ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ತ್ರೀ ಪುರುಷರು ಸೃಷ್ಟಿ ನಿರ್ಮಾತೃಗಳು. ಮೇಲು-ಕೀಳು ಎನ್ನದೆ ಸಹಬಾಳ್ವೆ ಮಾಡಿದಲ್ಲಿ ಬದುಕು ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ಹಾಗೂ ಶ್ರೀ ವರದಾನೇಶ್ವರಿ ಮಹಿಳಾ ಸಂಘ, ವಿದ್ಯಾಗಿರಿ ಬಾಗಲಕೊಟೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಶ್ರಮದ 19ನೇ ವಾರ್ಷಿಕೋತ್ಸವದಲ್ಲಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
''ಶರಣರ ಚಿಂತನೆಯಲ್ಲಿ ಮಹಿಳೆ'' ವಿಷಯ ಕುರಿತು ಉಪನ್ಯಾಸ ನೀಡಿದ ಶೈಲಜಾ ಲಿಂಗದ, ಬಸವಾದಿ ಶರಣರು ಮಹಿಳೆಗೆ ಸಮಾಜದಲ್ಲಿ ಸಮಾನತೆಯನ್ನು ತಂದುಕೊಟ್ಟು, ಅವಳನ್ನು ದೇವರ ಸ್ಥಾನಕ್ಕೇರಿಸಿದರು ಎಂದು ಹೇಳಿದರು.ಬಾಗಲಕೋಟೆ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿಕಿರಣ ದಾಸ ಮಾತನಾಡಿ, ಮಹಿಳೆ ತಾನು ತಾನೇ ಆಗಿ ಕರ್ತವ್ಯ ನಿಭಾಯಿಸಿದಲ್ಲಿ ಅವಳಿಗೆ ಸ್ಥಾನ-ಮಾನ ತಾನೇ ದೊರೆಯುತ್ತವೆ ಎಂದು ಹೇಳಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಬಸವ ತತ್ವ ಪ್ರಸಾರಕರಾದ ಬಸವಗೀತ ತಾಯಿ ನಾಗನೂರ ಅವರು, ಬಸವಣ್ಣನವರು ಮಹಿಳಾ ಸಮಾನತೆಯ ಕ್ರಾಂತಿ ಮಾಡದಿದ್ದರೆ ಸ್ತ್ರೀ ಇಂದು ಸಮಾನತೆಯ ಅನುಭವಿಸುವುದು ಅಸಾಧ್ಯವಾಗಿರುತ್ತಿತ್ತು, ಮಹಿಳೆ ಬಸವಣ್ಣನವರಿಗೆ ಋಣಿಯಾಗಿರಬೇಕೆಂದರು.ಸಾನ್ನಿಧ್ಯ ವಹಿಸಿದ್ದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮಹಿಳೆಗೆ ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇಂಥ ಸಂಗತಿಯನ್ನು ಜಗತ್ತಿನ ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ, ತಾಯಿಯ ಸ್ಥಾನ ದೊಡ್ಡದು ಎಂದರು.
ಬೆಳಗ್ಗೆ 9 ಗಂಟೆಗೆ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್. ಪಾಟೀಲ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಎಡೆಯೂರು ಸಿದ್ಧಲಿಂಗೇಶ್ವರ, ಶಿರಡಿ ಸಾಯಿಬಾಬಾ ಹಾಗೂ ಗುಡ್ಡಾಪುರ ದಾನಮ್ಮದೇವಿಯ ಪಲ್ಲಕ್ಕಿ ಉತ್ಸವ, ಮಹಾಕುಂಭ ಮೇಳ ಜರುಗಿದವು.ಡಾ.ಶಿವಾನಂದ ಸ್ವಾಮೀಜಿ ಕೊಣ್ಣೂರ, ಶ್ರೀ ವರದಾನೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ ಉಪಸ್ಥಿತರಿದ್ದರು. ಶ್ರೀ ವರದಾನೇಶ್ವರಿ ಮಹಿಳಾ ಸಂಘದ ಸೋದರಿಯರು ಸ್ವಾಗತ ಗೀತೆ ಹಾಡಿದರು. ವೀಣಾ ಮೋಟಗಿ ಸ್ವಾಗತಿಸಿದರು. ವಿಮಲಾ ಹಾಲಪ್ಪನವರ, ಅಕ್ಕಮ್ಮ ಜಿಗಳೂರ ಪರಿಚಯಿಸಿದರು. ಲತಾ ಶೀಲವಂತ ವಂದಿಸಿದರು. ಪಾರ್ವತಿ ಜೈನಕೆರೆ ಹಾಗೂ ಸವಿತಾ ಲಂಕೆನ್ನವರ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))