ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಗೂಡಂಗಡಿಗಳ ತೆರವು ವಿರೋಧಿಸಿ ಹರಳಯ್ಯ(ಸಮಗಾರ) ಸಮಾಜದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಕೂಡಲೇ ತೆರವುಗೊಳಿಸದಿದ್ದರೆ ಪಟ್ಟಣದ ಎಲ್ಲ ನಾಗರಿಕರ ಸಹಕಾರದೊಂದಿಗೆ ಹೋರಾಟದ ನಡೆಸಬೇಕಾಗುತ್ತದೆ ಎಂದು ಪುರಸಭೆ ಸದಸ್ಯ ಮುತ್ತಣ್ಣ ಚಮಲಾಪೂರ ಎಚ್ಚರಿಕೆ ನೀಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಅನಧಿಕೃತ ಧರಣಿ ಸತ್ಯಾಗ್ರಹ ತೆರವು ಕುರಿತು ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆದ ಸರ್ವ ಸಮಾಜಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಠರಾವು ಪಾಸು ಮಾಡಿದ್ದಾಗಿದೆ. ಅದರಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿದ್ದಾರೆ. ಇದಕ್ಕೆ ಹಲವಾರು ಅಂಗಡಿಗಳ ಮಾಲೀಕರು ಸಹಕಾರ ನೀಡಿದ್ದಾರೆ. ಆದರೆ, ಬಸ್ ನಿಲ್ದಾಣದ ಬಳಿಯ ಹರಳಯ್ಯ(ಸಮಗಾರ) ಸಮಾಜದವರು ತೆರವು ಕಾರ್ಯಚರಣೆ ಅಂತಿಮ ಹಂತದ ವೇಳೆ ತಡೆಯಾಜ್ಞೆ ತಂದಿದ್ದಾರೆ. ಹೀಗಾಗ, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ತೆರವು ವಿರೋಧಿಸಿ ಮುಖ್ಯರಸ್ತೆಯನ್ನು ಬಂದ್ ಮಾಡಿ ಅನುಮತಿ ಇಲ್ಲದೇ ಅಹೋರಾತ್ರಿ ಧರಣಿ ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ಅವರ ಧರಣಿನಿರತರನ್ನು ಪೊಲೀಸ್ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ರಜಪೂತ ಸಮಾಜದ ಮುಖಂಡ ಸುರೇಶ ಹಜೇರಿ ಹಾಗೂ ಹಿರಿಯ ಮುಖಂಡ ಕಾಶಿನಾಥ ಮುರಾಳ ಮಾತನಾಡಿ, ರಸ್ತೆಯ ಮೇಲೆ ಧರಣಿಗೆ ಎಲ್ಲಿಯೂ ಅವಕಾಶವಿಲ್ಲ, ಕೂಡಲೇ ತೆರವುಗೊಳಿಸುವ ಕೆಲಸವನ್ನು ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಮಾಡುವಂತೆ ಒತ್ತಾಯಿಸಿದರು.ಹಿರಿಯ ಮುಖಂಡ ಎಂ.ಎಸ್.ಸರಶೆಟ್ಟಿ ಹಾಗೂ ಕಾಶಿರಾಯ ಮೋಹಿತೆ, ಪುರಸಭಾ ಸದಸ್ಯರಾದ ಪರಶುರಾಮ ತಂಗಡಗಿ, ಅಣ್ಣಾಜಿ ಜಗತಾಪ, ಕರವೇ ಸಂಘಟನೆಯ ಜೈಭೀಮ ಮುತ್ತಗಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲತೀಪ ಬೀಳಗಿ ಮಾತನಾಡಿದರು. ಪಿಎಸ್‌ಐ ಆರ್.