ದಸರಾ ಉದ್ಘಾಟಿಸುವುದಾದರೆ ಬಾನು ಕುಂಕುಮ ಇಟ್ಟು ಬರಲಿ

| Published : Sep 11 2025, 12:03 AM IST

ಸಾರಾಂಶ

ಬಾನು ಮುಷ್ತಾಕ್ ಅವರು ಒಳ್ಳೆ ಬರಹಗಾರರು ಅದರಲ್ಲಿ ಎರಡು ಮಾತಿಲ್ಲ. ಇವರು ಬರೆದಿರುವ ಕೃತಿಯನ್ನು ಕೊಡಗಿನ ದೀಪ ಭಾಸ್ತಿ ಅವರು ಇಂಗ್ಲಿಷ್ ಅನುವಾದ ಮಾಡಿರುವುದರಿಂದ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆ ಪಡುವ ವಿಷಯ. ಬಾನು ಮುಸ್ತಕ್ ಅವರು ಮುಸ್ಲಿಂ ಮತ್ತು ಹಿಂದೂ ಧರ್ಮದ ಆಚರಣೆ ವಿರುದ್ಧ ಈ ಹಿಂದೆಯೇ ವಿರೋಧಿ ನಿಲುವು ಹೊಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹವರಿಂದ ನಾಡಿನ ಆರಾಧ್ಯ ದೇವಿ ಶ್ರೀ ಚಾಮುಂಡೇಶ್ವರಿ ಅವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಹಿಂದೂ ಸಂಪ್ರದಾಯದಂತೆ ಬಾನು ಮುಷ್ತಾಕ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಬೇಕು. ಇಲ್ಲವಾದರೆ ಸರ್ಕಾರ ನೀಡಿರುವ ಅಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸುವುದು ಸೂಕ್ತ ಎಂದು ಶಾಸಕ ಎ.ಮಂಜು ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಒಳ್ಳೆ ಬರಹಗಾರರು ಅದರಲ್ಲಿ ಎರಡು ಮಾತಿಲ್ಲ. ಇವರು ಬರೆದಿರುವ ಕೃತಿಯನ್ನು ಕೊಡಗಿನ ದೀಪ ಭಾಸ್ತಿ ಅವರು ಇಂಗ್ಲಿಷ್ ಅನುವಾದ ಮಾಡಿರುವುದರಿಂದ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆ ಪಡುವ ವಿಷಯ. ಬಾನು ಮುಸ್ತಕ್ ಅವರು ಮುಸ್ಲಿಂ ಮತ್ತು ಹಿಂದೂ ಧರ್ಮದ ಆಚರಣೆ ವಿರುದ್ಧ ಈ ಹಿಂದೆಯೇ ವಿರೋಧಿ ನಿಲುವು ಹೊಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹವರಿಂದ ನಾಡಿನ ಆರಾಧ್ಯ ದೇವಿ ಶ್ರೀ ಚಾಮುಂಡೇಶ್ವರಿ ಅವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಚಾಲನೆ ನೀಡುವುದೇ ಆದರೆ ಅವರು ಕುಂಕುಮ, ಅರಿಶಿಣ, ಹೂವನ್ನುತೊಟ್ಟು ದೇವಿಯ ಪೂಜಾ ವಿಧಾನ ನೆರವೇರಿಸಲಿ ಎಂದು ಸಲಹೆ ನೀಡಿದರು.ರಾಜ್ಯ ಸರ್ಕಾರ ಕೊಡಗಿನ ಸಾಹಿತ್ಯ ವಲಯಕ್ಕೆ ಅನ್ಯಾಯ ಮಾಡಿದೆ. ಓಲೈಕೆ ಮನೋಭಾವದಿಂದಲೇ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ ಎಂದು ಶಾಸಕ ಮಂಜು ಆಕ್ರೋಶ ವ್ಯಕ್ತಪಡಿಸಿದರು.