ಚಿಂತನೆ ದೊಡ್ಡದಿದ್ದರೆ ಗುರಿ ಸಾಧನೆ ಸುಲಭ: ಬಿವೈಆರ್‌

| Published : Feb 23 2024, 01:51 AM IST

ಸಾರಾಂಶ

ಹೊಳೆಹೊನ್ನೂರು ಸಮೀಪದ ಮಲ್ಲಾಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗುಡ್ಡದ ಮಲ್ಲೇಶ್ವರ ಸಮುದಾಯ ಭವನಕ್ಕೆ ಗುರುವಾರ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಷಷ್ಠಿಪೂರ್ತಿ ಸಮಾರಂಭವನ್ನು ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿಯೇ ಆಚರಿಸಿಕೊಳ್ಳುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಖಚಿತವಾಗಿ ಹೇಳಿದರು.ಸಮೀಪದ ಮಲ್ಲಾಪುರದಲ್ಲಿ ಗುರುವಾರ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಚಿಂತನೆಗಳು ದೊಡ್ಡದಾಗಿದ್ದರೆ ಅಂದುಕೊಂಡ ಗುರಿ ಸುಲಭವಾಗಿ ಸಾಧಿಸಬಹುದು. ಗ್ರಾಮಸ್ಥರ ಒಗ್ಗಟಿನ ಫಲವಾಗಿ ಜಿಲ್ಲೆಯ ಜನತೆ ಮಲ್ಲಾಪುರದ ಕಡೆ ತಿರುಗಿ ನೋಡು ವಂತಹ ಭವ್ಯ ಭವನ ನಿರ್ಮಾಣವಾಗಿದೆ. ರಾಜ್ಯಕ್ಕೆ ಬರಗಾಲ ಬಂದಿರಬಹುದು ಆದರೆ ಧರ್ಮ ಕಾರ್ಯಗಳಿಗೆ ಸಹಕಾರ ನೀಡುವ ಕೈಗಳಿಗೆ ಎಂದಿಗೂ ಬರಗಾಲ ಬರುವುದಿಲ್ಲ. ಗ್ರಾಮೀಣದ ಹಳ್ಳಿಯೊಂದರಲ್ಲಿ ಗ್ರಾಮಸ್ಥರ ಸಹಕಾರ ಪಡೆದು 12 ಕೋಟಿ ರು. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಗ್ರಾಮಸ್ಥರ ಒಗ್ಗಟಿನ ಬಲಕ್ಕೆ ಭವನ ನಿರ್ಮಾಣ ಸಾಕ್ಷಿಯಾಗಿದೆ. ದೇವರು ಮೆಚ್ಚುವ ಕೆಲಸಗಳಿಗೆ ಎಂದಿಗೂ ವಿಘ್ನಗಳು ಎದುರಾಗುವುದಿಲ್ಲ ಎಂದರು.2 ಕೋಟಿ ರು. ವೆಚ್ಚದಲ್ಲಿ ಮಲ್ಲಾಪುರ-ಮೈದೊಳಲು ರಸ್ತೆ ರಸ್ತೆ ನಿರ್ಮಾಣ ಮಾಡಲಾಗಿದೆ. ಕೈಮರ-ಆನವೇರಿ ರಸ್ತೆಗೆ 11 ಕೋಟಿ ರು. ಅನುದಾನ ನೀಡಲಾಗಿದೆ. ಹಿರಿಮಾವುರದಮ್ಮ ದೇವಸ್ಥಾನ ಜೀರ್ಣೊದ್ಧಾರಕ್ಕೆ 6 ಕೋಟಿ ರು. ನೀಡಲಾಗಿದೆ, ಸೈದರಕಲ್ಲಹಳ್ಳಿಯಲ್ಲಿ ಸಮುದಾಯ ಭವನಕ್ಕೆ 2 ಕೋಟಿ ರು. ಮಂಜೂರಾಗಿದೆ. 1 ಕೋಟಿ ರು. ವೆಚ್ಚದಲ್ಲಿ ಆನವೇರಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಹೊಳೆಹೊನ್ನೂರು ಗ್ರಾ.ಪಂ.ಅನ್ನು ಪ.ಪಂ ಮೇಲ್ದರ್ಜೆಗೇರಿಸಿ ಅನುದಾನ ಮೀಸಲಿಡಲಾಗಿದೆ. ಬಿ.ಎಸ್ ಯಡಿಯೂರಪ್ಪವನರು ಹೊಸದುರ್ಗದ ಕುಂಚಿಟಿಗ ಪೀಠಕ್ಕೆ 2 ಕೋಟಿ ರು. ನೀಡಿದರು. ಮರಾಠ ಅಭಿವೃದ್ಧಿ ನಿಗಮವನ್ನು ಅಸ್ಥಿತ್ವಕ್ಕೆ ತಂದು ಸಮುದಾಯಗಳಿಗೆ ಬಲ ನೀಡಿದರು. ಮಹಿಳೆಯ ಪ್ರಾರ್ಥನೆಗೆ ವಿಶಿಷ್ಠ ಶಕ್ತಿ ಇದೆ. ಮಹಿಳೆಯರು ಮನೆಗಳಲ್ಲಿ ನಿತ್ಯ ದೇವರು ಪೂಜಿಸುವಾಗ ರಾಘಣ್ಣನಿಗೆ ಒಳ್ಳೆಯದಾಗಲಿ ಎಂದು ನನ್ನ ಹೆಸರಿನಲ್ಲಿ ಒಂದು ಹೂ ಹಾಕಿ ಪ್ರಾರ್ಥನೆ ಮಾಡಬೇಕು. ಮಲ್ಲಾಪುರ ದೇವಸ್ಥಾನದ ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಗ್ರಾಮೀಣ ಶಾಸಕಿ ಶಾರದಪರ‍್ಯಾ ನಾಯ್ಕ್ ಸಹಯೋಗದೊಂದಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿ, ಮಲ್ಲಾಪುರ ಸಮುದಾಯ ಭವನ ನಗರ ಕಲ್ಯಾಣ ಮಂಟಪಗಳಿಂತ ಯಾವುದರಲ್ಲೂ ಕಮ್ಮಿ ಇಲ್ಲ. ಗ್ರಾಮಸ್ಥರು ಒಂದಾಗಿ ಶಪಥ ಮಾಡಿದರೆ ಯಾವುದು ಅಸಾದ್ಯವಲ್ಲ ಎಂಬುದನ್ನು ತೊರಿಸಿದ ಗ್ರಾಮಸ್ಥರ ದೂರ ದೃಷ್ಠಿಯ ಚಿಂತನೆ ಸಕಾರ ರೂಪ ದೊರೆತಿದೆ. ಮುಂದಿನ ದಿನಗಳಲ್ಲಿ ಸಮುದಾಯ ಭವನಕ್ಕೆ ನಗರ ಪ್ರದೇಶಗಳಿಂದ ಬೇಡಿಕೆಗಳು ಬರುವುದರಲ್ಲಿ ಎರಡು ಮಾತಿಲ್ಲ ಎಂದರು.

ಮಾಜಿ ಶಾಸಕ ಕೆ.ಬಿ ಅಶೋಕ್‌ನಾಯ್ಕ್, ಮಾಜಿ ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲೇಶ್ ಹಾಗೂ ಶ್ರೀ ಗುಡ್ಡದ ಮಲ್ಲೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಗಾಮಸ್ಥರು ಉಪಸ್ಥಿತರಿದ್ದರು.