ಸಾರಾಂಶ
ಯಾದಗಿರಿಯ ಜಿಲ್ಲಾ ಎಂಸಿಎಂಸಿ ಕೇಂದ್ರ ಹಾಗೂ ದೂರು ಸ್ವೀಕಾರ ಕೇಂದ್ರಕ್ಕೆ ವೀಕ್ಷಕರು ಭೇಟಿ ನೀಡಿ ವಿವಿಧ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತ್ತು 36-ಶೋರಾಪೂರ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ, ರಾಯಚೂರು ಲೋಕಸಭಾ ಕ್ಷೇತ್ರ ಮತ್ತು 36-ಶೋರಾಪೂರ ವಿಧಾನಸಭೆ ಸಾಮಾನ್ಯ ವೀಕ್ಷಕರಾಗಿ ಅಜಯ ಪ್ರಕಾಶ ಅವರು ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ.ನಾಗರಿಕರು ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಯಾವುದೇ ದೂರು, ಸಲಹೆ ಹಾಗೂ ಅಹವಾಲುಗಳಿದ್ದಲ್ಲಿ, ನೇರವಾಗಿ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ. 06-ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 36-ಶೋರಾಪೂರ ವಿಧಾನಸಭಾ ಕ್ಷೇತ್ರ, 37-ಶಹಾಪುರ, 38-ಯಾದಗಿರಿ ಹಾಗೂ 36-ಶೋರಾಪೂರ (ಪರಿಶಿಷ್ಟ ಪಂಗಡ) ವಿಧಾನಸಭೆ ಉಪ ಚುನಾವಣೆ ಸಾಮಾನ್ಯ ವೀಕ್ಷಕರಾಗಿ ಆಗಮಿಸಿರುವ ಅಜಯ ಪ್ರಕಾಶ ಅವರಿಗೆ ದೂ: 7411704584ಗೆ ನೇರವಾಗಿ ವೀಕ್ಷಕರಿಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದರು.
ಸಾಮಾನ್ಯ ವೀಕ್ಷಕರು ಶನಿವಾರ ಜಿಲ್ಲಾ ಎಂಸಿಎಂಸಿ ಕೇಂದ್ರಕ್ಕೆ, ದೂರು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.ಪೊಲೀಸ್ ವೀಕ್ಷಕರ ಆಗಮನ :
ಲೋಕಸಭಾ ಹಾಗೂ ಶೋರಾಪೂರ ಉಪ ಚುನಾವಣೆಗೆ ಪೊಲೀಸ್ ವೀಕ್ಷಕರಾಗಿ ಸತೀಶಕುಮಾರ ಅವರು ಆಗಮಿಸಿದ್ದಾರೆ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.