ಎಸ್.ಭಂಗಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ೩ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಸದಸ್ಯರಾದ ಎಂ.ಕೆ.ಪಟ್ಟಣಶಟ್ಟಿ, ಮುಸ್ತಫಾ ಚೌಧರಿ, ಕಾಶೀನಾಥ ಸಜ್ಜನ, ರತನಸಿಂಗ್ ಕೊಕಟನೂರ, ಬಸನಗೌಡ ಮಾಲಿಪಾಟೀಲ, ಪ್ರಕಾಶ ಹಜೇರಿ, ಪ್ರಕಾಶ ಶೆಟ್ಟಿ, ಈಶ್ವರ ಹೂಗಾರ, ವಿಷ್ಣು ಸಾಳುಂಕೆ, ಮಂಜುನಾಥ ಶೆಟ್ಟಿ, ಸಂಭಾಜಿ ಡಿಸಲೆ, ಫಯಾಜ್ ಉತ್ನಾಳ, ವಿಠ್ಠಲ ಮೋಹಿತೆ, ಗೋವಿಂದ ಸಿಂಗ್ ಗೌಡಗೇರಿ, ಸಜ್ಜನ ಸಾಹುಕಾರ ಬ್ಯಾಲ್ಯಾಳ, ರವಿ ಕಟ್ಟಿಮನಿ, ದಸ್ತಗೀರ ಕೇಂಭಾವಿ, ಮಹಿಬೂಬ ಲಾಹೋರಿ, ರಾಮಪ್ಪ ಕಟ್ಟಿಮನಿ, ಭೀಮನಗೌಡ ಪಾಟೀಲ, ಸಂಜೀವ ಬರೆದೇನಾಳ, ಕಲ್ಲನಗೌಡ ಪಾಟೀಲ, ಸುಭಾಸ ಹೂಗಾರ, ಗುಂಡು ಜಗತಾಪ, ಗೋಪಾಲ ಕಟ್ಟಿಮನಿ, ತಿಪ್ಪಣ್ಣ ಸಜ್ಜನ ನದೀಮ ಕಡು, ಒಳಗೊಂಡು ವಿವಿಧ ಸಮಾಜದ ಮುಖಂಡರು ಇದ್ದರು.
೨೨ಟಿಎಲ್‌ಕೆ ೧ಚಿತ್ರ ವಿವರಣೆ : ತಾಳಿಕೋಟೆ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸರ್ವ ಸಮಾಜದ ಮುಖಂಡರ ಸಭೆಯಲ್ಲಿ ಪ್ರಭುಗೌಡ ಮದರಕಲ್ಲ ಮಾತನಾಡಿದರು. ಪಟ್ಟಣದ ಸೌಂದರ್ಯಕರಣದ ಅಭಿವೃದ್ದಿ ಮತ್ತು ದೃಷ್ಠಿಯಿಂದ ಪುರಸಭೆಯ ವತಿಯಿಂದ ಕಳೆದ ದಿ.೧೨ ರಿಂದ ೧೪ ರವರೆಗೆ ನಡೆಸಿದ ಪುಟ್ ಪಾತ್ ಮತ್ತು ಸಾರ್ವಜನಿಕ ಸ್ಥಳ ಅತೀಕ್ರಮಿಸಿಕೊಂಡ ಡಬ್ಬಾ ಅಂಗಡಿ, ಗೂಡಂಗಡಿಗಳ ತೆರವು ಕಾರ್ಯಚರಣೆ ವಿರೋಧಿಸಿ
ಕೋಟ್‌ಪಟ್ಟಣದ ಅಂದ ಹೆಚ್ಚಿಸಲು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯನ್ನು ಮುಂದುವರೆಸಲು ಜಿಲ್ಲಾಧಿಕಾರಿಗಳಿಗೆ ನ.17 ರಂದು ಒತ್ತಾಯಿಸಿದ್ದೇವು. ಆದರೆ, ಧರಣಿನಿರತರು ಸವರ್ಣಿಯರ ಜೊತೆಗೂಡಿ ಕೆಲವು ದಲಿತರು ದಲಿತರ ಮೇಲೆಯೇ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳಿ ಪಟ್ಟಣದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಕೂಡಲೇ ಪೊಲೀಸ್ ಅಧಿಕಾರಿಗಳು ಧರಣಿ ನಿರತರನ್ನು ತೆರವುಗೊಳಿಸಬೇಕು.ಪ್ರಭುಗೌಡ ಮದರಕಲ್ಲ, ರಡ್ಡಿ ಸಮಾಜದ ಮುಖಂಡ