ಸಾರಾಂಶ
ಸಾಮಾನ್ಯ ಮನುಷ್ಯ ಕೂಡ ತನ್ನ ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಹಾಗೂ ಛಲ ಇದ್ದರೆ ಮಾತ್ರ ಏನಾದರೂ ಸಾಧಿಸಬಹುದು ಎಂಬುದಕ್ಕೆ ಬೀಳಗಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಎನ್. ಪಾಟೀಲರೇ ಸಾಕ್ಷಿ ಎಂದು ವಿರಕ್ತಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಸಾಮಾನ್ಯ ಮನುಷ್ಯ ಕೂಡ ತನ್ನ ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಹಾಗೂ ಛಲ ಇದ್ದರೆ ಮಾತ್ರ ಏನಾದರೂ ಸಾಧಿಸಬಹುದು ಎಂಬುದಕ್ಕೆ ಬೀಳಗಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಎನ್. ಪಾಟೀಲರೇ ಸಾಕ್ಷಿ ಎಂದು ವಿರಕ್ತಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಸ್ವಾಮಿ ವಿವೇಕಾಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಬೀಳಗಿ ಇದರ ೧೮ನೇ ನೂತನ ಶಾಖೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಬವಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರು ಬೀಳಗಿಯಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸಣ್ಣ ಪ್ರಮಾಣದ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಈ ಅದು ಸಾವಿರಾರು ಮಕ್ಕಳ ಬಾಳಿಗೆ ಬೆಳಕು ಚಲ್ಲುವ ವಿದ್ಯಾಕಾಶಿಯಾಗಿ ಮಾರ್ಪಟ್ಟಿದೆ. ಶಿಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಬ್ಯಾಂಕ ಹಾಗೂ ಅನ್ನದಾತ ಕೇಂದ್ರಗಳನ್ನು ತರೆದು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮಾಡುವ ಸಾಮಾಜಿಕ ಸೇವೆಗೆ ಮುಂಬರುವ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಪ್ರವೇಶ ಮಾಡುವ ಮೂಲಕ ಅವರು ಇನ್ನಷು ಜನರ ಸೇವೆಗೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ ಮಾತನಾಡಿ. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎನ್. ಪಾಟೀಲ ತಮ್ಮ ಬಾಲ್ಯ ಜೀವನದಲ್ಲಿ ಕಷ್ಟಗಳನ್ನು ಮೆಟ್ಟಿನಿಂತು ಅವರು ಶೈಕ್ಷಣಿಕ, ಸಹಕಾರಿ, ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡುವ ಮೂಲಕ ಅವರು ಅಪರವಾದ ಸಾಧನೆ ಮಾಡಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಅಧ್ಯಕ್ಷವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಬ್ಯಾಂಕ ಜನಸಾಮಾನ್ಯರ ಬ್ಯಾಂಕಾಗಿದೆ. ಇದರ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಬ್ಯಾಂಕ ₹೩.೭೯ ಕೋಟಿ ಲಕ್ಷ ಶೇರು ಬಂಡವಾಳ, ₹೨.೨೩ ಲಕ್ಷ ದುಡಿಯುವ ಬಂಡವಾಳ, ₹೪೬೧೯ ಲಕ್ಷ ಹೂಡಿಕೆ, ₹೪.೯೪ ಕೋಟಿ ನಿಧಿಗಳು, ಪ್ರಸಕ್ತ ಸಾಲಿನಲ್ಲಿ ಅಂದಾಜು ₹೧.೭೭ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕ ಸಲಹೆ, ಗ್ರಾಹಕರ ಮತ್ತು ಠೇವುದಾರರ ಪ್ರೀತಿ ವಿಶ್ವಾಸ ಮತ್ತು ಬ್ಯಾಂಕಿನ ಸಿಬ್ಬಂದಿ ಕಾರ್ಯ ನಿಷ್ಠೆಯಿಂದ ಮಾತ್ರ ಸಾಧ್ಯವಾಗಿದೆ. ಗ್ರಾಹಕರ ಬೇಡಿಕೆಯಂತೆ ಮತ್ತೆ ಎರಡು ಶಾಖೆಗಳನ್ನು ಶಿಘ್ರದಲ್ಲಿ ತರೆಯಲಾಗುವುದು ಎಂದು ಹೇಳಿದರು.ದಯನಂದ ಪಾಟೀಲ, ನಿವೃತ್ತ ಉಪ ನಿದೇಶಕ ಎಂ.ಜಿ. ದಾಸರ, ಚಂದ್ರಶೇಖರ ಕೋಟಿ, ಪಾಂಡು ಭೂಸರಡ್ಡಿ, ಗೀರಿಶ ಖಸಗಲ್ಲ, ಅಪ್ಪಣ್ಣ ರೂಗಿ, ಸಂಗಮೇಶ ಕಾತರಕಿ, ಮನೋಹರ ತಿಮ್ಮಸಾನಿ, ಯಲ್ಲಪ್ಪ ಮೂನ್ನೂಳ್ಳಿ ಸಾಂಬ್ರಾಟ್ ನಿಂಬಾಳ್ಕರ, ನಂದಾ ಸುರಗಿಮಠ, ಲತಾ ಡಬರಿ, ಪ್ರಧಾನ ವ್ಯವಸ್ಥಾಪಕ ಪಿ.ಸಿ. ಕಡಕೋಳ, ಮೇಲ್ವಿಚಾಕ ಎಂ.ಎಸ್. ಬೆಳವಲ್ಲ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))