ಸಾರಾಂಶ
ಶ್ರೀ ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ನಿಮಿತ್ತ ಶ್ರೀಮಠದಲ್ಲಿ ಪ್ರತಿ ವರ್ಷ ವಿವಿಧ ವೃತ್ತಿಗಳ 25 ಕಾಯಕಯೋಗಿಗಳನ್ನು ಸತ್ಕರಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಇಳಕಲ್ಲ
ಶ್ರೀ ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ನಿಮಿತ್ತ ಶ್ರೀಮಠದಲ್ಲಿ ಪ್ರತಿ ವರ್ಷ ವಿವಿಧ ವೃತ್ತಿಗಳ 25 ಕಾಯಕಯೋಗಿಗಳನ್ನು ಸತ್ಕರಿಸಲಾಗುತ್ತದೆ. ಈಗಾಗಲೇ 25 ಜನ ನೇಕಾರರು, 25 ಜನ ಶಿಕ್ಷಕರು, 25 ಜನ ಸೈನಿಕರನ್ನು ಶ್ರೀಮಠ ಗೌರವಿಸಿದೆ. ಸೋಮವಾರ ಇಳಕಲ್ಲ ತಾಲೂಕಿನ 25 ರೈತ ದಂಪತಿಗೆ ಸತ್ಕರಿಸಿ ಗೌರವಿಸಲಾಯಿತು. ಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ, ಆಳಂದ ಶಾಸಕ ಬಿ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ರೈತ ಸಂಪತಿಯನ್ನು ಸತ್ಕರಿಸಿ ಗೌರವಿಸಿದರು.ಬಳಿಕ ಆಶೀರ್ವಚನ ನೀಡಿದ ಗುರುಮಹಾಂತ ಶ್ರೀಗಳು, ರೈತ ದೇಶದ ಜನರಿಗೆ ಅನ್ನದಾತ. ಆದರೆ ಆತ ಬೆಳೆಗೆ ಯೋಗ್ಯ ಬೆಲೆ ಸಿಗದೇ ತೊಂದರೆಯಲ್ಲಿದ್ದಾನೆ. ಸರ್ಕಾರ ರೈತರ ಅನುಕೂಲಕ್ಕೆ ಅನೇಕ ಸೌಲಭ್ಯಗಳನ್ನು ನೀಡಿ ರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.