ಸಾರಾಂಶ
ಸರ್ಕಾರ ನೀಡುವ ಅನುದಾನ ಸದ್ಬಳಕೆಯಾಗಬೇಕು. ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸರ್ಕಾರ ನೀಡುವ ಅನುದಾನ ಸದ್ಬಳಕೆಯಾಗಬೇಕು. ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಶನಿವಾರ ತಾಲೂಕಿನ ಆಸಂಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಗುಳೇದಗುಡ್ಡ ತಾಲೂಕು ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಲೂರ ಎಸ್.ಪಿ. ವಾಯಾ ಅಲ್ಲೂರ ಎಸ್.ಪಿ.ಜಿ. ಮುಖ್ಯರಸ್ತೆ ಕಿ.ಮೀ.0.00 ದಿಂದ 5.50ರವರೆಗೆ ಆಯ್ದ ಭಾಗಗಳಲ್ಲಿ ₹ 1 ಕೋಟಿ ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಗ್ರಾಮೀಣ ಭಾಗದ ಜನತೆಯ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳುವ ಯೋಜನೆಗಳ ಸದುಪಯೋಗವಾಗಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕಳಪೆ ಕಾಮಗಾರಿ ಎಂದು ಗ್ರಾಮಸ್ಥರಿಂದ ದೂರುಗಳು ಬಂದರೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖಾ ಅಭಿಯಂತರ ದೇವೇಂದ್ರಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮುಖಂಡರಾದ ವೈ.ಆರ್. ಹೆಬ್ಬಳ್ಳಿ, ಲೆಂಕೆಪ್ಪ ಹಿರೇಕುರುಬರ, ಯಮನಪ್ಪ ತಳವಾರ, ಹನುಮಂತ ಡೊಳ್ಳಿನ, ಸಿದ್ದಪ್ಪ ಡೊಳ್ಳಿನ, ದ್ಯಾವಪ್ಪ ಬಗಲಿ, ಚೌರಪ್ಪ ಹುನಗುಂದ, ರಾಮಣ್ಣ ಮುತ್ತಲದಿನ್ನಿ, ಆಸಂಗೆಪ್ಪ ನಕ್ಕರಗುಂದಿ, ಸಕ್ರಪ್ಪ ಮಾದರ, ಯಲ್ಲಪ್ಪ ಮಾದರ ಸೇರಿದಂತೆ ಇತರರು ಇದ್ದರು.