ಶ್ರೀರಾಮನ ಆದರ್ಶ ಪಾಲಿಸಿದರೆ ನಮ್ಮ ಜೀವನ ಸಾರ್ಥಕ: ಸ್ವಾಮೀಜಿ

| Published : Jan 23 2024, 01:45 AM IST

ಶ್ರೀರಾಮನ ಆದರ್ಶ ಪಾಲಿಸಿದರೆ ನಮ್ಮ ಜೀವನ ಸಾರ್ಥಕ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ರಸ್ತೆಯ ಭಿಕ್ಷುದ ಮಠದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನ ಅಂಗವಾಗಿ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈರಾಮ್, ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಭಾವ ಮೆರೆದರು. ಮಕ್ಕಳು ರಾಮಾ, ಸೀತಾ, ಲಕ್ಷ್ಮಣರ ವೇಷ ಧರಿಸಿದು ವಿಶೇಷವಾಗಿ ಆಕರ್ಷಿತರಾಗಿದ್ದರು. ನಂತರ ಬಂದ ಭಕ್ತರಿಗೆ ಮಜ್ಜಿಗೆ ಪಾನಕ ಹಾಗೂ ಫಲಹಾರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರು ಶ್ರೀರಾಮನ ಆದರ್ಶ ವ್ಯಕ್ತಿತ್ವ ಹಾಗೂ ಗುಣಗಳನ್ನುಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಗುರುವಿನ ಪುರದ ಜಗದೀಶ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಭಿಕ್ಷುದ ಮಠದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನ ಅಂಗವಾಗಿ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈರಾಮ್, ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಭಾವ ಮೆರೆದರು.

ಶ್ರೀರಾಮನ ವೇಷಧಾರಿ ಶಾಲಾ ಮಕ್ಕಳೊಂದಿಗೆ ಅನ್ನಸಂತರ್ಪಣೆ ನಡೆಸಿರುವುದು ರಾಮನ ಉತ್ಸವಕ್ಕೆ ಮೆರಗು ಸಿಕ್ಕಿದೆ. ಎಲ್ಲರಿಗೂ ಶ್ರೀರಾಮನ ರಕ್ಷೆ ಸಿಗಲಿ ಎಂದು ಪ್ರಾರ್ಥಿಸಿದರು.

ಮಕ್ಕಳು ರಾಮಾ, ಸೀತಾ, ಲಕ್ಷ್ಮಣರ ವೇಷ ಧರಿಸಿದು ವಿಶೇಷವಾಗಿ ಆಕರ್ಷಿತರಾಗಿದ್ದರು. ನಂತರ ಬಂದ ಭಕ್ತರಿಗೆ ಮಜ್ಜಿಗೆ ಪಾನಕ ಹಾಗೂ ಫಲಹಾರ ನೀಡಲಾಯಿತು.

ಈ ವೇಳೆ ಎಚ್.ಎಂ.ಪಾಲಾಕ್ಷಪ್ಪ, ರೇವಣ್ಣ, ಕೆ.ಎನ್.ನಾಗೇಂದ್ರ, ಮಂಜು, ವಿನಯ, ಕೆ.ಎಸ್.ರಾಜು, ನಾಗೇಶ, ನಾಗಣ್ಣ, ಎಚ್‌.ಎಂ.ಆನಂದ್ ಕುಮಾರ್, ಅಶ್ವಥ್ ನಾರಾಯಣ, ಕೆವಿಟಿ ಕುಮಾರ, ಪುಟ್ಟರಾಜು, ಅಕ್ಕಿ ಬಾಬು ಸೇರಿದಂತೆ ಇನ್ನೂ ಇತರರು ಇದ್ದರು.

ರಾಮೋತ್ಸವ ಭಕ್ತರಿಗೆ ಪ್ರಸಾದ ವಿನಿಯೋಗಹಲಗೂರು:ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಾಮಭಕ್ತರು, ಗ್ರಾಮಸ್ಥರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದರು.ಹಲಗೂರು, ಕೊನ್ನಾಪುರ ರಾಮ ಮಂದಿರ ದೇವಸ್ಥಾನ, ಬಾಣಸಮುದ್ರ, ನಡಕಲುಪುರ, ನಂಜೇಗೌಡನ ದೊಡ್ಡಿ, ಹಾಡ್ಲಿ ಸರ್ಕಲ್ ಮತ್ತು ಸಮೀಪದ ದಳವಾಯಿ ಕೋಡಿಹಳ್ಳಿ ಸೇರಿದಂತೆ ಇನ್ನು ಹಲವು ಗ್ರಾಮಗಳಲ್ಲಿ ರಾಮಭಕ್ತರು ಹಾಗೂ ಗ್ರಾಮಸ್ಥರಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.ದಳವಾಯಿ ಕೊಡಹಳ್ಳಿಯ ಸಿದ್ದಲಿಂಗಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಈ ಕಾಲಘಟ್ಟದಲ್ಲಿ ಶ್ರೀರಾಮನ ಅಯೋಧ್ಯೆ ಮಂದಿರದ ಉದ್ಘಾಟನೆಯಲ್ಲಿ ನಾವು ಪಾಲ್ಗೊಂಡಿರುವುದು ಜೀವನ ಪಾವನ ವಾದಂತೆ. ಶ್ರೀ ರಾಮಮಂದಿರ ಸ್ಥಾಪನೆ ಆಗಬೇಕು ಅನ್ನೋದು ನಮ್ಮ 500 ವರ್ಷಗಳ ಕನಸು ಇಂದು ನನಸಾಗುತ್ತಿದೆ ಎಂದರು. ಈ ವೇಳೆ ಶ್ರೀ ರಾಮದೇವರ ಭಕ್ತರು ಅಪಾರ ಸಂಕಲ ಭಾಗವಹಿಸಿದ್ದರು.