ಕಣ್ಣಿನ ಸಮಸ್ಯೆ ಬಂದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

| Published : Aug 19 2025, 01:01 AM IST

ಕಣ್ಣಿನ ಸಮಸ್ಯೆ ಬಂದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಅತಿಯಾಗಿ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿವೆ.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣವೇ ನಮ್ಮ ಆಸ್ಪತ್ರೆಗೆ ಮೊದಲು ಸಹಕಾರ ತೋರಿದ್ದು. ಪ್ರಾರಂಭದಲ್ಲಿ ನಾಲತವಾಡ ಪಟ್ಟಣದಲ್ಲಿ ಶಿಬಿರಗಳನ್ನು ನಡೆಸಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲಿಂದಲೇ ಅನುಗ್ರಹ ಆಸ್ಪತ್ರೆ ಬೆಳೆಯಲು ಪ್ರಾರಂಭವಾಯಿತು ಎಂದು ವಿಜಯಪುರ ಅನುಗ್ರಹ ಆಸ್ಪತ್ರೆ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ ಹೇಳಿದರು.

ಪಟ್ಟಣದ ಜಟ್ಟಿಂಗರಾಯ ಜಾತ್ರೆಯ ನಿಮಿತ್ತ ಅನುಗ್ರಹ ವ್ಹೀಜನ್ ಫೌಂಡೇಶನ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಸಹಯೋಗದಲ್ಲಿ ಸೋಮವಾರ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಅತಿಯಾಗಿ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿವೆ. ವಿಶೇಷವಾಗಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ದೃಷ್ಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಿಯಮಿತ ಕಣ್ಣಿನ ತಪಾಸಣೆ ಮಾಡುವುದರಿಂದ ಹಾಗೂ ಆಹಾರದಲ್ಲಿ ಹಸಿರು ತರಕಾರಿ, ಕ್ಯಾರೆಟ್, ಹಣ್ಣುಗಳನ್ನು ಸೇರ್ಪಡೆ ಮಾಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಬಹುದು. ಕಣ್ಣಿನಲ್ಲಿ ನೋವು, ನೀರು ಬರುವುದು, ಅಸ್ಪಷ್ಟ ದೃಷ್ಟಿ, ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅನೇಕರು ತಡವಾಗಿ ಆಸ್ಪತ್ರೆಗೆ ಬಂದು ಶಾಶ್ವತ ಅಂಧತ್ವಕ್ಕೀಡಾಗುತ್ತಾರೆ. ಆದ್ದರಿಂದ ಸಮಯಕ್ಕೆ ತಪಾಸಣೆ ಅತ್ಯಗತ್ಯ ಎಂದರು.

ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿರುವ ರೋಗಿಗಳನ್ನು ಗುರುತಿಸಿ, ಅನುಗ್ರಹ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರು. ಈ ವೇಳೆ ಬಸವರಾಜ ಡೇರೆದ, ಜಗದೀಶ ಡೇರೆದ, ಬಾಬು ಡೇರೆದ, ಜುಮ್ಮಣ್ಣ ಜೋಗಿ, ಹಣಮಂತರ ಕುರಿ, ಸೋಮು ಬಡಿಗೇರ, ರಜಾಕ ನಾಯ್ಕೋಡಿ, ಬುಡ್ಡೇಸಾಬ ತಂಗಡಗಿ, ರಫೀಕ ಡಖನಿ, ಅಂಬ್ರಪ್ಪ ಗಂಗನಗೌಡರ ಸೇರಿ ಇತರರು ಇದ್ದರು.