಕಸಬಾ ಹೋಬಳಿ ವ್ಯಾಪ್ತಿಯ ಕುರುಬರಹಳ್ಳಿ, ಬಿ.ಬೊಮ್ಮಸಂದ್ರ, ವಾಟದಹೊಸಹಳ್ಳಿ, ಗ್ರಾಮ ಪಂಚಾಯಿತಿಗಳಲ್ಲಿ ಆಶ್ರಯ ಯೋಜನೆಯಡಿ ನಿವೇಶನರಹಿತ ಫಲಾನುಭವಿಗಳಿಗೆ ನಿವೇಶನವನ್ನು ನೀಡುವ ಪಂಚಾಯಿತಿವಾರು ವಿಶೇಷ ಗ್ರಾಮಸಭೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಬಳಿಕ ಮಾತನಾಡಿ, ಸರ್ಕಾರದಿಂದ ಕೊಡುವ ನಿವೇಶನವು ಬಡವರಿಗೆ ಮತ್ತು ನಿವೇಶನವಿಲ್ಲದ ಅರ್ಹ ಫಲಾನುಭವಿಗಳಿಗೆ ಪ್ರಮಾಣಿಕ ಮತ್ತು ಪಾರದರ್ಶಕತೆಯಿಂದ ನೀಡಲು ಅಧಿಕಾರಿಗಳು ಯಾವುದೇ ಜಾತಿ, ಧರ್ಮಗಳಿಗೆ ರಾಜಕೀಯ ಪಕ್ಷಗಳಿಗೆ ಮಾತ್ರವೇ ಸೀಮಿತವಾಗದೇ ಪ್ರತಿಯೊಬ್ಬ ನಿವೇಶನ ರಹಿತರ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರವೇ ನಿವೇಶನಗಳನ್ನು ನೀಡುವಂತೆ ಸೂಚಿಸಲಾಯಿತು.

ಜಿ.ಕೆ. ಹೊನ್ನಯ್ಯ ಮಾತನಾಡಿ ವಾಟದಹೊಸಹಳ್ಳಿ ಗ್ರಾಮದಲ್ಲಿ 15 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲೂ 304 ಅರ್ಜಿಗಳು ಬಂದಿವೆ, ಅವುಗಳಲ್ಲಿ 97 ಜನ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಇಲ್ಲಿ ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳಿಗೆ ಮನ್ನಣೆ ನೀಡಿಲ್ಲ ಎಂದರು.


ಈ ಸಂದರ್ಭದಲ್ಲಿ ತಾಪಂ ಇಒ ಜೆ.ಕೆ. ಹೊನ್ನಯ್ಯ, ಜಿಲ್ಲಾ ನೋಡಲ್ ಅಧಿಕಾರಿ ರಾಮಾನುಜಮ್, ತಾ. ಪಂ. ಕಾರ್ಯಾಲಯ ವ್ಯವಸ್ಥಾಪಕ ಬಾಲಕೃಷ್ಣ, ಸಿ.ಡಿ.ಪಿ.ಓ.ರವಿ, ಪಿ.ಡಿ.ಓ. ಶ್ರೀನಿವಾಸ್, ನಾಗೇಂದ್ರ, ವರ್ಷ. ಆರ್. ರೆಡ್ಡಿ, ನವೀನ್ ಜೆ.ಎಸ್. ಉಪಸ್ಥಿತರಿದ್ದರು.