ವಾಲ್ಮೀಕಿ ಆದರ್ಶಗಳ ಪಾಲಿಸಿದರೆ ಜಯಂತಿಗೆ ಅರ್ಥ

| Published : Oct 18 2024, 12:00 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.

- ಹರಿಹರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್‌ - - - ಕನ್ನಡಪ್ರಭ ವಾರ್ತೆ ಹರಿಹರ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ಎಸ್‍ಜೆವಿಪಿ ಕಾಲೇಜಿನ ಎಂ.ಬಿ. ಗುರುಸಿದ್ದಸ್ವಾಮಿ ಸಭಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆ ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಪ್ರೀತಿ, ಸಹೋದರತ್ವ, ವಿಶ್ವಾಸ, ಭಕ್ತಿ, ಆಡಳಿತ, ತ್ಯಾಗ ಹಾಗೂ ಸಮರ್ಪಣೆಯ ಬಗ್ಗೆ ವಿವರಿಸಿರುವುದು ಇಡೀ ಮಾನವಕುಲದ ಜೀವನಕ್ಕೆ ದಾರಿದೀಪವಾಗಿದೆ ಹೇಳಿದರು.

ಉಪನ್ಯಾಸ ನೀಡಿದ ಎಂಕೆಇಟಿ ಮುಖ್ಯಶಿಕ್ಷಕ ಡಿ.ತಿಪ್ಪಣ್ಣ ರಾಜು ಮಾತನಾಡಿ, ವಾಲ್ಮೀಕಿ ಎಂದರೆ ಪರಿವರ್ತನೆ, ಜಗತ್ತಿನ ಬಹುತೇಕ ಎಲ್ಲ ಭಾಷೆಗಳಿಗೆ ರಾಮಾಯಾಣ ಮಹಾಕಾವ್ಯ ತರ್ಜುಮೆ ಆಗಿರುವುದು ನಮ್ಮ ಹೆಮ್ಮೆ. ಭಾರತದಲ್ಲಿ ಆನೇಕ ಋಷಿಗಳು, ಕವಿಗಳು ಇದ್ದಾರೆ. ಆದರೆ, ಒಬ್ಬ ಋಷಿಯು ಕವಿಯಾಗಿ, ಇತಿಹಾಸಕಾರನಾಗಿ, ಶಿಕ್ಷಣತಜ್ಞನಾಗಿ ಮಹರ್ಷಿ ಆಗಿದ್ದು ವಾಲ್ಮೀಕಿಯವರು ಮಾತ್ರ. ಅವರು ಆದಿಕವಿಯೂ ಆಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ವಾಲ್ಮೀಕಿ ಅವರನ್ನು ಭುವನಭಾಗ್ಯ ಎಂದು ಬಣ್ಣಿಸಿದ್ದಾರೆ ಎಂದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದ ಆರಂಭಕ್ಕೂ ಮುನ್ನ ನಗರದ ಹರಿಹರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು.

ನಗರಸಭಾ ಅಧ್ಯಕ್ಷೆ ಕವಿತಾ ಬೇಡರ್, ವಾಣಿಜ್ಯ ಇಲಾಖೆ ಉಪ ಆಯುಕ್ತ ಮಂಜುನಾಥ್, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್, ತಾಪಂ ಇಒ ಎಸ್.ಪಿ. ಸುಮಲತಾ ಸಮಾಜ ಕಲ್ಯಾಣ ಇಲಾಖೆಯ ಪಿ.ಆರ್. ರಾಮಕೃಷ್ಣ, ಬಿಇಒ ಡಿ. ದುರುಗಪ್ಪ, ನಗರಸಭಾ ಸದಸ್ಯ ದಿನೇಶ್‍ಬಾಬು, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೆ.ಆರ್. ರಂಗಪ್ಪ, ನಗರಾಧ್ಯಕ್ಷರಾದ ಪಾಲಾಕ್ಷಪ್ಪ, ಪಾರ್ವತಿ, ಮುಖಂಡರಾದ ಕೆ.ಬಿ. ಮಂಜುನಾಥ್, ಹಂಚಿನ ನಾಗಣ್ಣ, ಆಟೋ ರಾಜು ಹಾಗೂ ವಿವಿಧ ಇಲಾಖೆಯ ಆಧಿಕಾರಿಗಳು ಮತ್ತು ವಾಲ್ಮೀಕಿ ಸಮಾಜದ ಜನತೆ ಇದ್ದರು.

- - - -17ಎಚ್‍ಆರ್‍ಆರ್1: ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.

-17ಎಚ್‍ಆರ್‍ಆರ್1ಎ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹರಿಹರ ನಗರದ ಹರೀಹರೇಶ್ವರ ದೇವಸ್ಥಾನದಿಂದ ಆರಂಭವಾದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು.